Asianet Suvarna News Asianet Suvarna News

Lata Mangeshkar: ಎಲಾ ಹುಡುಗಿಯೆ! ಲತಾ ಮಂಗೇಶ್ಕರ್​ ದನಿಯನ್ನೇ ಪ್ರಶ್ನಿಸಿ ಮಾಡಿದ್ಲಲ್ಲಾ ಟ್ವೀಟ್​!

ಗಾನಕೋಗಿಲೆ ಲತಾ ಮಂಗೇಶ್ಕರ್​ ಅವರ ದನಿಗೆ ಮರುಳಾದವರು ಇಲ್ಲವೆನ್ನಬಹುದೇನೋ. ಆದರೆ ಇವರ ಕಂಠಮಾಧುರ್ಯವನ್ನೇ ಪ್ರಶ್ನಿಸಿರುವ ಟ್ವೀಟ್​ ಒಂದು ವೈರಲ್​ ಆಗಿದೆ.  ಏನಿದೆ ಅದರಲ್ಲಿ?
 

A Girl Insulted in tweet to Lata Mangeshkar
Author
First Published Feb 2, 2023, 1:20 PM IST

ಭಾರತ ಸಂಗೀತ ಲೋಕದ ದಂತಕಥೆ, ಗಾನ ಕೋಗಿಲೆ ಲತಾ ಮಂಗೇಶ್ಕರ್ (Lata Mangeshkar) ಯಾರಿಗೆ ತಾನೇ ಗೊತ್ತಿಲ್ಲ. ಇವರ ಖ್ಯಾತಿ ಭಾರತದಲ್ಲಿ ಮಾತ್ರವಲ್ಲದೇ ವಿದೇಶಕ್ಕೂ ಪಸರಿಸಿದೆ.  ಸಾವಿರಕ್ಕೂ ಅಧಿಕ  ಹಿಂದಿ ಚಲನಚಿತ್ರಗಳಲ್ಲಿ ಹಾಡಿ ಜಗದ್ವಿಖ್ಯಾತಿ ಗಳಿಸಿರುವ ಲತಾ ದೀದಿಯ ಹಾಡಿಗೆ ಮನಸೋಲದವರೇ ಇಲ್ಲ.  ಸುಮಧುರವಾದ ಮತ್ತು ಆಕರ್ಷಕವಾದ ಧ್ವನಿಯಿಂದ ಸಂಗೀತ ಪ್ರಿಯರು (music lovers) ಅಲ್ಲದವರನ್ನೂ ಮರುಳು ಮಾಡುತ್ತಿದ್ದ ಮಹಾನ್​ ಸಾಧಕಿ ಇವರು. 13 ನೇ ವಯಸ್ಸಿನ ಬಾಲಕಿಯಾಗಿದ್ದಾಗಿನಿಂದಲೇ ಹಾಡಲು ಪ್ರಾರಂಭಿಸಿದ್ದ ಲತಾ ಅವರು  ಭಾರತೀಯ ಭಾಷೆಗಳಲ್ಲಿ 30 ಸಾವಿರಕ್ಕೂ  ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇವರ ಈ ಸಾಧನೆಗಾಗಿ  2001 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ (Bharata Ratna) ಪ್ರಶಸ್ತಿ ಕೂಡ ಹುಡುಕಿಕೊಂಡು ಬಂದಿತ್ತು. 

ಆರು ದಶಕಗಳಿಗೂ ಹೆಚ್ಚು ಕಾಲದ ಅವರ ವೃತ್ತಿಜೀವನದಲ್ಲಿ, ಬಾಲಿವುಡ್ (Bollywood) ನಟಿಯರ ನೃತ್ಯಕ್ಕೆ ತನ್ನದೇ ಧ್ವನಿ ನೀಡಿ ನಟಿಯರ ಅಭಿನಯದಲ್ಲಿಯೂ ಹಾಸುಹೊಕ್ಕಿದ್ದರು. ಅವರು ಭಾರತೀಯ ಚಲನಚಿತ್ರ ಸಂಗೀತದ ಮೇಲೆ ಅಭೂತಪೂರ್ವ ಪ್ರಭಾವವನ್ನು ಹೊಂದಿದ್ದರು ಎಂಬುದರಲ್ಲಿ ಸಂದೇಹವೇ ಇಲ್ಲ. ಧುಮತಿ (1958) ನಿಂದ ಸಲೀಲ್ ಚೌಧರಿ ಅವರ ಸಂಯೋಜನೆಯ 'ಆಜಾ ರೇ ಪರದೇಸಿ'ಗಾಗಿ ಅವರು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಮೊದಲ ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು. ಹೇಮಂತ್ ಕುಮಾರ್ ಸಂಯೋಜಿಸಿದ ಬೀಸ್ ಸಾಲ್ ಬಾದ್‌ನ 'ಕಹಿನ್ ದೀಪ್ ಜಲೇ ಕಹಿನ್ ದಿಲ್' ಹಾಡಿಗೆ 1962 ರಲ್ಲಿ ಅವರಿಗೆ ಎರಡನೇ ಫಿಲ್ಮ್‌ಫೇರ್ ಪ್ರಶಸ್ತಿ (Filmfare award)ಯನ್ನು ನೀಡಲಾಯಿತು. ಫ್ರಾನ್ಸ್‌ನಿಂದ ಉನ್ನತ ನಾಗರಿಕ ಪ್ರಶಸ್ತಿಯಾದ ದಿ ಆಫೀಸರ್ ಆಫ್ ದಿ ಲೀಜನ್ ಆಫ್ ಆನರ್ ಅನ್ನು 2007 ರಲ್ಲಿ ಪಡೆದರು.  ಪರಿಚಯ ಚಿತ್ರದ 'ಬೀಟಿ ನಾ ಬಿಟೈ' ಹಾಡಿಗಾಗಿ ಅವರು 1973 ರಲ್ಲಿ ಮೊದಲ ಬಾರಿಗೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು. ಕ್ವೀನ್ ಆಫ್ ಮೆಲೋಡಿ, ವಾಯ್ಸ್ ಆಫ್ ದಿ ನೇಷನ್, ವಾಯ್ಸ್ ಆಫ್ ದಿ ಮಿಲೇನಿಯಮ್ ಮತ್ತು ಇನ್ನೂ ಹಲವು ಬಿರುದುಗಳನ್ನು ಪಡೆದರು... ಹೀಗೆ ಲತಾ ಮಂಗೇಶ್ಕರ್​ ಸಾಧನೆಯ ಕುರಿತು ಬರೆಯುತ್ತಾ ಹೋದರೆ ಅದು ಮುಗಿಯುವುದೇ ಇಲ್ಲ.

Shah Rukh Khan: 'ಪಠಾಣ್'​ ಅಬ್ಬರದ ನಡುವೆಯೇ ಶಾರುಖ್​ ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​!

ಇವರ ಗಾನ ಮಾಧುರ್ಯಕ್ಕೆ ಸಂಗೀತ ಲೋಕದ ದಿಗ್ಗಜರಷ್ಟೇ ಅಲ್ಲದೇ ಗಣ್ಯಾತಿಗಣ್ಯರೂ ಸೋತುಹೋಗಿದ್ದಾರೆ. ಜನವರಿ 1963ರಲ್ಲಿ ನಡೆದ ಭಾರತ-ಚೀನಾ ಯುದ್ಧದ ಹಿನ್ನೆಲೆಯಲ್ಲಿ ಲತಾ ಮಂಗೇಶ್ಕರ್ ಅವರು ದೇಶಭಕ್ತಿಯ ಗೀತೆಯನ್ನು ಹಾಡಿದ್ದರು. ಆಗ ಭಾರತದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು (Jawaharlal Nehru) ಅವರ ಸಮ್ಮುಖದಲ್ಲಿ "ಏ ಮೇರೆ ವತನ್ ಕೆ ಲೋಗೋ" ಹಾಡಿದ್ದರು. ಈ ಹಾಡು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಕಣ್ಣೀರು ತರಿಸಿತ್ತು. ಅಂಥ ಮಾಧುರ್ಯವನ್ನು ಹೊಂದಿದ್ದ ಲತಾ ಕಳೆದ ವರ್ಷ ಫೆಬ್ರುವರಿ 6ರಂದು 92ನೇ ವಯಸ್ಸಿನಲ್ಲಿ ಸಂಗೀತ ಲೋಕದಲ್ಲಿ ಲೀನರಾದರು. ಕೊನೆಯ ಉಸಿರು ಇರುವವರೆಗೂ ಹಾಡನ್ನೇ ಉಸಿರು ಮಾಡಿಕೊಂಡಿದ್ದ ಈ ಮಹಾನ್​ ತಾರೆ ಎಲ್ಲರನ್ನೂ ಬಿಟ್ಟುಹೋಗಿ ಒಂದು ವರ್ಷವಾಗಿದೆ.

ಆದರೆ ಇವರ ಬಗ್ಗೆ ಕೆಟ್ಟದ್ದಾಗಿ ಬರೆದಿರುವ ಟ್ವೀಟ್​ ಒಂದು ವೈರಲ್​ ಆಗಿದ್ದು, ಸಂಗೀತ ಪ್ರೇಮಿಗಳನ್ನು ಮಾತ್ರವಲ್ಲದೇ ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ. @ikaveri ಹ್ಯಾಂಡಲ್ ಹೊಂದಿರುವ ಟ್ವಿಟರ್ ಬಳಕೆದಾರರು ಲತಾ ಮಂಗೇಶ್ಕರ್ ಅವರ ಬಗ್ಗೆ ಬರೆದಿರುವ ಟ್ವೀಟ್​ ಇದಾಗಿದೆ. ಹುಡುಗಿಯ ಫೋಟೋ ಇರುವ ಈ ಟ್ವಿಟರ್​ನಲ್ಲಿ  'ಲತಾ ಮಂಗೇಶ್ಕರ್​ ಅವರು ಒಬ್ಬ ಅದ್ಭುತ ಗಾಯಕಿ ಎಂದು ಭಾರತೀಯರ ಬ್ರೇನ್​ವಾಷ್​ ಮಾಡಲಾಗಿದೆ' ಎಂದು ಬರೆಯಲಾಗಿದೆ. 'ಅವರು ಸಹೋದರಿ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ, ಹಾಗಿದ್ದರೆ ನಾನು ಅವರನ್ನು ಸಹೋದರ ಎಂದು ಕರೆದರೆ ಸರಿಯಾಗುತ್ತದೆಯಲ್ಲವೆ' ಎಂದೂ ಬರೆಯಲಾಗಿದೆ. 'ಉಮ್ರಾವ್​ ಜಾನ್​ನಲ್ಲಿ ಈಕೆ ಹಾಡದೇ ಇರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ' ಎಂದೂ ಬರೆದಿದ್ದಾರೆ.

ಕಾಸ್ಟ್​ ಕೌಚಿಂಗ್ ಭಯಾನಕ ಅನುಭವ ಬಿಚ್ಚಿಟ್ಟ ನಟ Ankit Gupta!

ಈ ಟ್ವೀಟ್​ಗೆ ಹಲವರು ಕಿಡಿ ಕಾರಿದ್ದಾರೆ. ಖ್ಯಾತ ಗಾಯಕ ಅದ್ನಾನ್ ಸಮಿ (Adnani Sami) ಕೂಡ ಇದಕ್ಕೆ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ಗೊತ್ತಿಲ್ಲದ ವಿಷಯಕ್ಕೆ ತಲೆ ಹಾಕುವ ಬದಲು ಮೌನವಾಗಿರಿ ಎಂದು ಹೇಳಿದ್ದಾರೆ. 'ಬಂದರ್ ಕ್ಯಾ ಜಾನೆ ಅದ್ರಕ್ ಕಾ ಸ್ವಾದ್' (ಕೋತಿಗೇನು ಗೊತ್ತು ಶುಂಠಿಯ ಸ್ವಾದ). ಇದು ನಿಮ್ಮ ಮೂರ್ಖತನದ ಪರಮಾವಧಿ ಎಂದಿದ್ದಾರೆ.
 

Follow Us:
Download App:
  • android
  • ios