ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡ ಸಿನಿಮಾ 'ಆ ದಿನಗಳು'. ಮಾಯಾ ನಗರಿಯಲ್ಲಿ ನಡೆಯುವ ಮಾಫಿಯಾವನ್ನು ಅದ್ಭುತವಾಗಿ ಚಿತ್ರದ ಮೂಲಕ ತೋರಿದ ಸಿನಿಮಾವದು. ಚಿತ್ರರಂಗಕ್ಕೆ ಹೊಸ ಪರಿಚಯ ಮಾಡಬೇಕೆಂದು ಹುಡುಕುತ್ತಾ ಹೊರಟ ನಿರ್ದೇಶಕರಿಗೆ ಸಿಕ್ಕ ನಟಿಯೇ ಅರ್ಚನಾ ಶಾಸ್ತ್ರಿ.

ಅರ್ಚನಾ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗ ಜಗದೀಶ್‌ ಜೊತೆ ನವೆಂಬರ್ ತಿಂಗಳಲ್ಲಿ ಹೈದರಾಬಾದ್‌ನ ರಾಡಿಸನ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ.

ಸೈಲೆಂಟ್‌ ಎಂಗೇಜ್‌ಮೆಂಟ್: ದಾಂಪತ್ಯ ಜೀವನಕ್ಕೆ ಸಜ್ಜಾದ 'ಆ ದಿನಗಳು' ನಟಿ!

ಜಗದೀಶ್ ಹೆಲ್ತ್ ಕೇರ್ ಕಂಪನಿಯೊಂದರಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನವ ದಂಪತಿಗಳು ಡಿಸೈನರ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಈ ಮುದ್ದಾದ ಜೋಡಿ ಅರುಂಧತಿ ನಕ್ಷತ್ರ ತೋರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

'ಅರುಂಧತಿ ನಕ್ಷತ್ರ ನೋಡುವ ಸಮಯ. ಹೌದು ನಾವಿಬ್ಬರೂ ನೋಡಿದ್ವಿ' ಎಂದು ಅರ್ಚನಾ ಬರೆದುಕೊಂಡಿದ್ದಾರೆ.