ಕನ್ನಡ ಚಿತ್ರರಂಗದಲ್ಲೇ ದೊಡ್ಡದೊಂದು ಅಲೆ ಹುಟ್ಟಿಸಿದ ಸಿನಿಮಾ 'ಆ ದಿನಗಳು'. ಮಾಯಾ ನಗರಿಯಲ್ಲಿ ನಡೆಯುತ್ತಿದ ರೌಡಿಸಮ್ ಬಗ್ಗೆ ಅಲೆ ಅಲೆಯಾಗಿ ತೆರೆದಿಟ್ಟ ಸಿನಿಮಾವದು. ಕನ್ನಡ ಚಿತ್ರರಂಗಕ್ಕೆ ಮುಗ್ಧ ಸೌಂದರ್ಯವಿರುವ ನಟಿಯನ್ನು ನೀಡಿದ ಚಿತ್ರವಿದು. ಆಕೆಯೇ ಅರ್ಚನಾ ಶಾಸ್ತ್ರಿ.

ನಿವೇದಿತಾ-ಚಂದನ್ ಶೆಟ್ಟಿ ಮದ್ವೆ; ಈ ಜೋಡಿ ಲವ್ ಸ್ಟೋರಿ ಕೇಳಿದ್ದೀರಾ?

ಅರ್ಚನಾ ಕಳೆದೆರಡು ವರ್ಷಗಳಿಂದ ಜಗದೀಶ್‌ ಅವರನ್ನು ಪ್ರೀತಿಸುತ್ತಿದ್ದು. ಕುಟುಂಬದ ಒಪ್ಪಿಗೆ ಮೇಲೆ ಇಬ್ಬರೂ ಹೈದರಾಬಾದ್‌ನ ರಾಡಿಸನ್‌ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

 

ಜಗದೀಶ್ ಹೆಲ್ತ್ ಕೇರ್ ಕಂಪನಿಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಜಗದೀಶ್. ನಿಶ್ಚಿತಾರ್ಥದ ಪೋಟೋಗಳನ್ನು ಅರ್ಚನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಎಂಜೇಗ್‌ಮೆಂಟ್‌ಗೆ ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ ಗಣ್ಯರು ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಅರ್ಚನಾ 'ಆ ದಿನಗಳು' ಚಿತ್ರದ ನಂತರ ಮೈತ್ರಿ, ಮಿಂಚು , ಮೇಘ ವರ್ಷಿಣಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

 
 
 
 
 
 
 
 
 
 
 
 
 

#us ✨❤️ me and Jaggi

A post shared by Archana Shastry (@archanashastryofficial) on Sep 21, 2019 at 4:07am PDT