ನವದೆಹಲಿ(ಮಾ.  22)  67ನೇ ರಾಷ್ಟ್ರೀಯ ಸಿನಿಮಾ ಪುರಸ್ಕಾರಗಳು ಪ್ರಕಟವಾಗಿವೆ.  ಕನ್ನಡಕ್ಕೂ ಒಳ್ಳೆಯ ಮಾನ್ಯತೆ ಸಿಕ್ಕಿದೆ. ರಕ್ಷಿತ್ ಶೆಟ್ಟಿ ಅವರ ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶನಕ್ಕೆ  ಪುರಸ್ಕಾರ ಸಿಕ್ಕಿದೆ. ವಿಕ್ರಂ ಮೋರ್ ಸಾಹಸ ನಿರ್ದೇಶನ ಮಾಡಿದ್ದರು.

ಬೆಸ್ಟ್ ಬುಕ್ ಆನ್ ಸಿನಿಮಾ ವಿಭಾಗದಲ್ಲಿ ಪಿಆರ್‌ ರಾಮದಾಸ ನಾಯ್ಡು ಅವರಿಗೆ ಗೌರವ ಸಂದಿದೆ. ಜಾಗತಿಕ ಸಿನಿಮಾ ಹೆಸರಿನಲ್ಲಿ ಬರೆದ ಪುಸ್ತಕ ಮನ್ನಣೆಗೆ ಪಾತ್ರವಾಗಿದೆ. ಅಕ್ಷಿ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಕೊರೋನಾ ಕಾರಣಕ್ಕೆ ಕಳೆದ ವರ್ಷ ನೀಡಬೇಕಿದ್ದ ಪ್ರಶಸ್ತಿಗಳನ್ನು ಈಗ ಘೋಷಣೆ ಮಾಡಲಾಗಿದೆ.

ದೇಶದಲ್ಲೇ ಬೆಂಗಳೂರು ವಾಸಯೋಗ್ಯ ನಗರ; ಟಾಪ್ 1

ಅತ್ಯುತ್ತಮ ನಟ : ಧನುಷ್ (ಅಸುರನ್ ಚಿತ್ರಕ್ಕೆ )ಮತ್ತು ಮನೋಜ್ ಬಾಜಪೇಯಿ (ಬೋನ್ಸ್ಲೇ) 
ಅತ್ಯುತ್ತಮ ನಟಿ : ಕಂಗನಾ ರಣಾವತ್. ಮಣಿಕರ್ಣಿಕಾ ಮತ್ತು ಪಿಂಗಾ ಮೂವಿ
ಅತ್ಯುತ್ತಮ ಛಾಯಾಗ್ರಹಣ ; ಜಲ್ಲಿಕಟ್ಟು(ಮಲಯಾಳಂ) 
ಅತ್ಯುತ್ತಮ ಹಿನ್ನೆಲೆ ಗಾಯಕಿ; ಬಾರ್ಡೋ(ಮರಾಠಿ)
ಅತ್ಯುತ್ತಮ ಗಾಯಕ; ಕೇಸರಿ(ತೇರಿ ಮಿಟ್ಟಿ, ಹಿಂದಿ)
ಅತ್ಯುತ್ತಮ ಪೋಷಕ ನಟ; ವಿಜಯ್ ಸೇತುಪತಿ(ಸೂಪರ್ ಡಿಲೆಕ್ಸ್) 
ಅತ್ಯುತ್ತಮ ನಿರ್ದೇಶಕ; ಬಹತ್ತರ್ ಹೊರಿಯನ್
ಅತ್ಯುತ್ತಮ ತುಳು ಚಿತ್ರ; ಪಿಂಗಾರಾ
ಅತ್ಯುತ್ತಮ  ತೆಲಗು ಚಿತ್ರ; ಜರ್ಸಿ
ಅತ್ಯುತ್ತಮ ತಮಿಳು ಚಿತ್ರ; ಅಸುರನ್
ಅತ್ಯುತ್ತಮ ಮಲಯಾಳಂ ಚಿತ್ರ; ಕಳ್ಳ ನೋಟಂ
ಅತ್ಯುತ್ತಮ  ಕೊಂಕಣಿ ಚಿತ್ರ; ಕಾಜ್ರೋ
ಅತ್ಯುತ್ತಮ ಹಿಂದಿ ಚಿತ್ರ;  ಚಿಚೋರೆ

ಕರ್ನಾಟಕ ಅರಣ್ಯ ಇಲಾಖೆ ಅರ್ಪಿಸಿದ ’ವೈಲ್ಡ್ ಕರ್ನಾಟಕ’,ಕ್ಕೆ ಅತ್ಯುತ್ತಮ ಚಿತ್ರ (ಅನ್ವೇಷಣೆ) ಪುರಸ್ಕಾರ ಸಂದಿದೆ  ಪುರಸ್ಕಾರಕ್ಕೆ ಪಾತ್ರರಾದ ಎಲ್ಲರನ್ನೂ ಸಿಎಂ ಯಡಿಯೂರಪ್ಪ ಅಭಿನಂದಿಸಿದ್ದಾರೆ.

.