Asianet Suvarna News

55 ದಿನಗಳ ಕೋವಿಡ್‌ ಗೆದ್ದು ಡಿಸ್ಚಾರ್ಜ್‌ ಆದ ನಟ ಅನಿರುದ್ಧ ಭಾವುಕ ಮಾತು!

55 ದಿನಗಳ ಕಾಲ ಸಾವು ಬದುಕಿನ ಹೋರಾಟದಲ್ಲಿ ಗೆದ್ದ ಅನಿರುದ್ಧ ದವೆ ವೈದ್ಯರಿಗೆ ಗೌರವ ಸಲ್ಲಿಸಿದ್ದಾರೆ. 

55 days of covid19 battle actor Anirudh Dave discharged from hospital vcs
Author
Bangalore, First Published Jun 27, 2021, 10:57 AM IST
  • Facebook
  • Twitter
  • Whatsapp

ಕೊರೋನಾ ವೈರಸ್ ಹಾವಳಿಯಿಂದ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡರು. ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿ, ದಾಖಲಾಗುವುದೇ ಕಷ್ಟವಾಗಿತ್ತು. ಹಂಗೂ ಹಿಂಗೂ ಆಸ್ಪತ್ರೆಗೆ ದಾಖಲಾದರೂ, ಹಿಂದಿರುಗಿ ಬರುವ ಭರವಸೆ ಕಳೆದುಕೊಳ್ಳುತ್ತಿದ್ದರು. ಲಕ್ಷಗಟ್ಟಲೆ ಹಣ ಖರ್ಚು ಮಾಡಿದರೂ, ಉಳಿಸಿಕೊಳ್ಳಲಾಗದೇ ಅದೆಷ್ಟೋ ಕುಟುಂಬಗಳು ತಮ್ಮ ಆಪ್ತರನ್ನು ನರಳಾಗುತ್ತಿವೆ. ಆದರೆ ಬರೋಬ್ಬರಿ 55 ದಿನಗಳ ಕಾಲ ಸಾವು ಬದುಕಿನ  ಹೋರಾಟದಲ್ಲಿ ಗೆದ್ದು ಬಂದು, ಅನಿರುದ್ಧ ಮಾದ್ಯಮಗಳ ಎದುರು ತಮ್ಮ ವೈದ್ಯರು, ನರ್ಸ್‌ಗಳನ್ನು ಕರೆಯಿಸಿ ಧನ್ಯವಾದಗಳನ್ನು ತಿಳಿಸಿದ್ದಾರೆ. 

ಏಪ್ರಿಲ್ 23ರಂದು ಅನಿರುದ್ಧ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಮನೆಯಲ್ಲಿಯೇ ಐಸೋಲೇಟ್ ಆಗಿದ್ದ ಅನಿರುದ್ಧರ ಅವರ ಶ್ವಾಸಕೋಶದಲ್ಲೇ ಶೇ. 85 ರಷ್ಟು ಸೋಂಕು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೃತಕ ಉಸಿರಾಟದಲ್ಲಿದ್ದರು. ಸೋಷಿಯಲ್ ಮೀಡಿಯಾದ ಮೂಲಕ ಅನಿರುದ್ಧ ಆರೋಗ್ಯದ ಬಗ್ಗೆ ಪತ್ನಿ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಿದ್ದರು. 

36 ದಿನಗಳಿಂದ ICUನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಿರುತೆರೆ ನಟ ಅನಿರುದ್ಧ! 

'ಭಾವುಕನಾಗುತ್ತಿರುವೆ. 55 ದಿನಗಳ ನಂತರ ನಾನು ಚಿರಾಯು ಎಂದು ಸಾಬೀತಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವೆ. ಎಲ್ಲರಿಗೂ ಧನ್ಯವಾದಗಳು. ಆಕ್ಸಿಜನ್ ಇಲ್ಲ. ನಾನು ಸ್ವಂತದಿಂದ ಉಸಿರಾಡುತ್ತಿರುವೆ. ಹೊಸ ಜೀವನ ಶುರುವಾಗಿದೆ,' ಎಂದು ಅನಿರುದ್ಧ ಬರೆದುಕೊಂಡಿದ್ದಾರೆ. 'ಇದು ತುಂಬಾ ಚಿಕ್ಕ ಪದ. ಧನ್ಯವಾದಗಳು. ನಿಮ್ಮ ಪ್ರೀತಿ, ಮೆಚ್ಚುಗೆ ಮತ್ತು ಪ್ರಾರ್ಥನೆ ನನ್ನನ್ನು ಗುಣಮುಖರಾಗುವಂತೆ ಮಾಡಿದೆ,' ಎಂದು ಅನಿರುದ್ಧ ಅಭಿಮಾನಿಗಳಿಗೆ ಹೇಳಿದ್ದಾರೆ.

 

Follow Us:
Download App:
  • android
  • ios