ರ್ಯಾಂಪ್ ವಾಕ್ ವೇಳೆ ನಡೆದ ದುರಂತಕ್ಕೆ ಮಾಡೆಲ್ ಸಾವು
ಫ್ಯಾಷನ್ ಶೋ ವೇಳೆ ನಡೆದ ಅವಘಡದಲ್ಲಿ ಕಬ್ಬಿಣದ ಪಿಲ್ಲರ್ ಬಿದ್ದು ಮಾಡೆಲ್ ಮೃತಪಟ್ಟಿದ್ದಾರೆ.
ರ್ಯಾಂಪ್ ವಾಕ್ ಮಾಡುವ ವೇಳೆ ಸಂಭವಿಸಿದ ದುರಂತದಲ್ಲಿ 24 ವರ್ಷದ ಮಾಡಲ್ ಮೃತಪಟ್ಟಿದ್ದು ಒಬ್ಬರು ತೀವ್ರ ಗೊಯಗೊಂಡಿದ್ದಾರೆ. ಫ್ಯಾಶನ್ ಶೋ ವೇಳೆ ಕಬ್ಬಿಣದ ಪಿಲ್ಲರ್ ಬಿದ್ದ ಪರಿಣಾಮ ವಾಕ್ ಮಾಡುತ್ತಿದ್ದ ಮಾಡೆಲ್ ತೀವ್ರ ಗಾಯಗೊಂಡಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಮಾಡೆಲ್ ಬದುಕುಳಿಯಲಿಲ್ಲ. ನೋಯ್ಡಾದ ಫಿಲ್ಮ್ ಸಿಟಿ ಸ್ಟುಡಿಯೋದಲ್ಲಿ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಪೋಲೀಸರು ಮಾಹಿತಿ ನೀಡಿದ್ದಾರೆ.
ಮೃತ ಮಾಡೆಲ್ ವಂಶಿಕಾ ಚೋಪ್ರಾ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಗಾಯಗೊಂಡವರನ್ನು ಬಾಬಿ ರಾಜ್ ಎಂದು ಗುರುತಿಸಲಾಗಿದೆ. ಈ ಘಟನೆ ನಿನ್ನೆ (ಜೂನ್ 11) ಮಧ್ಯಾಹ್ನ 1.30 ಸುಮಾರಿಗೆ ನಡೆದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ದಾವಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಎರಡೂ ಸಂತ್ರಸ್ತರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ಅಪಘಾತ: ಖ್ಯಾತ ಕಿರುತೆರೆ ನಟ ಕೊಲ್ಲಂ ಸುಧಿ ನಿಧನ
ಫಿಲ್ಮ್ ಸಿಟಿಯ ಸ್ಟುಡಿಯೋದಲ್ಲಿ ಫ್ಯಾಶನ್ ಶೋ ವೇಳೆ ಕಬ್ಬಿಣದ ಪಿಲ್ಲರ್ ಬಿದ್ದು ವಂಶಿಕಾ ಚೋಪ್ರಾ ಸಾವನ್ನಪ್ಪಿದ್ದಾರೆ ಎಂದು ನೋಯ್ಡಾ ಹೆಚ್ಚುವರಿ ಡೆಪ್ಯುಟಿ ಕಮಿಷನರ್ (ADCP) ಶಕ್ತಿ ಅವಸ್ತಿ ಹೇಳಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂದಿನ ಕ್ರಮ ನಡೆಯುತ್ತಿದೆ' ಎಂದಿದ್ದಾರೆ.
ಈ ಘಟನೆ ಸಂಬಂಧ ಪೊಲೀಸರು ಫ್ಯಾಷನ್ ಶೋ ಆಯೋಜಕ ಮತ್ತು ಲೈಟಿಂಗ್ ಕೆಲಸದಲ್ಲಿ ತೊಡಗಿದ್ದ 4 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ನೋಯ್ಡಾದ ಹೆಚ್ಚುವರಿ ಡಿಸಿಪಿ ಮೋಹನ್ ಅವಸ್ತಿ ತಿಳಿಸಿದ್ದಾರೆ. ಜೊತೆಗೆ ಫ್ಯಾಷನ್ ಶೋಗೆ ಅನುಮತಿ ನೀಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.