ಬೆಂಗಳೂರು(ಜ. 09) ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಬಿಡುಗೆಯಾಗಿ ಧೂಳೆಬ್ಬಿಸುತ್ತಿದೆ. 100 ಮಿಲಿಯನ್ ವೀವ್ಸ್ ಒಂದೇ ದಿನದ ಅಂತರದಲ್ಲಿ ಕಂಡಿದ್ದು ಸಂಭ್ರವನ್ನು ರಾಕಿಂಗ್ ಸ್ಟಾರ್ ಯಶ್ ಹಂಚಿಕೊಂಡಿದ್ದಾರೆ. ಧನ್ಯವಾದ ತಿಳಿಸಿದ್ದಾರೆ.

ರಮಿಕಾ ಸೇನ್ ಒಳಗುಟ್ಟು ಹೇಳಿದ ರವೀನಾ

ಕಿರಾತಕರು  ಕೆಜಿಎಫ್ 2 ಸಿನಿಮಾದ ಟೀಸರ್ ಲೀಕ್ ಮಾಡಿದ್ದರು. ಇದಾದ ತಕ್ಷಣ ಚಿತ್ರತಂಡ ಅಧಿಕೃತವಾಗಿ ಅನಾವರಣ ಮಾಡಿತ್ತು. ಯಶ್  ಜನ್ಮದಿನಕ್ಕೆಂದು ಟೀಸರ್ ಸಿದ್ಧಮಾಡಿ ಇಟ್ಟುಕೊಳ್ಳಲಾಗಿತ್ತು.

ಕೆಜಿಎಫ್ ಮೊದಲ ಭಾಘ ಇಡೀ ದೇಶದಲ್ಲಿಯೇ ಖ್ಯಾತಿ ಎತ್ತಿದ ಸಿನಿಮಾ ಆಗಿ ಕನ್ನಡ ಚಿತ್ರರಂಗಕ್ಕೆ ದೊಡ್ಡದೊಂದು ಹಿರಿಮೆ ತಂದುಕೊಟ್ಟಿದೆ. ಇದೇ ಕಾರಣಕ್ಕೆ ಭಾಗ ಎರಡರ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಜಾಸ್ತಿಯಾಗಿದೆ.