Asianet Suvarna News Asianet Suvarna News

ಮಳೆ ಅಬ್ಬರದಿಂದ ತತ್ತರಿಸಿರುವ ಮಲೆನಾಡಿಗೆ ಮತ್ತೊಂದು ಶಾಕ್, 48ಗಂಟೆಯಲ್ಲಿ 8 ಅಪಘಾತ!

ಚಿಕ್ಕಮಗಳೂರು ಭಾರಿ ಮಳೆಗೆ ತತ್ತರಿಸಿದೆ. ಜಿಲ್ಲೆಯ ಬಹುತೇಕ ಕಡೆ ನೀರು ನುಗ್ಗಿದೆ. ಮನೆಗಳು ನಾಶವಾಗಿದ್ದರೆ, ಬೆಳೆ, ಕೃಷಿ ಸಂಪೂರ್ಣ ನೆಲಕಚ್ಚಿದೆ. ಇದರ ಬೆನ್ನಲ್ಲೇ ಸರಣಿ ಅಪಘಾತಗಳು ಮಲೆನಾಡು ಮಂದಿಯನ್ನು ಬೆಚ್ಚಿಬೀಳಿಸಿದೆ. ಕಳೆದ ಎರಡು ದಿನದಲ್ಲಿ 8ಕ್ಕೂ ಹೆಚ್ಚು ಅಪಘಾತ ಸಂಭವಿಸಿದೆ.

Chikkamagaluru national highway horror more than 8 road accident in just 48 hours ckm
Author
Bengaluru, First Published Aug 8, 2022, 1:21 PM IST

ಚಿಕ್ಕಮಗಳೂರು(ಆ.08) : ಮಳೆಯ ಅಬ್ಬರಕ್ಕೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ತತ್ತರಿಸಿ ಹೋಗಿದೆ. ಇನ್ನೋಂದಡೆ ಮಳೆಯಿಂದ ಸಾಲು ಸಾಲು ರಸ್ತೆ  ಅಪಘಾತಗಳು ಮಲೆನಾಡಿನಲ್ಲಿ ಸಂಭವಿಸುತ್ತಿದೆ. ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣ ಸುರಕ್ಷಿತವಲ್ಲ ಎನ್ನುವ ವಾತಾವರಣ ಇದೀಗ ಸೃಷ್ಠಿ ಆಗಿದೆ.  ಮಳೆಯಿಂದ ತೊಯ್ದಿರುವ ಈ ರಸ್ತೆಗಳಲ್ಲಿ ಅಪಘಾತ ಪ್ರಮಾಣ ಹೆಚ್ಚಾಗಿದೆ. ಇದರಿಂದ ಹೆಚ್ಚಿನ ಜೀವಹಾನಿಯೂ ಸಂಭವಿಸುತ್ತಿದೆ. 

ಕಳೆದ 48 ಗಂಟೆಯಲ್ಲಿ 8 ಕ್ಕೂ ಹೆಚ್ಚು ರಸ್ತೆ ಅಪಘಾತಗಳು 
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಮಳೆ ಅಬ್ಬರ ಜೋರಾಗಿದೆ. ಮಳೆ ಒಂದೇ ಸಮ್ಮನೆ ಸುರಿಯುತ್ತಿರುವುದರಿಂದ ಜನರು ಹೈರಾಣು ಆಗಿ ಹೋಗಿದ್ದಾರೆ.ಇನ್ನೋಂದಡೆ ರಸ್ತೆಯಲ್ಲಿ  ವಾಹನ ಚಾಲನೆ ಮಾಡುವುದು ಪ್ರಯಾಣಿಕರಿಗೆ ಕಷ್ಟಕರವಾಗಿ ಪರಿಣಾಮಿಸಿದೆ.ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ  ಕೊಟ್ಟಿಗೆಹಾರದವರೆಗೆ ಕಳೆದ 48 ಗಂಟೆಯಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸಿವೆ. ರಾಷ್ಟ್ರೀಯ ಹೆದ್ದಾರಿಯ ಬಣಕಲ್‌ನ ಹೇಮಾವತಿ ನದಿ ಸೇತುವೆಯ ಸಮೀಪ ಎರಡು ಕಾರುಗಳು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಫಲ್ಟಿಯಾಗಿದೆ. ಅದೇ ಸ್ಥಳದಲ್ಲಿ ಸರ್ಕಾರಿ ಬಸ್ಸು ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬಣಕಲ್‌ನ ನಜರತ್ ಶಾಲೆಯ ಸಮೀಪ ಮಂಗಳೂರು ಕಡೆಯಿಂದ ಮೂಡಗೆರೆ ಕಡೆಗೆ ಸಾಗುತ್ತಿದ್ದ ಕಾರು ರಸ್ತೆ ಬದಿಗೆ ಪಲ್ಟಿಯಾಗಿದೆ.

Road Accident ಹುಬ್ಬಳ್ಳಿಯಲ್ಲಿ MLC ಬಸವರಾಜ ಹೊರಟ್ಟಿ ಕಾರು ಅಪಘಾತ

ಚಕ್ಕಮಕ್ಕಿ ಸಮೀಪ ಕಾರು ಹಾಗೂ ಲಾರಿಯ ನಡುವೆ ಅಪಘಾತ ಸಂಭವಿಸಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮಂಗಳೂರು ಕಡೆಗೆ ಸಾಗುತ್ತಿದ್ದ ಗೂಡ್ಸ್ ವಾಹನ ಹಾಗೂ ಬೆಂಗಳೂರು ಕಡೆಗೆ ಸಾಗುತ್ತಿದ್ದ ಕಾರಿನ ನಡುವೆ ಹೆಬ್ಬರಿಗೆ ಸಮೀಪ ಅಪಘಾತ ಸಂಭವಿಸದ್ದು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಬ್ಬರಿಗೆಯಲ್ಲಿಯೇ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದಿಬ್ಬಕ್ಕೆ ಡಿಕ್ಕಿ ಹೊಡೆದ ಘಟನೆಯೂ ನಡೆದಿದೆ.ಕಳೆದ 48 ಗಂಟೆಗಳಲ್ಲಿ 8 ಕ್ಕೂ ಹೆಚ್ಚು ವಾಹನಗಳು ಅಪಘಾತಕ್ಕೆ ಒಳಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದ ವಾಹನ ಅಪಘಾತ, ಓರ್ವ ಸಾವು, ಸಿದ್ದರಾಮಯ್ಯ ಸಂತಾಪ

ಅಗಲೀಕರಣ ಆದ ನಂತರ ಹೆಚ್ಚು ಅಪಘಾತಗಳು 
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ಕೊಟ್ಟಿಗೆಹಾರದವರೆಗೆ ರಸ್ತೆ ಅಗಲೀಕರಣ ಆದ ನಂತರ ಅಪಘಾತಗಳು ಹೆಚ್ಚಾಗಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚನಾ ಫಲಕ, ಪ್ರತಿಫಲಕಗಳನ್ನು ಅಳವಡಿಸುವ ಅಗತ್ಯವಿದೆ. ಸಾರ್ವಜನಿಕರಿಂದ ರಸ್ತೆ ತಡೆ, ಪ್ರತಿಭಟನೆಯ ಎಚ್ಚರಿಕೆ ಸಾಲು ಸಾಲು ಅಪಘಾತಗಲು ಸಂಭವಿಸುತ್ತಿದ್ದರೂ ಕೂಡ ಹೆದ್ದಾರಿ ಪ್ರಾಧಿಕಾರ ಈ ಬಗೆ ಗಮನ ಹರಿಸುತ್ತಿಲ್ಲ. ಸೂಚನಾ ಫಲಕ ಹಾಗೂ ಪ್ರತಿಫಲಕಗಳನ್ನು ಹಾಕುತ್ತಿಲ್ಲ. ಪ್ರಾಧಿಕಾರದ  ನಿರ್ಲಕ್ಷ್ಯ ದಿಂದಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದ್ದು ಸುಗಮ ವಾಹನ ಸಂಚಾರಕ್ಕೆ ಸಮರ್ಪಕ ಸೂಚನಾ ಫಲಕ, ಪ್ರತಿಫಲಕ ಮುಂತಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

Follow Us:
Download App:
  • android
  • ios