ಚಿಕ್ಕಬಳ್ಳಾಪುರ(ಅ.11): ಈ ಭಾಗದ ಮತಗಳಿಂದ ಎರಡು ಬಾರಿ ಗೆದ್ದು ಶಾಸಕರಾಗಿರುವ ಗೌರಿಬಿದನೂರು ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ಅವರಿಗೆ ಸ್ವಾಭಿಮಾನ ಇದ್ದರೆ ಈ ಪ್ರದೇಶದ ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಮಾಲಿನ್ಯ ನಿಯಂತ್ರಣಾ ಮಂಡಳಿ ಮಾಜಿ ಅಧ್ಯಕ್ಷ ಡಾ.ಕೆ.ಸುಧಾಕರ್‌ ಸವಾಲು ಹಾಕಿದ್ದಾರೆ.

ಗುರುವಾರ ಆಯೋಜಿಸಿದ್ದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿ ಹೋಬಳಿಯ ಜರಬಂಡಹಳ್ಳಿ ಗ್ರಾಪಂನ ಗ್ರಾಮವಾರು ಸಭೆಗಳಲ್ಲಿ ಮಾತನಾಡಿದ ಅವರು, ತಮ್ಮ ಅವಧಿಯಲ್ಲಿ ಈ ಗ್ರಾಪಂಗೆ ನೀಡಿರುವ ಅನುದಾನದಲ್ಲಿ ಶೇ.10ರಷ್ಟೂಇತಿಹಾಸದಲ್ಲಿ ಯಾರೂ ತಂದಿಲ್ಲ. ಕೇವಲ ಸರ್ಕಾರದ ಅನುದಾನ ಮಾತ್ರವಲ್ಲದೆ ತಮ್ಮ ನೇತೃತ್ವದ ಟ್ರಸ್ಟ್‌ನಿಂದಲೂ .10 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿಕೊಡಲಾಗತ್ತಿದೆ ಎಂದು ಹೇಳಿದರು.

ಮಲತಾಯಿ ಧೋರಣೆ ತೋರಿದ ಸಮ್ಮಿಶ್ರ ಸರ್ಕಾರ

ಈ ಹಿಂದೆ ಇದ್ದ ಜೆಡಿಎಸ್‌ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ತೀವ್ರ ಮಲತಾಯಿ ಧೋರಣೆ ತೋರಿತು. ಜಿಲ್ಲೆಗೆ ನೀಡಿದ್ದ ಮೆಡಿಕಲ್‌ ಕಾಲೇಜಿನ ಅನುದಾನಕ್ಕಾಗಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಳಿ ಎರಡು ಗಂಟೆ ಕಾಯಲಾಯಿತು. ಆದರೆ ಮೆಡಿಕಲ್‌ ಕಾಲೇಜು ಪ್ರಯೋಜನವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಅಂದೇ ತೀರ್ಮಾನ ಮಾಡಿದೆ. ಈ ಸರ್ಕಾರ ಉಳಿಯಬಾರದು ಎಂದು. ಸಮ್ಮಿಶ್ರ ಸರ್ಕಾರ ಉರಿಳಿಸಿದ ಕಾರಣ ತಮ್ಮ ಪಕ್ಷಕ್ಕೂ ಒಳ್ಳೆಯದಾಗಿದೆ. ಆದರೆ, ಅದನ್ನು ಅವರು ಬಹಿರಂಗವಾಗಿ ಹೇಳಿಕೊಳ್ಳುವಂತಿಲ್ಲ. ಮೆಡಿಕಲ್‌ ಕಾಲೇಜು ಕನಕಪುರಕ್ಕೆ ವರ್ಗಾಯಿಸುತ್ತಿದ್ದಾಗ, ಇದೇ ಜಿಲ್ಲೆಯ ಸಚಿವರಾಗಿದ್ದ ಶಿವಶಂಕರರೆಡ್ಡಿ ಬಿಸ್ಕೆಟ್‌ ತಿನ್ನುತ್ತಿದ್ದರೇ ಎಂದು ಲೇವಡಿ ಮಾಡಿದರು.

ನಾನಾ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಇದೇ ಸಂದರ್ಭದಲ್ಲಿ ಬಾಲರೆಡ್ಡಿಹಳ್ಳಿ ಗ್ರಾಮದಿಂದ ದಿನ್ನೇನಹಳ್ಳಿ, ಜರಬಂಡಹಳ್ಳಿ, ಪಿಡಚಲಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು .500 ಲಕ್ಷ ವೆಚ್ಚದಲ್ಲಿ, ಬಾಲರೆಡ್ಡಿಹಳ್ಳಿಯಿಂದ ಕಂಬಾಲಹಳ್ಳಿವರೆಗೆ .88 ಲಕ್ಷ ವೆಚ್ಚದಲ್ಲಿ, ಛಾಯಾನಗರದಿಂದ ಪಿಡಚಲಹಳ್ಳಿ ವರೆಗೆ .120 ಲಕ್ಷ ವೆಚ್ಚದಲ್ಲಿ ಹಾಗೂ ಗಿಡಗಾನಹಳ್ಳಿ ಗ್ರಾಮದಿಂದ ಹೆಗ್ಗೇನಹಳ್ಳಿ ಮಾರ್ಗವಾಗಿ ಛಾಯಾನಗರವರೆಗೆ .250 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಚಿಕ್ಕಬಳ್ಳಾಪುರದಲ್ಲಿ ಮುಂದುವರಿದ ಮಳೆ: ತಪ್ಪದ ಕಿರಿಕಿರಿ

ಈ ಸಂದರ್ಭದಲ್ಲಿ ತಾಪಂ ಸದಸ್ಯ ಬಾಲಕೃಷ್ಣ, ಕೋಚಿಮುಲ… ಮಾಜಿ ನಿರ್ದೇಶಕ ಸುಬ್ಬಾರೆಡ್ಡಿ, ಶಾಂಪುರ ಗ್ರಾಪಂ ಅಧ್ಯಕ್ಷ ಸುದರ್ಶನರೆಡ್ಡಿ, ನಾರಾಯಣಸ್ವಾಮಿ, ಶಿವಕುಮಾರ್‌, ಪೆದ್ದರೆಡ್ಡಿ, ಯತೀಶ್‌ರೆಡ್ಡಿ, ಸುಬ್ಬರಾವ್‌, ವೆಂಕಟೇಶ್‌, ಬಾಲಕೃಷ್ಣಾರೆಡ್ಡಿ, ರವಿ, ರಿಯಾಜ್‌, ಗಂಗಾಧರ್‌, ಅಪ್ಪಿಗೌಡ, ಸಾದೇನಹಳ್ಳಿ ವೆಂಕಟೇಶ್‌ ಸೇರಿದಂತೆ ಇತರರು ಇದ್ದರು.

24ರಂದು ಮುಖ್ಯಂತ್ರಿ ಜಿಲ್ಲೆಗೆ

ಅ.24ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕ್ಷೇತ್ರಕ್ಕೆ ಆಗಮಿಸಲಿದ್ದು, 750 ಹಾಸಿಗೆಯ ಬೃಹತ್‌ ಆಸ್ಪತ್ರೆ ಮತ್ತು ಮೆಡಿಕಲ್‌ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸುಧಾಕರ್‌ ಹೇಳಿದರು.

ಒಬ್ಬ ವೈದ್ಯನಾಗಿ ಜಿಲ್ಲೆಯ ಜನತೆಗೆ ನೀಡುತ್ತಿರುವ ಕೊಡುಗೆ 750 ಹಾಸಿಗೆ ಆಸ್ಪತ್ರೆ ಮತ್ತು ಮೆಡಿಕಲ್‌ ಕಾಲೇಜು ಆಗಿದ್ದು, ಇವುಗಳ ನಿರ್ಮಾಣದಿಂದ ಜಿಲ್ಲೆಯ ಜನರು ಯಾವುದೇ ಕಾಯಿಲೆಗೆ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.

ಯೂಟ್ಯೂಬ್ ನೋಡಿ ಕಳ್ಳತನಕ್ಕಿಳಿದ ಖತರ್ನಾಕ್ ಕಳ್ಳರು..!

ಅಂದಿನ ಸ್ಪೀಕರ್‌ ರಮೇಶ್‌ಕುಮಾರ್‌ ಅವರ ಸಂವಿಧಾನ ಬಾಹಿರ ನಿರ್ಧಾರದಿಂದ ನಮ್ಮನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡಿದ್ದಾರೆ. ಸುಪ್ರೀಂ ಕೋರ್ಟಿನಲ್ಲಿ ನಮ್ಮ ಪರ ತೀರ್ಪು ಬರಲಿದ್ದು, ತೀರ್ಪಿನ ನಂತರ ರಾಜಕೀಯ ತೀರ್ಮಾನ ನಿಮ್ಮ ಮೂಲಕವೇ ಪಡೆಯುತ್ತೇನೆ. ನಿಮ್ಮ ನಂಬಿಕೆಗೆ ದ್ರೋಹ ಬಗೆದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಹೊರತು ನೀವು ತಲೆ ತಗ್ಗಿಸುವ ಕೆಲಸ ಮಾಡಲ್ಲ ಎಂದು ಇದೇವೇಳೆ ಭರವಸೆ ನೀಡಿದರು.

ನೂರು ಶಕ್ತಿಗಳು ಒಂದಾದರೂ ಸೋಲಿಸಲು ಸಾಧ್ಯವಿಲ್ಲ:

ಕ್ಷೇತ್ರದ ಯಾವುದೇ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರದಲ್ಲಿ ಹಣ ನೀಡಲಿಲ್ಲ. ಎತ್ತಿನಹೊಳೆ ಯೋಜನೆಗೆ ಭೂ ಸ್ವಾಧೀನ ಅಧಿಕಾರಿಗಳನ್ನೇ ನೇಮಿಸಲಿಲ್ಲ, ಇನ್ನು ಕಾಮಗಾರಿ ಆರಂಭವಾಗುವುದಾದರೂ ಹೇಗೆ, ನಿಮಗೆ ನೀಡಿದ ಭರವಸೆಗಳು ಹುಸಿಯಾಗುತ್ತವೆ ಎಂದು ನಾವು ಪರದಾಡುತ್ತಿದ್ದರೆ ಸಚಿವರಾದವರು ಯಾವುದೇ ಗಮನ ಹರಿಸಲಿಲ್ಲ ಎಂದು ಕಿಡಿಕಾರಿದರು.

ಕೋಲಾರ: ನೀರಿಲ್ಲದ ಕೊಳವೆ ಬಾವಿಗೂ ವಿದ್ಯುತ್‌ ಬಿಲ್‌!

ಇನ್ನು ರಾಜಕೀಯ ದುರುದ್ದೇಶದಿಂದ ದಂಡಿಗಾನಹಳ್ಳಿ ಕೆರೆಯ ನೀರನ್ನು ಗೌರಿಬಿದನೂರಿಗೆ ಕೊಂಡೊಯ್ಯಲು ಯತ್ನಿಸಿದರು. ಆದರೆ ಅದರಲ್ಲಿ ಅವರು ಸೋತರು. ಎಲ್ಲದರಲ್ಲಿಯೂ ಅವರಿಗೆ ಸೋಲು ಕಟ್ಟಿಟ್ಟಬುತ್ತಿ. ನಾನು ನ್ಯಾಯದ ಕಡೆ ಇದ್ದೇನೆ. ಹಾಗಾಗಿ ದೇವರು ನನ್ನ ಕಡೆ ಇದ್ದಾರೆ. ಹಾಗಾಗಿ ಅವರು ಎಂದೂ ಅವರು ನನ್ನ ಮೇಲೆ ಗೆಲ್ಲಲು ಸಾಧ್ಯವಿಲ್ಲ, ಇಂತಹ 100 ಶಕ್ತಿಗಳು ಒಂದಾದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಾಗೇಪಲ್ಲಿಯಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತ

ಶಾಸಕ ಸ್ಥಾನ ಜವಾಬ್ದಾರಿಯುತವಾದುದು, ಆದರೆ ಅದನ್ನು ನಿಭಾಯಿಸುವಲ್ಲಿ ಎಂದೂ ನಾನು ಎಡುವುದಿಲ್ಲ. ಎಷ್ಟುಜನರಿಗೆ ಆರೋಗ್ಯ, ಎಷ್ಟುಜನರಿಗೆ ಶಿಕ್ಷಣ ನೀಡಿದ್ದಾರೆ, ಎಷ್ಟುಜನರ ಕಣ್ಮೀರು ಒರೆಸಿದ್ದಾರೆ ಎಂಬುದನ್ನು ಬಹಿರಂಗ ಚರ್ಚೆಯಲ್ಲಿಯೇ ಶಿವಶಂಕರರೆಡ್ಡಿ ತಿಳಿಸಲಿ ಎಂದು ಹೇಳಿದರು. ಈ ಭಾಗದ ಮತಗಳಿಂದ ಎರಡು ಬಾರಿ ಶಾಸಕರಾದರೂ ಒಂದು ವಸತಿ ಶಾಲೆ ಮಾಡಲು ಶಿವಶಂಕರರೆಡ್ಡಿ ಅವರಿಗೆ ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು.