ಕೋಲಾರ: ನೀರಿಲ್ಲದ ಕೊಳವೆ ಬಾವಿಗೂ ವಿದ್ಯುತ್ ಬಿಲ್!
ಸಣ್ಣ ಪುಟ್ಟ ಬಿಲ್‌ಗಳ ಹೆಸರಲ್ಲಿ ಹಣ ನುಂಗುವ ಕೆಲಸ ಎಲ್ಲೆಡೆ ನಡೆಯುತ್ತಿರುತ್ತದೆ. ಕೋಲಾರದಲ್ಲಿ ನೀರೆ ಇಲ್ಲದ ಬೋರ್‌ವೆಲ್‌ಗೆ ಬಿಲ್ ಹಾಕೋ ಮೂಲಕ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.
ಕೋಲಾರ(ಅ.10): ಶ್ರೀನಿವಾಸಪುರ ತಾಲೂಕು ಹೊದಲಿ ಗ್ರಾಮ ಪಂಚಾಯ್ತಿಯಲ್ಲಿ ಪ್ರಥಮ ಕೆಡಿಪಿ ಸಭೆ ನಡೆಸಲಾಗಿದ್ದು ಈ ಸಭೆಗೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಿ ಆಗಿರುವುದರಿಂದ ಗ್ರಾಮ ಪಂಚಾಯ್ತಿ ಆಡಳಿತ ಸದಸ್ಯರು ಅಸಮಧಾನ ವ್ಯಕ್ತಪಡಿಸಿದರು.
ತಾಲೂಕಿನ ಹೊದಲಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಕಲಾವತಿಯವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯ್ತಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಸ್ತ್ರೀಶಕ್ತಿ ಸಂಘಗಳು, ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಯಲಾಗಿದ್ದು ಈ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗಿರುವುದು ಬೇಸರ ಸಂಗತಿಯಾಗಿದೆ ಎಂದು ಕೊಟ್ರಗುಳಿ ಗ್ರಾಮ ಪಂಚಾಯ್ತಿ ಸದಸ್ಯ ಆಂಜನೇಯರೆಡ್ಡಿ ತಿಳಿಸಿದರು.
ವಿದ್ಯುತ್ ಸಂಪರ್ಕ ಕಡಿತ ಮಾಡಿ
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ಕಾರದಿಂದ 41 ಬೋರ್‌ವೆಲ್‌ಗಳು ವಿವಿಧ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಕೊರೆಸಿದ್ದು ಇವುಗಳಲ್ಲಿ 21 ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದ್ದು 20 ಕೊಳವೆಬಾವಿಗಳು ಬತ್ತಿ ಹೋಗಿದ್ದು ಸುಮಾರು 4-5 ವರ್ಷಗಳಿಂದ ಬತ್ತಿ ಹೋಗಿರುವ ಕೊಳವೆ ಬಾವಿಗಳ ವಿದ್ಯುತ್ ಸಂಪರ್ಕ ಕಡಿತ ಮಾಡಿ ಎಂದು ಸುಮಾರು ಭಾರಿ ಸಂಬಂದಿಸಿದ ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದರು.
ವಿದ್ಯುತ್ ಬಿಲ್ ಚುಕ್ತಾ ಮಾಡಿದೆ
ಪಿಡಿಒ ರಾಮಚಂದ್ರಪ್ಪ ಮಾತನಾಡಿ 2015 ರಲ್ಲಿ ಸರ್ಕಾರ ಬಾಕಿ ಇರುವ ಎಲ್ಲಾ ಕೊಳವೆ ಬಾವಿಗಳ ವಿದ್ಯುತ್ ಬಿಲ್ಲನ್ನು ಪೂರ್ಣ ಪ್ರಮಾಣದಲ್ಲಿ ಚುಕ್ತ ಮಾಡಿರುತ್ತಾರೆ. ಆದರೆ ಸಂಬಂದಿಸಿದ ಇಲಾಖೆಯವರು ಇದನ್ನು ಲೆಕ್ಕಿಸದೆ ಅರಿಯರ್ಸ್ ರೂಪದಲ್ಲಿ ಲಕ್ಷಾಂತರ ರು.ಗಳ ಬಿಲ್ಲುಗಳನ್ನು ಪ್ರತಿ ತಿಂಗಳು ಪಾವತಿ ಮಾಡಬೇಕೆಂದು ಕಳುಹಿಸುತ್ತಿರುತ್ತಾರೆ ಎಂದು ಸಭೆಗೆ ತಿಳಿಸಿದರು.
ಮಾಜಿ ಡಿಸಿಎಂ ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಹೊದಲಿ ಅಶೋಕ್, ದಾಸರತಿಮ್ಮನಹಳ್ಳಿ ಶ್ರೀನಿವಾಸ್, ಇಮರಕುಂಟೆ ಮಂಜುನಾಥರೆಡ್ಡಿ, ಆವಲಕುಪ್ಪ ನಾರಾಯಣಸ್ವಾಮಿ, ಇತರೆ ಸದಸ್ಯರು ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ಕರ ವಸೂಲಿಗಾರ ವೆಂಕಟರವಣಪ್ಪ, ಸಿಬ್ಬಂದಿ ವಿನೋದಮ್ಮ, ಅಶೋಕ್, ಪಂಚಾಯ್ತಿ ವ್ಯಾಪ್ತಿಯ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಗ್ರಂಥಾಲಯ ಮೇಲ್ವಿಚಾರಕ ಹೊದಲಿ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
ನಷ್ಟದಲ್ಲಿದೆಯಾ ಎಲ್‌ಐಸಿ?: ವೈರಲ್ ಪೋಸ್ಟ್‌ಗೆ ಸ್ಪಷ್ಟನೆ ಕೊಟ್ಟ ವಿಮಾ ಕಂಪನಿ