ಉಡುಪಿ(ಅ.10): ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನೇ ದಕ್ಷಿಣ ಕನ್ನಡ ಜೊತೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಕೆ. ಜಯಪ್ರಕಾಶ್‌ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಅವರು ಬ್ರಹ್ಮಾವರ ಬಾರಿಕೆರೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

'ಸಿದ್ದರಾಮಯ್ಯ-ಯಡಿಯೂರಪ್ಪ ಪ್ರಾದೇಶಿಕ ಪಕ್ಷ ಕಟ್ಟಲಿ'

ಕೋಟ ಶ್ರೀನಿವಾಸ ಪೂಜಾರಿ ಅವರು ಸ್ಥಳೀಯರಾಗಿದ್ದು, ಎರಡು ಜಿಲ್ಲೆಗಳ ಪಂಚಾಯಿತಿ ಸದಸ್ಯರಿಂದ ಆಯ್ಕೆ ಆದವರು. ಆದ್ದರಿಂದ ಅವರನ್ನೇ ಈ ಎರಡೂ ಜಿಲ್ಲೆಗಳಿಗೆ ಉಸ್ತುವಾರಿ ಮಾಡಿದ್ದರೆ ಆಡಳಿತಾತ್ಮಕವಾಗಿ ಸುಲಭವಾಗುತ್ತಿತ್ತು ಎಂದರು.

ಪ್ರಸ್ತುತ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಯಿ ಅವರು ಗೃಹ ಖಾತೆಯನ್ನೂ ಹೊಂದಿರುವುದರಿಂದ, ಅವರು ಹೆಚ್ಚಿನ ಸಮಯ ಬೆಂಗಳೂರಿನಲ್ಲಿಯೇ ಇರಬೇಕಾಗುತ್ತದೆ. ಜೊತೆಗೆ ಅವರಿಗೆ ಹಾವೇರಿ ಜಿಲ್ಲೆಯ ಉಸ್ತುವಾರಿಯೂ ಇರುವುದರಿಂದ ಅವರಿಗೆ ಎರಡು ದೂರದ ಜಿಲ್ಲೆಗಳಿಗೆ ಉಸ್ತುವಾರಿ ಕಷ್ಟವಾಗುತ್ತದೆ ಎಂದು ಹೆಗ್ಡೆ ಅಭಿಪ್ರಾಯಪಟ್ಟರು.

ಸ್ವಾಭಿಮಾನ ಪ್ರಶ್ನಿಸಿದ್ದೀರಿ; ಪರಿಣಾಮ ಎದುರಿಸಿ, ಎಚ್‌ಡಿಕೆಗೆ ಕೈ ಮುಖಂಡನ ಎಚ್ಚರಿಕೆ..!

ಮುಜರಾಯಿ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಗಳನ್ನು ರದ್ದುಗೊಳಿಸಿದ ವಿಚಾರ ಸರ್ಕಾರದ ತೀರ್ಮಾನವಾಗಿದೆ ಎಂದ ಅವರು, ಇತ್ತೀಚಿನ ರಾಜಕೀಯದಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂದು ಅರ್ಥವಾಗುತ್ತಿಲ್ಲ. ಜನಾಭಿಪ್ರಾಯ ಯಾರ ಮೇಲಿರುತ್ತೋ ಎಂದು ಗೊತ್ತಾಗುವುದೂ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಇಂಡಿ ಜಿಲ್ಲೆಗಾಗಿ ಪಣ ತೊಟ್ಟಿರುವ ಶಾಸಕ ಯಶವಂತರಾಯ ಗೌಡ ಪಾಟೀಲ