ಚಾಮರಾಜನಗರ: ಹುಲಿ ದರ್ಶನವೂ ಇಲ್ಲ, ಕುರುಹೂ ಇಲ್ಲ..!
ಆಪರೇಷನ್ ಟೈಗರ್ ಕಾರ್ಯಾಚರಣೆಯ ಮೂರನೇ ದಿನವೂ ಸಿಬ್ಬಂದಿ ನಿರಾಶರಾಗಿದ್ದಾರೆ. ಹುಲಿ ಹಿಡಿಯುವುದು ಬಿಟ್ಟು, ಕಣ್ಣಿಗೂ ಕಾಣಿಸಿಕೊಂಡಿಲ್ಲ. ಹುಲಿ ಓಡಾಡಿರುವ ಕುರುಹುಗಳೂ ಅಧಿಕಾರಿಗಳಿಗೆ ಲಭ್ಯವಾಗಿಲ್ಲ.
ಗುಂಡ್ಲುಪೇಟೆ(ಅ.12): ಬಂಡೀಪುರ ಅರಣ್ಯದಲ್ಲಿ ರೈತರ ಕೊಂದ ನರಭಕ್ಷಕ ಹುಲಿ ಹಿಡಿಯಲು ಆರಂಭಿಸಿರುವ ‘ಆಪರೇಷನ್ ಟೈಗರ್ ಕಾರ್ಯಾಚರಣೆಯ 3ನೇ ದಿನ ಬಿಗ್ ಜೀರೋ!
ಶುಕ್ರವಾರ ಬೆಳಗ್ಗೆಯಿಂದ ಸಂಜೆಯ ತನಕ ಎಡ ಬಿಡದೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಉಸ್ತುವಾರಿಯಲ್ಲಿ ನಡೆದ ಕಾರ್ಯಾಚರಣೆ ಠುಸ್ ಆಗಿದೆ.
ಗುಂಡ್ಲುಪೇಟೆಯಲ್ಲಿ ನರಭಕ್ಷಕ ಹುಲಿ ಸೆರೆಗೆ ಆಪರೇಷನ್ ಸ್ಟಾರ್ಟ್
7 ಸಾಕಾನೆಗಳ ನೆರವಿನೊಂದಿಗೆ 4 ತಂಡ 4 ಕಡೆ ಅರಣ್ಯ ಸಿಬ್ಬಂದಿಯೊಂದಿಗೆ ಕೂಂಬಿಂಗ್ ನಡೆಸಿದರೂ ಹುಲಿ ದರ್ಶನ ಮಾಹಿತಿ ಇರಲಿ, ಹುಲಿ ಕುರುಹು ಸಿಗಲ್ಲಿಲ್ಲ. ಆನೆ ಹಾಗೂ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯ ಜೊತೆಗೆ ದ್ರೋಣ್ ಕ್ಯಾಮೆರಾಗಳ ಮೂಲಕ ರೈತನ ಸಾಯಿಸಿದ ಸ್ಥಳದ ಸುತ್ತಮುತ್ತ ಜಾಲಾಡಿದರೂ ಹುಲಿ ಸಣ್ಣ ಕುರುಹು ಸಿಗಲಿಲ್ಲ.
ಕೇಂದ್ರ ಸರ್ಕಾರದಿಂದ ಅರೆಕಾಸಿನ ಮಜ್ಜಿಗೆ, ನೆರೆ ಪರಿಹಾರಕ್ಕೆ ವ್ಯಂಗ್ಯ
ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಅಪರ ಪ್ರಧಾನ ಸಂರಕ್ಷಣಾಧಿಕಾರಿ ಜಗತ್ ರಾಂ, ಮೈಸೂರು ಮುಖ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಚಾಮರಾಜನಗರ ಮುಖ್ಯ ಸಂರಕ್ಷಣಾಧಿಕಾರಿ ಶಂಕರ್, ಮೈಸೂರು ಡಿಸಿಎಫ್ ಪೂವಯ್ಯ ಭೇಟಿ ನೀಡಿ ಕಾರ್ಯಾಚರಣೆಯ ಬಗ್ಗೆ ಸಲಹೆ ನೀಡಿದ್ದರು.
ಕಾರ್ಯಾಚರಣೆ ಸ್ಥಳಕ್ಕೆ ಡಿಸಿ ಭೇಟಿ:
ಹುಲಿ ಸೆರೆಗೆ ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಸ್ಥಳಕ್ಕೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಶುಕ್ರವಾರ ಸಂಜೆ ಕಾರ್ಯಾಚರಣೆಯ ಬೇಸ್ ಕ್ಯಾಂಪ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಕಾರ್ಯಾಚರಣೆಯ ಬಗ್ಗೆ ವಿವರಿಸಿದರು.
48 ಗಂಟೆಯಲ್ಲ, ನಾಲ್ಕು ದಿನವಾದ್ರೂ ಸರಿ ಹುಲಿ ಕೊಲ್ಬೇಡಿ: ಅರಣ್ಯ ಸಚಿವರ ಆದೇಶ!