ಚಾಮರಾಜನಗರದಲ್ಲಿ ನಡೆದ ಐದು ಹುಲಿಗಳ ಸಾವು ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಇಂದು ಕೋರ್ಟ್‌ಗೆ ಹಾಜರುಪಡಿಸಿದದ ಅರಣ್ಯಾಧಿಕಾರಿಗಳು ತಮ್ಮ ಕಸ್ಟಡಿಗೆ ಪಡೆದಿದ್ದಾರೆ.

ಚಾಮರಾಜನಗರ (ಜೂ.28) ಮರಿ ಹಾಗೂ ತಾಯಿ ಹುಲಿ ಸೇರಿ ಐದು ಹುಲಿ ಸಾವು ಪ್ರಕರಣದ ತನಿಖೆ ಚುರುಕುಗೊಂಡಿದೆ. ದನದ ಮೇಲೆ ದಾಳಿ ಮಾಡಿದ್ದ ಸಿಟ್ಟಿಗೆ ಮೃತದದ ಮಾಂಸಕ್ಕೆ ವಿಷ ಬೆರೆಸಿದ ಪರಿಣಾಮ ಹುಲಿ ಮೃತಪಟ್ಟಿದೆ ಎಂದು ಪ್ರಾಥಮಿಕ ತನಿಖೆಗಳು ಹೇಳುತ್ತಿದೆ. ಈ ಹಿನ್ನಲೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಆರೋಪಿಗಳನ್ನು ಇಂದು ನ್ಯಾಯಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ತಮ್ಮ ಕಸ್ಟಡಿಗೆ ನೀಡಬೇಕು ಅನ್ನೋ ಮನವಿ ಪುರಸ್ಕರಿಸಿದ ನ್ಯಾಯಾಧೀಶರು ಅರಣ್ಯಾಧಿಕಾರಿಗಳ ಕಸ್ಟಡಿಗೆ ಆರೋಪಿಗಳನ್ನು ನೀಡಿದ್ದಾರೆ.

ಐದು ಹುಲಿಗಳಿಗೆ ವಿಷವಿಕ್ಕಿದ ಆರೋಪದಡಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಕಳಬೇದೊಡ್ಡಿಯ ಕೋನಪ್ಪ, ಕೊಪ್ಪ ಗ್ರಾಮದ ಮಾದುರಾಜ್ ಹಾಗು ನಾಗರಾಜು ಬಂಧಿಸಿದ್ ಇಂದು ಕೊಳ್ಳೇಗಾಲ ಪ್ರಧಾನ ಸಿವಿಲ್ ಹಾಗು ಜೆಎಂಎಫ್‌ಸಿ ನ್ಯಾಯಾಧೀಶೆ ಎಂ‌‌.ಕಾವ್ಯಶ್ರೀ ಮುಂದೆ ಹಾಜರುಪಡಿಸಲಾಗಿತ್ತು. ತಡವಾಗಿದ್ದ ಕಾರಣ ನ್ಯಾಯಾಧೀಶರ ನಿವಾಸಕ್ಕೆ ಆರೋಪಿಗಳನ್ನು ಹಾಜರುಪಡಿಸಲಿ ತಮ್ಮ ಸುಪರ್ದಿಗೆ ಅರಣ್ಯಾಧಿಕಾರಿಗಳು ಪಡೆದಿದ್ದಾರೆ.

ಬೀಟ್‌ಗೆ ಹೋಗಿಲ್ಲ ಅಧಿಕಾರಿಗಳು

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೂ ಈ ಪ್ರಕರಣದಲ್ಲಿ ಎದ್ದು ಕಾಣುತ್ತಿದೆ. ಕಳೆದ ಮೂರು ರಿಂದ ನಾಲ್ಕು ತಿಂಗಳಿನಿಂದ ಅಧಿಕಾರಿಗಳು ಬೀಟ್‌ಗೆ ತೆರಳುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಮಲೆ ಮಹದೇಶ್ವರ ವನ್ಯಧಾಮ ದಿನಗೂಲಿ ವಾಚರ್ ಸಿಬ್ಬಂದಿಗಳಿಗೆ ನಾಲ್ಕು ತಿಂಗಳಿನಿಂದ ವೇತನ ಸಿಕ್ಕಿಲ್ಲ. ಇದರಿಂದ ಮನೆಗೆ ರೇಷನ್‌ಗೂ ಸಿಬ್ಬಂದಿಗಳೂ ಪರದಾಡುತ್ತಿದ್ದಾರೆ. ಇದರಿಂದ ಸಿಬ್ಬಂದಿಗಳು ಬೀಟ್‌ಗೆ ತೆರಳುತ್ತಿಲ್ಲ ಅನ್ನೋ ಮಾಹಿತಿಯೂ ಬಯಲಾಗಿದೆ. ಬೀಟ್ ಇಲ್ಲದ ಕಾರಣ ಕಾಡುಗಳ್ಳರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿ ಬಯಲಾಗಿದೆ.

ವಾಚರ್‌ಗಗೆ ಸರಿಯಾಗಿ ವೇತನ ಸಿಕ್ಕಿದ್ದರೆ ಐದು ಹುಲಿಗಳ ಸಾವು ಸಂಭವಿಸುತ್ತಿರಲಿಲ್ಲ ಎಂದು ವಾಚರ್‌ಗಳು ಹೇಳುತ್ತಿದ್ದಾರೆ. ಅರಣ್ಯ ಇಲಾಖೆ ನಿರ್ಲಕ್ಷ್ಯ, ಕಾಡುಗಳ್ಳರು, ಬೇಟೆಗಾರರು ಅಟ್ಟಹಾಸ ಮೆರೆಯುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಚಾಮರಾಜನಗರದ ಐದು ಹುಲಿ ಸಾವು ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಕರ್ನಾಟಕದ ತಲೆ ತಗ್ಗಿಸುವಂತಾಗಿದೆ. ಅತೀ ಹೆಚ್ಚು ಹುಲಿ ಸಂರಕ್ಷಿತ ರಾಜ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರುವ ಕರ್ನಾಟಕ ಇದೀಗ ಮರಿ ಹುಲಿ, ತಾಯಿ ಹುಲಿಯನ್ನು ವಿಷುವುಣಿಸಿ ಕೊಂಡ ಕುಖ್ಯಾತಿಗೂ ಗುರಿಯಾಗಿದೆ.