ಮದುವೆಯಾಗದ ಚಿಂತೆ: ವಿಷ ಕುಡಿದು ಯುವಕ ಆತ್ಮಹತ್ಯೆ

  • ವಿಷ ಕುಡಿದು ಸಾವಿಗೆ ಶರಣಾದ ಯುವಕ
  • 34 ಆದರೂ ಮದುವೆಯಾಗದಿರುವುದಕ್ಕೆ ಆತ್ಮಹತ್ಯೆ
  • ಮಾ 17 ರಂದು ವಿಷ ಸೇವಿಸಿದ್ದ ವಿನೋದ
34 year old Man committed Suicide in Chamarajanagar for had not get married akb

ಚಾಮರಾಜನಗರ: ಮದುವೆಯಾಗದ ಕಾರಣಕ್ಕೆ ಮನನೊಂದ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆದಿದೆ. 34 ವರ್ಷದ ವಿನೋದ್‌ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಮಾ 17 ರಂದು ಬಣ್ಣ ಬಳಿಯೋ ರೂಂ ಒಳಗೆ ಸೇರಿ ವಿಷ  ಕುಡಿದಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಈತನನ್ನು ಚಿಕಿತ್ಸೆಗಾಗಿ ಚಾಮರಾಜನಗರದ (Chamarajanagara) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿನೋದ್ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ವಿನೋದ್ ತಂದೆ ಸಿದ್ದಯ್ಯ (Siddaia) ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ತನ್ನ ಮಗ ಮದುವೆಯಾಗದ್ದಕ್ಕೆ ಬೇಸರಗೊಂಡಿದ್ದ, ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಎಂದು ತಂದೆ ಸಿದ್ಧಯ್ಯ ತಿಳಿಸಿದ್ದರು. 

ಮೃತ ವಿನೋದ್‌ಗೆ (Vinod) ಐವರು ಅಣ್ಣಂದಿರು ಒಬ್ಬ ತಂಗಿ ಇದ್ದಳು, ಇವರೆಲ್ಲರಿಗೂ ವಿವಾಹವಾಗಿತ್ತು. ಆದರೆ ವಿನೋದ್ ಮಾತ್ರ ಒಂಟಿಯಾಗಿದ್ದ. ಹನೂರಿನ (Hanoor) ಅರಣ್ಯ ಇಲಾಖೆ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್‌ ಕೆಲಸ ಮಾಡುತ್ತಿದ್ದ ವಿನೋದ್‌ ವಿವಾಹವಾಗದ ಬೇಸರದಲ್ಲಿ ಕುಡಿಯೋದು ಕಲಿತಿದ್ದ. ಇದರಿಂದಲೇ ತನ್ನ ಕೆಲಸವನ್ನು ಕಳೆದುಕೊಂಡಿದ್ದ. ನಂತರ ಬೆಂಗಳೂರಿಗೆ ತೆರಳಿದ ಈತ ಅಲ್ಲಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಅಲ್ಲೂ ಆತನಿಗೆ ಯಾವುದೂ ಸರಿ ಹೋಗಿಲ್ಲ. ಮರಳಿ ಊರಿಗೆ ಬಂದ ಆತ ಜೀವನದಲ್ಲಿ ಭಾರಿ ನಿರಾಸೆ ಹೊಂದಿದ್ದ. ಇದೇ ಕಾರಣಕ್ಕೆ ಸಾವಿಗೆ ಶರಣಾಗಿದ್ದಾನೆ ಎಂದು ಆತನ ತಂದೆ ಸಿದ್ಧಯ್ಯ ತಿಳಿಸಿದ್ದಾರೆ. 

ಮಕ್ಕಳ ಸಾವು, ಅಮ್ಮನ ವಿಷ ಸೇವನೆ; ಪೊಲೀಸರ ಬೆಚ್ಚಿ ಬೀಳಿಸಿತು ರಿಪೋರ್ಟ್!

ಪ್ರಿಯತಮನಿಂದ ದೂರು ಮಾಡುತ್ತಾರೆ ಎಂಬ ಕಾರಣಕ್ಕೆ  ಯುವತಿಯೊಬ್ಬಳು ವಿಷ ಸೇವಿಸಿ ಠಾಣೆ ಎದುರು ಬಂದು ಅಸ್ವಸ್ಥಗೊಂಡಂತಹ ಘಟನೆ ಬೆಂಗಳೂರಿನ ಅಶೋಕನಗರ ಠಾಣೆ ಬಳಿ ಕೆಲ ತಿಂಗಳ ಹಿಂದೆ ನಡೆದಿತ್ತು. ಆಂಧ್ರಪ್ರದೇಶ(Andhra Pradesh) ಕಡಪಾ (Kadapa) ಜಿಲ್ಲೆಯ ಅರುಣಾ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ರಾಜ್‌ ಎಂಬ ಯುವಕನನ್ನು ಅರುಣಾ ಪ್ರೀತಿಸುತ್ತಿದ್ದರು. ಇದಕ್ಕೆ ಎರಡು ಕುಟುಂಬದಿಂದ ವಿರೋಧ ಇತ್ತು. ಅರುಣಾಳ ಪ್ರಿಯಕರ ರಾಜ್‌ಗೆ (Raj)ಬೆಂಗಳೂರಿನ ಉಮಾ ಎಂಬುವರ ಪರಿಚಯ ಇತ್ತು. ಹೀಗಾಗಿ ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಆಂಧ್ರಪ್ರದೇಶದಿಂದ ಜೂ.6ರಂದು ನಗರಕ್ಕೆ ಬಂದಿದ್ದರು.

ರಾಜ್‌ ಮಹದೇವಪುರ ಬಸ್‌ ನಿಲ್ದಾಣದಿಂದ (Mahadevpura Bus Stop)ಪರಿಚಯಸ್ಥ ಉಮಾ (Uma) ಅವರಿಗೆ ಕರೆ ಮಾಡಿ ಪ್ರಿಯತಮೆಯ ಜೊತೆ ಬಂದಿರುವ ವಿಷಯ ತಿಳಿಸಿದ್ದ, ಒಂದು ದಿನ ಉಳಿದುಕೊಳ್ಳಲು ಅವಕಾಶ ಮಾಡಿಕೊಡುವಂತೆ ಕೇಳಿದ್ದ. ಈ ವೇಳೆ ಪೋಷಕರಿಂದ ಇರುವ ಬೆದರಿಕೆ ಬಗ್ಗೆ ಉಮಾ ಬಳಿ ಹೇಳಿಕೊಂಡಿದ್ದರು. ಹೀಗಾಗಿ ಉಮಾ ಅವರ ಸೂಚನೆಯಂತೆ ಪೊಲೀಸರನ್ನು ಸಂಪರ್ಕ ಮಾಡಿದ್ದರು. ಬಳಿಕ ಅಶೋಕ ನಗರ (Ashoka Nagara) ಪೊಲೀಸರು ಪೋಷಕರನ್ನು ಸಂಪರ್ಕಿಸಿದಾಗ ಕಡಪಾ ಜಿಲ್ಲೆಯಲ್ಲಿ ಅರುಣಾ (Aruna)ನಾಪತ್ತೆ ದೂರು ದಾಖಲಾಗಿರುವ ಮಾಹಿತಿ ತಿಳಿದಿದೆ.

ಮದ್ಯವೆಂದು ತಿಳಿದು ವಿಷ ಕುಡಿದ ಮಹಿಳೆ ಸಾವು..!

ಪುತ್ರಿ ಬೆಂಗಳೂರಿನಲ್ಲಿ ಇರುವ ವಿಷಯವನ್ನು ಪೊಲೀಸರಿಂದ ತಿಳಿದ ಪೋಷಕರು ಬೆಂಗಳೂರಿನತ್ತ (Bangaluru) ಹೊರಟಿದ್ದರು. ಪೋಷಕರು ಬೆಂಗಳೂರಿಗೆ ಬಂದರೆ ತನ್ನನ್ನು ರಾಜ್‌ನಿಂದ ಬೇರ್ಪಡಿಸಿ ಕರೆದೊಯ್ಯುತ್ತಾರೆ ಎಂಬ ಆತಂಕದಿಂದ ಅರುಣಾ ಮೊದಲೇ ವಿಷ ಸೇವಿಸಿ ಬಂದಿದ್ದರು. ಠಾಣೆಯ ಹೊರಗಡೆ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಕುಳಿತಿರುವಾಗಲೇ ಅರುಣಾ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವತಿ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದಾದ ಬಳಿಕ ಯುವತಿ ಆರೋಗ್ಯ ಚೆನ್ನಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

Latest Videos
Follow Us:
Download App:
  • android
  • ios