ಉಡುಪಿ(ಜು.11): ಬೈಂದೂರುನ ತಗ್ಗರ್ಸೆ ಗ್ರಾಮದ ಹಗ್ಗೇರಿ ನಿವಾಸಿ ಭಾಗೀರಥಿ (38) ಎಂಬುವರು ಆಕಸ್ಮಿಕ ವಿಷ ಸೇವನೆಯಿಂದ ಗುರುವಾರ ಮೃತಪಟ್ಟಿದ್ದಾರೆ. ತಿಳಿಯದೇ ವಿಷವನ್ನು ಮದ್ಯವೆಂದು ಭಾವಿಸಿ ಕುಡಿದಿದ್ದಾರೆ.

ಅವರು ಜುಲೈ 6ರಂದು ಸಂಜೆ ತೋಟದಲ್ಲಿ ಕೆಲಸ ಮುಗಿಸಿ ಮದ್ಯಪಾನ ಮಾಡಿ ಮನೆಗೆ ಬಂದು, ಇಲಿಗಳನ್ನು ಕೊಲ್ಲುವುದಕ್ಕೆಂದು ಲೋಟಕ್ಕೆ ಹಾಕಿಟ್ಟಿದ್ದ ಇಲಿ ಪಾಷಾಣವನ್ನು ಮದ್ಯವೆಂದು ಭಾವಿಸಿ ಕುಡಿದಿದ್ದರು.

ಬಿಲ್‌ ನೋಡಿ ಬೆಚ್ಚಿ ಆಸ್ಪತ್ರೆಯಿಂದಲೇ ಎದ್ದು ಹೋದ ಕೊರೋನಾ ಸೋಂಕಿತರು..!

ವಿಪರೀತ ಹೊಟ್ಟೆನೋವು ಕಾಣಿಸಿಕೊಂಡ ಅವರನ್ನು ಪತಿ ಮಹೇಶ ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.