ಕಾರ್ಪೋರೇಟ್‌ ಕೆಲಸ ತೊರೆದು ಯುಪಿಎಸ್‌ಸಿ ಪರೀಕ್ಷೆ ಬರೆದ ವರ್ದಾ ಖಾನ್‌ಗೆ 18ನೇ ರಾಂಕ್

ಲೋಕಸೇವಾ ಆಯೋಗ ನಡೆಸುವ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧರಾಗಲು ಕಾರ್ಪೋರೇಟ್ ಜಾಬ್‌ ತೊರೆದಿದ್ದ 24 ವರ್ಷ ಯುವತಿ ಈಗ 20ರೊಳಗೆ Rank ಗಳಿಸುವಲ್ಲಿ ಯಶಸ್ವಿಯಾಗಿದ್ದಾಳೆ.

Varda Khan a Muslim girl who quit her Corporate Job and wrote the UPSC exam got 18th rank in UPSC 2023 result akb

ನೋಯ್ಡಾ: ಭಾರತದ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳು ದೇಶದಲ್ಲೇ ಅತ್ಯಂತ ಕ್ಲಿಷ್ಟಕರ ಪರೀಕ್ಷೆ ಎಂಬುದು ತಿಳಿದಿರುವ ವಿಚಾರ. ಇದರಲ್ಲಿ ಪಾಸಾಗಿ ಉನ್ನತ ಹುದ್ದೆ ಪಡೆಯುವ ಸಲುವಾಗಿ ಮಾಡುತ್ತಿರುವ ಕೆಲಸ, ಮನೆ ಮಠ ಬಿಟ್ಟು ಸ್ಪರ್ಧಾರ್ತಿಗಳು ಬರೀ ಪರೀಕ್ಷೆಯ ಮೇಲೆ ಗಮನ ಕೇಂದ್ರಿಕರಿಸಿರುತ್ತಾರೆ. ಅದೇ ರೀತಿ ಲೋಕಸೇವಾ ಆಯೋಗ ನಡೆಸುವ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧರಾಗಲು ಕಾರ್ಪೋರೇಟ್ ಜಾಬ್‌ ತೊರೆದಿದ್ದ 24 ವರ್ಷ ಯುವತಿ ಈಗ 20ರೊಳಗೆ Rank ಗಳಿಸುವಲ್ಲಿ ಯಶಸ್ವಿಯಾಗಿದ್ದಾಳೆ. ನಿನ್ನೆ ಯುಪಿಎಸ್‌ಸಿ 2023ನೇ ವರ್ಷದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಉತ್ತರ ಪ್ರದೇಶದ ನೋಯ್ಡಾದ  ನಿವಾಸಿ ವರ್ದಾ ಖಾನ್‌ 18ನೇ Rank ಗಳಿಸಿದ್ದಾರೆ . ಇವರು ಈ ಪರೀಕ್ಷೆಗೆ ಸಿದ್ಧರಾಗುವುದಕ್ಕಾಗಿ ತಮ್ಮ ಉತ್ತಮ ಸ್ಯಾಲರಿಯ ಕಾರ್ಪೋರೇಟ್ ಕೆಲಸವನ್ನು ತೊರೆದಿದ್ದರು. 

ಪ್ರಸ್ತುತ ಅವರಿಗೆ 18ನೇ ರಾಂಕ್ ಬಂದಿರುವ ಹಿನ್ನೆಲೆ ಅವರು ಭಾರತದ ವಿದೇಶಾಂಗ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸುವುದು ತನ್ನ ಮೊದಲ ಆದ್ಯತೆಯಾಗಿದೆ.  ಜಾಗತಿಕ ವೇದಿಕೆಗಳಲ್ಲಿ ದೇಶವನ್ನು ಹೆಮ್ಮೆ ಪಡುವಂತೆ ಮಾಡಬೇಕೆಂದು ಬಯಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಎಲ್ಲಾ ಇತರ ಪರೀಕ್ಷಾರ್ಥಿಗಳಂತೆ ನಾನು ಕೂಡ ಪರೀಕ್ಷೆಯ ಸಿದ್ಧತೆಯ ಪ್ರಯಾಣವನ್ನು ಆರಂಭಿಸಿದಾಗ ಕೇವಲ ಫಲಿತಾಂಶದ ಪಟ್ಟಿಯಲ್ಲಿ ಕೇವಲ ಹೆಸರಿದ್ದರೆ ಸಾಕು ಎಂದು ಬಯಸಿದ್ದೆ. ಆದರೆ 20ರೊಳಗೆ ನನಗೆ ರ್ಯಾಂಕ್ ಬಂದಿದ್ದು, ನಾನು ಇದರ ಕಲ್ಪನೆಯನ್ನು ಮಾಡಿರಲಿಲ್ಲ, 20ರೊಳಗೆ ಸ್ಥಾನ ಗಿಟ್ಟಿಸಿಕೊಳ್ಳುವೆ ಎಂದು ಊಹೆಯೂ ಮಾಡಿರಲಿಲ್ಲ, ಇದೊಂದು ಕನಸಿನಂತೆ ಭಾಸವಾಗ್ತಿದೆ. ಈ ಫಲಿತಾಂಶದಿಂದ ನನ್ನ ಇಡೀ ಕುಟುಂಬ ತುಂಬಾ ಖುಷಿಯಾಗಿದೆ. ಅಲ್ಲದೇ ಹೆಮ್ಮೆಪಡುತ್ತಿದೆ  ಎಂದು ವರ್ದಾ ಖಾನ್ ಹೇಳಿದ್ದಾರೆ. 

UPSC Civil Services Exam Result 2023: ಯುಪಿಎಸ್‌ಸಿ ಫಲಿತಾಂಶ ಪ್ರಕಟ, ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್

ನಾನು ಭಾರತೀಯ ವಿದೇಶಾಂಗ ಸೇವೆಯನ್ನು (IFS) ನನ್ನ ಮೊದಲ ಆದ್ಯತೆಯಾಗಿ ಆರಿಸಿಕೊಂಡಿದ್ದೇನೆ, ಹಾಗಾಗಿ ಜಾಗತಿಕ ವೇದಿಕೆಗಳು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಾದ್ಯಂತ ಭಾರತದ ಸ್ಥಾನಮಾನವನ್ನು ಅನ್ನು ಹೆಚ್ಚಿಸಲು ಮತ್ತು ವಿದೇಶದಲ್ಲಿರುವ ನಮ್ಮ ಭಾರತೀಯ ವಲಸಿಗರಿಗೆ ಸಹಾಯ ಮಾಡಲು ನಾನು ಬಯಸುತ್ತೇನೆ ಎಂದು ವರ್ದಾ ಖಾನ್ ಹೇಳಿದ್ದಾರೆ. 

ನೋಯ್ಡಾದ ಸೆಕ್ಟರ್ 82ರಲ್ಲಿ ಬರುವ ವಿವೇಕ ವಿಹಾರದ ನಿವಾಸಿಯಾಗಿರುವ ವರ್ದಾ ಖಾನ್ ದೆಹಲಿ ವಿಶ್ವವಿದ್ಯಾಲಯಕ್ಕೆ ಸೇರುವ ಖಲ್ಸಾ ಕಾಲೇಜಿನಿಂದ ಕಾಮರ್ಸ್‌ನಲ್ಲಿ ಪದವಿ ಪಡೆದಿದ್ದಾರೆ.  ತಮ್ಮ ಪೋಷಕರ ಏಕೈಕ ಪುತ್ರಿಯಾಗಿದ್ದು, ಅಪ್ಪ 9 ವರ್ಷಗಳ ಹಿಂದೆ ತೀರಿಕೊಂಡಿದ್ದು, ಅಮ್ಮನೊಂದಿಗೆ ವಾಸ ಮಾಡ್ತಿದ್ದಾರೆ. ಯುಪಿಎಸ್‌ ಬಗ್ಗೆ ಆಸಕ್ತಿ ಹೇಗೆ ಬಂತು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನನಗೆ ನನ್ನ ಕಾಲೇಜು ದಿನಗಳಿಂದಲೂ ಇತಿಹಾಸ, ರಾಜಕೀಯ ಭೌಗೋಳಿಕ ರಾಜಕೀಯದಲ್ಲಿ ಆಸಕ್ತಿ ಇತ್ತು. ಕಾಲೇಜು ದಿನಗಳಲ್ಲದೇ  ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದೆ ಆದರೆ ಆಗ ನಾಗರಿಕ ಸೇವೆಯನ್ನೇ ವೃತ್ತಿಯಾಗಿಸುವ ಬಗ್ಗೆ ಯೋಚನೆ ಬಂದಿರಲಿಲ್ಲ  ಆದರೆ ಕೆಲಸಕ್ಕೆ ಸೇರಿದ ಮೇಲೆ ಈ ಬಗ್ಗೆ ಯೋಚನೆ ಬಂತು ಎಂದು ಅವರು ಹೇಳಿದ್ದಾರೆ. 

ರೈತನ ಮಗ, 2ನೇ ಅತೀ ದೊಡ್ಡ ಇಲೆಕ್ಷನ್ ಬಾಂಡ್‌ನ ಖರೀದಿದಾರ ಕೆಪಿ ರೆಡ್ಡಿ ಯಾರು?
 

 

 

Latest Videos
Follow Us:
Download App:
  • android
  • ios