Asianet Suvarna News Asianet Suvarna News

ಉದ್ಯೋಗ ಬಿಟ್ಟು UPSC ಬರೆದ ವಿಧು ಶೇಖರ್‌ಗೆ ಶಾಕ್, 4ನೇ ಪ್ರಯತ್ನದಲ್ಲಿ ಗೆಲುವು!

* ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ

* ಸರಣಿಯ 9ನೇ ಸಂಚಿಕೆಯಲ್ಲಿ 54 ನೇ Rank ಪಡೆದ ವಿಧು ಶೇಖರ್(Vidhu Shekhar) ಜೊತೆ ಸಂವಾದ

* ನಾಲ್ಕನೇ ಪ್ರಯತ್ನದಲ್ಲಿ UPSC ಟಾಪರ್ ಆದ ವಿಧು ಶೇಖರ್
 

UPSC 2020 Topper Vidhu Shekhar From Uttar Pradesh Asianet News Exclusive Interview pod
Author
Bangalore, First Published Oct 18, 2021, 5:00 PM IST
  • Facebook
  • Twitter
  • Whatsapp

ನವದೆಹಲಿ(ಅ.18) ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ 24 ರಂದು ಹೊರಬಿದ್ದಿದೆ. ಅಂತಿಮ ಫಲಿತಾಂಶದಲ್ಲಿ ಒಟ್ಟು 761 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಏಷ್ಯಾನೆಟ್‌ ನ್ಯೂಸ್‌(Asianet News) UPSC ಆಯ್ಕೆ ಮಾಡಿದ 100 ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದೆ. ಈ ಸರಣಿ ಸಂದರ್ಶನದ(UPSC Interview) ಮೂಲಕ ಅಭ್ಯರ್ಥಿಗಳ ಯಶಸ್ಸಿನ ಗುಟ್ಟು ಅನಾವರಣಗೊಳಿಸಿದೆ. ಈ ಸರಣಿಯ 9ನೇ ಸಂಚಿಕೆಯಲ್ಲಿ, 54 ನೇ Rank ಪಡೆದ ವಿಧು ಶೇಖರ್(Vidhu Shekhar) ಅವರ ಸದರ್ಶನ ಪಡೆಯಲಾಗಿದೆ. ತನ್ನ ಯಶಸ್ಸಿನ ಪ್ರಯಾಣದ ಬಗ್ಗೆ ತಿಳಿಸಿರುವ ವಿಧು, ಇದರೊಂದಿಗೆ ಯುವಕರಿಗೆ ಹಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ದೇಶದ ಬೆಳವಣಿಗೆಯಲ್ಲಿ ನೀವು ಕೊಡುಗೆ ನಿಡಲು ಬಯಸಿದರೆ, ನಾಗರಿಕ ಸೇವೆ ಅತ್ಯುತ್ತಮ ವೇದಿಕೆ ಎಂದು ತಿಳಿಸಿದ್ದಾರೆ. ವಿಧು ಶೇಖರ್ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIT), ಅಲಹಾಬಾದ್‌ನಲ್ಲಿ ಪದವಿ ಪಡೆದಿದ್ದಾರೆ.

ಅತ್ತ ತಂದೆ ನಿಧನ, ಇತ್ತ UPSC ಸಂದರ್ಶನ: ಕನಸು ನನಸಾಗಿಸಿದ ದಿವ್ಯಾಂಶು!

2018 ರಲ್ಲಿ ಭಾರತೀಯ ಕಂದಾಯ ಸೇವೆಯಲ್ಲಿ ಆಯ್ಕೆ

ಮತ್ತೊಮ್ಮೆ ವಿಧು ಶೇಖರ್ ಯುಪಿಎಸ್ಸಿಯ 2018ರ ಪರೀಕ್ಷೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆಗ ಅವರು 173 ನೇ Rank ಪಡೆದಿದ್ದರು. ಹೀಗಾಗಿ ಭಾರತೀಯ ಕಂದಾಯ ಸೇವೆಯಲ್ಲಿ (Income Toax) ಅವರು ಆಯ್ಕೆಯಾಗಿದ್ದರು. ಪ್ರಸ್ತುತ ಅವರು ನ್ಯಾಷನಲ್ ಅಕಾಡೆಮಿ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಎನ್‌ಎಡಿಟಿ), ನಾಗ್ಪುರದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಆದರೆ ತರಬೇತಿಯ ಸಮಯದಲ್ಲಿಯೂ ಅವರು ಪರೀಕ್ಷೆಗೆ ತಯಾರಿ ಮುಂದುವರಿಸಿ, ಯುಪಿಎಸ್‌ಸಿಯ 2019ನೇ ಸಾಲಿನ ಪರೀಕ್ಷೆಯನ್ನು ಎದುರಿಸಿದ್ದರು. ಅದರಲ್ಲಿ ಯಶಸ್ಸನ್ನೂ ಪಡೆದರು. ಇನ್ನು ಮೂರನೇ ಪ್ರಯತ್ನದಲ್ಲಿ 191 ನೇ Rank ಪಡೆದಿದ್ದರು.

ಕೆಲಸ ಬಿಡುವ ನಿರ್ಧಾರ ಸುಲಭವಲ್ಲ

ವಿಧು ಶೇಖರ್ ಆಗಸ್ಟ್ 2017 ರಲ್ಲಿ ಕೆಲಸವನ್ನು ತೊರೆದರು ಹಾಗೂ ನವೆಂಬರ್ 2017 ರಲ್ಲಿ ಮುಖ್ಯ ಪರೀಕ್ಷೆಗೆ ಹಾಜರಾದರು. ಯುಪಿಎಸ್ಸಿಯಲ್ಲಿ ಅದು ಅವರ ಮೊದಲ ಪ್ರಯತ್ನ. ಮುಖ್ಯ ಪರೀಕ್ಷೆಯ ಫಲಿತಾಂಶಗಳು ಜನವರಿಯಲ್ಲಿ ಬಂದಾಗ, ಅವನು ಅದರಲ್ಲಿ ಉತ್ತೀರ್ಣರಾಗಿರಲಿಲ್ಲ. ಇದು ಅವರಿಗೆ ಆಘಾತ ಕೊಟ್ಟಿತ್ತು. ಇದಾದ ಬಳಿಕ ಕೆಲಸ ಬಿಡುವ ಮೂಲಕ ರಿಸ್ಕ್ ತೆಗೆದುಕೊಂಡಿದ್ದೇನೆ ಎಂದು ಭಾವಿಸಿದರು. ಇದು ಸ್ವಂತ ಕರಿಯರ್ ಪಣಕ್ಕಿಟ್ಟಂತೆ ಎಂದು ವಿಧು ಹೇಳಿದ್ದಾರೆ. ಯಾಕೆಂದರೆ ಖಾಸಗಿ ವಲಯದ;ಲ್ಲಿ ವೃತ್ತಿಪರರು ಎರಡು-ಮೂರು ವರ್ಷಗಳ ಕಾಲ ಕೆಲಸ ಮಾಡದಿದ್ದರೆ, ಭವಿಷ್ಯದಲ್ಲಿ ಉದ್ಯೋಗವನ್ನು ಪಡೆಯುವುದು ಕಷ್ಟವಾಗುತ್ತದೆ. ಪ್ರಸ್ತುತ ಅರ್ಹ ವೃತ್ತಿಪರರಿಗೆ ಕೊರತೆಯಿಲ್ಲ. ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಯುಪಿಎಸ್ಸಿಯಲ್ಲಿ ಯಶಸ್ವಿಯಾಗದಿದ್ದರೆ, ಅವರು ತಮ್ಮ ವೃತ್ತಿಜೀವನದಲ್ಲಿ ಮುಂದಿವರೆಯುವುದು ಹೇಗೆ ಎಂಬ ಚಿಂತೆ ಅವರನ್ನು ಕಾಡಿತ್ತು. ಆದರೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತೇನೆ ಎಂಬ ನಂಬಿಕೆ ಅವರಿಗಿತ್ತು. ಅವರ ಈ ಆತ್ಮವಿಶ್ವಾಸ ಅವರಿಗೆ ಪ್ರೇರಣೆಯಾಯಿತು.

ದೇಶಸೇವೆಗಾಗಿ ಮೂರು ವರ್ಷ ಸೋಶಿಯಲ್ ಮೀಡಿಯಾದಿಂದ ದೂರ ಉಳಿದ ಅಂಜಲಿ!

ವಿಫಲವಾದ ನಂತರ ನಿಮ್ಮ ನ್ಯೂನತೆಗಳನ್ನು ತಿಳಿದುಕೊಳ್ಳಿ

ಯುಪಿಎಸ್ ಸಿ ಪರೀಕ್ಷೆ ತಯಾರಿ ಮತ್ತು ಆಯ್ಕೆಯ ಪ್ರಯಾಣ ಬಹಳ ಸುದೀರ್ಘವಾದದ್ದು, ಈ ಪ್ರಯಾಣದಲ್ಲಿ ನಿಮ್ಮ ಪ್ರೇರಣೆಯನ್ನು ನೀವು ಕಾಪಾಡಿಕೊಳ್ಳಬೇಕು. ಕಠಿಣ ಪರಿಶ್ರಮ ಅತೀ ಮುಖ್ಯ. ಅನೇಕ ಜನರು ತುಂಬಾ ಕಷ್ಟಪಡುತ್ತಾರೆ. ಒಬ್ಬ ವ್ಯಕ್ತಿಯೊಬ್ಬ ಕಠಿಣ ಪರಿಶ್ರಮಪಟ್ಟರೆ ಯಶಸ್ಸು ಸಿಗುತ್ತದೆ. ಯಶಸ್ಸನ್ನು ಪಡೆಯದಿರಲು ಕಾರಣವೇನೆಂದು ತಿಳಿದು, ತಪ್ಪು ಸುಧಾರಿಸಿದರೆ, ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ ಎಂದು ವಿಧು ಹೇಳುತ್ತಾರೆ. ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ಅವರು ತನ್ನ ನ್ಯೂನತೆಗಳನ್ನು ಅರ್ಥಮಾಡಿಕೊಂಡರು ಮತ್ತು ಅವುಗಳನ್ನು ಸರಿಪಡಿಸಿದರು. ನೀವು ಹೆಚ್ಚು ಯೋಚಿಸಿದರೆ ನಿಮಗೆ ನಿರಾಶೆಯಾಗುತ್ತದೆ ಎಂದು ವಿಧು ಹೇಳುತ್ತಾರೆ. ನಿಮ್ಮ ಪ್ರಯತ್ನ ಮಾಡಿ, ಯೋಜಿಸಿ ಮತ್ತು ಅದಕ್ಕೆ ನೀವು ಬದ್ಧಾರಾಗಿರಿ. ನೀವು ನಿರಾಶೆಗೊಂಡಾಗಲೆಲ್ಲಾ. ಸ್ನೇಹಿತರು, ಕುಟುಂಬ ಮತ್ತು ಶಿಕ್ಷಕರೊಂದಿಗೆ ಚರ್ಚಿಸಿ. ಅದು ನಿಮಗೆ ಸಹಾಯ ಮಾಡುತ್ತದೆ ಎಂದಿದ್ದಾರೆ

ನೀವು ದೇಶದ ಬೆಳವಣಿಗೆಗೆ ಕೊಡುಗೆ ನೀಡಲು ಬಯಸಿದರೆ ನಾಗರಿಕ ಸೇವೆಯು ಉತ್ತಮ ವೇದಿಕೆ

ವಿಧು ಶೇಖರ್ ಹೇಳುವಂತೆ ಭಾರತವು ಅವಕಾಶಗಳ ನಾಡು. ನಮ್ಮ ದೇಶ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನೀವು ಯಾವ ಕ್ಷೇತ್ರಕ್ಕೆ ಹೋಗಲು ಬಯಸುತ್ತೀರೋ, ಅಲ್ಲಿ ನಿಮಗೆ ಸಾಕಷ್ಟು ಅವಕಾಶಗಳಿವೆ. ಮುಂಬರುವ ದಶಕದಲ್ಲಿ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತದೆ. ನೀವು ನಾಗರಿಕ ಸೇವೆಗೆ ಸೇರಲು ಬಯಸಿದರೆ ಇದಕ್ಕೂ ಅವಕಾಶವುದೆ. ಭಾರತದ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರ ಇರಬಬೇಕೆಂದು ಬಯಸುತ್ತೀರೆಂದಾದರೆ ಈ ವೇದಿಕೆ ಒಂದು ಪ್ರಮುಖ ಅವಕಾಶ, ನಾಗರಿಕ ಸೇವೆಗಳು ಉತ್ತಮ ವೇದಿಕೆಯಾಗಿರುತ್ತದೆ. ನಿಮಗೆ ಇಷ್ಟವಿಲ್ಲದಿದ್ದರೆ, ಇನ್ನೂ ಅನೇಕ ಅವಕಾಶಗಳಿವೆ. ಆಡಳಿತಾತ್ಮಕ ಸೇವೆ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಉತ್ತಮ ವೃತ್ತಿ ಆಯ್ಕೆಯಾಗಿದೆ. ನೀವು ಇಲ್ಲಿ ಕೆಲಸ ಮಾಡಿದರೆ ನೀವು ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಿದ್ದೀರಿ ಎಂಬ ತೃಪ್ತಿಯನ್ನು ಪಡೆಯುತ್ತೀರಿ ಎಂದಿದ್ದಾರೆ ವಿಧು.

1 ಹಾಗೂ 2ನೇ ಬಾರಿ ವಿಫಲ, ಮರಳಿ ಪ್ರಯತ್ನಿಸಿದ ವರುಣಾ UPSC ಟಾಪರ್ ಆಗಿದ್ದು ಹೀಗೆ!

ದಿನಕ್ಕೆ 8 ಗಂಟೆ ಅಧ್ಯಯನ 

ವಿಧು ಶೇಖರ್ ದಿನಕ್ಕೆ ಸುಮಾರು 8 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಕೊರೋನಾದಿಂದ ಯುಪಿಎಸ್‌ಸಿಯ ಸಿದ್ಧತೆಗೆ ಅಡ್ಡಿಯಾಗುತ್ತಿತ್ತು. ಹೀಗಿರುವಾಗ ಅವರು, ಆನ್‌ಲೈನ್ ಮೋಡ್ ಆಶ್ರಯಿಸಿದರು. ಮುಖ್ಯ ಪರೀಕ್ಷೆಯ ಟ್ಯುಟೋರಿಯಲ್ ಸಹ ಸಹಾಯ ಮಾಡಿದ್ದರೆ. ಇತರ ವಿಷಯಗಳಿಗೆ ಶಿಕ್ಷಕರು ಅವರನ್ನು ಬೆಂಬಲಿಸಿದರು. ಸ್ವಯಂ ಅಧ್ಯಯನ ಕೂಡ ಮಾಡಿದ್ದಾರೆ. ತರಬೇತಿಯ ವೇಳೆಗೆ ಸಮಯ ಸಿಕ್ಕಾಗಲೆಲ್ಲಾ ಅವರು ಪರೀಕ್ಷೆಗೆ ತಯಾರಿ ಮಾಡುವಲ್ಲಿ ನಿರತರಾಗಿದ್ದರು. ಅವರು UPSC 2020 ಪರೀಕ್ಷೆಯಲ್ಲಿ ತರಬೇತಿಯ ಮಧ್ಯೆ ಪರೀಕ್ಷೆ ಬರೆದಿದ್ದರು. ಹೀಗಿರುವಾಗ ತರಬೇತಿ ನಿಯೋಜನೆಗಳನ್ನು ಪೂರ್ಣಗೊಳಿಸುವುದು ಮತ್ತು ಅಧ್ಯಯನದ ಮೇಲೆ ಕೇಂದ್ರೀಕರಿಸುವುದು ಒಂದು ಸವಾಲಾಗಿತ್ತು. ಆದರೆ ಅವರದನ್ನು ಸ್ವೀಕರಿಸಿ ಗೆದ್ದಿದ್ದಾರೆ. ಇನ್ನು ಚಲನಚಿತ್ರ ವೀಕ್ಷಣೆ ಮತ್ತು ಫುಟ್ಬಾಲ್ ಪಂದ್ಯಗಳನ್ನು ನೋಡುವುದು ಅವರ ನೆಚ್ಚಿನ ಹಬವ್ಯಾಸವಾಗಿದೆ. 

UPSC ಟಾಪರ್‌ ಆಗಿ 'ನಿನ್ನಿಂದಾಗಲ್ಲ' ಎಂದವರ ಬಾಯಿ ಮುಚ್ಚಿಸಿದ ಭಾನು ಪ್ರತಾಪ್!

Follow Us:
Download App:
  • android
  • ios