Asianet Suvarna News Asianet Suvarna News

ಅತ್ತ ತಂದೆ ನಿಧನ, ಇತ್ತ UPSC ಸಂದರ್ಶನ: ಕನಸು ನನಸಾಗಿಸಿದ ದಿವ್ಯಾಂಶು!

* ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ

* ಸರಣಿಯ 6ನೇ ಸಂಚಿಕೆಯಲ್ಲಿ 44 ನೇ Rank ಪಡೆದ ದಿವ್ಯಾಂಶು ನಿಗಮ್ ಜೊತೆ ಸಂವಾದ

* ಮೂರನೇ ಪ್ರಯತ್ನದಲ್ಲಿ UPSC ಟಾಪರ್ ಆದ ದಿವ್ಯಾಂಶು

UPSC 2020 Topper Divyanshu Nigam From Lucknow Asianet News Exclusive Interview pod
Author
Bangalore, First Published Oct 16, 2021, 5:25 PM IST

ನವದೆಹಲಿ(ಅ.16): ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ 24 ರಂದು ಹೊರಬಿದ್ದಿದೆ. ಅಂತಿಮ ಫಲಿತಾಂಶದಲ್ಲಿ ಒಟ್ಟು 761 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಏಷ್ಯಾನೆಟ್‌ ನ್ಯೂಸ್‌(Asianet News) UPSC ಆಯ್ಕೆ ಮಾಡಿದ 100 ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದೆ. ಈ ಸರಣಿ ಸಂದರ್ಶನದ(UPSC Interview) ಮೂಲಕ ಅಭ್ಯರ್ಥಿಗಳ ಯಶಸ್ಸಿನ ಗುಟ್ಟು ಅನಾವರಣಗೊಳಿಸಿದೆ. ಈ ಸರಣಿಯ 8ನೇ ಸಂಚಿಕೆಯಲ್ಲಿ 44 ನೇ Rank ಪಡೆದ ಲಕ್ನೋದ ದಿವ್ಯಾಂಶು ನಿಗಮ್(Divyanshu Nigam) ಅವರ ಸಂದರ್ಶನ ಪಡೆಯಲಾಗಿದೆ. ದಿವ್ಯಾಂಶು, ಬಿಟ್ಸ್ ಪಿಲಾನಿಯ ಗೋವಾ ಕ್ಯಾಂಪಸ್‌ನಿಂದ ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅವರು ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಲಿಲ್ಲ. ಇನ್ನು ಎರಡನೇ ಪ್ರಯತ್ನದಲ್ಲಿ ಅವರು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ಸಂದರ್ಶನದವರೆಗೆ ತಲುಪಲು ಸಾಧ್ಯವಾಗಲಿಲ್ಲ. ಆದರೆ ಮೂರನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದರು. ಅವರ ತಂದೆ ಶ್ಯಾಮ್ ಕುಮಾರ್ ನಿಗಮ್ ಭಾರತೀಯ ಅರಣ್ಯ ಸೇವೆಯಲ್ಲಿದ್ದರು. ಬಾಲ್ಯದಿಂದಲೂ, ಮನೆಯಲ್ಲಿ ಕಲಿಕೆಯ ವಾತಾವರಣವಿತ್ತು.

ದೇಶಸೇವೆಗಾಗಿ ಮೂರು ವರ್ಷ ಸೋಶಿಯಲ್ ಮೀಡಿಯಾದಿಂದ ದೂರ ಉಳಿದ ಅಂಜಲಿ!

ಸಂದರ್ಶನಕ್ಕೆ ತಯಾರಿ ಮಾಡುವಾಗ ತಂದೆ ತೀರಿಕೊಂಡರು

ಕೊರೋನಾದ ಎರಡನೇ ಅಲೆಯ ಸಮಯದಲ್ಲಿ, ದಿವ್ಯಾಂಶು ನಿಗಮ್ ಸಂದರ್ಶನಕ್ಕೆ ತಯಾರಿ ನಡೆಸುತ್ತಿದ್ದಾಗ, ಅವರ ತಂದೆಯ ಆರೋಗ್ಯ ಹದಗೆಟ್ಟಿತು. ಹೀಗಿರುವಾಗ ಅವರು ಆಸ್ಪತ್ರೆಯಲ್ಲಿ ನಿಧನರಾದರು. ಅವರ ತಂದೆಯ ಸಾವು ದಿವ್ಯಾಂಶುಗೆ ಅಸಹನೀಯವಾಗಿತ್ತು. ಮಗ ಮೂರನೇ ಪ್ರಯತ್ನದಲ್ಲಿ ಸಂದರ್ಶನಕ್ಕೆ ಬಂದಿದ್ದರಿಂದ ಆತನ ತಂದೆಗೆ ತುಂಬಾ ಸಂತೋಷವಾಗಿತ್ತು. ಆದರೆ ಪುತ್ರ ದಿವ್ಯಾಂಶು ಐಎಎಸ್ ಆಗುವುದನ್ನು ನೋಡಲು ಸಾಧ್ಯವಾಗಲಿಲ್ಲ. ಇದಾದ ನಂತರವೂ ದಿವ್ಯಾಂಶು ತನ್ನನ್ನು ಸಾವರಿಸಿಕೊಂಡು, ಸಂದರ್ಶನಕ್ಕೆ ತಯಾರಿ ಆರಂಭಿಸಿದರು.

ತನ್ನನ್ನು ತಾನು ಹೀಗೆ ಪ್ರೇರೇಪಿಸುತ್ತಿದ್ದರು

ಅಧ್ಯಯನ ಮುಖ್ಯ ಎಂದು ದಿವ್ಯಾಂಶು ಹೇಳುತ್ತಾರೆ. ನೀವು ಶಿಸ್ತಿನಿಂದ ಅಧ್ಯಯನ ಮಾಡಬೇಕು. ಜೀವನದಲ್ಲಿ ಏರಿಳಿತಗಳಿವೆ. ಯುಪಿಎಸ್‌ಸಿಯ ತಯಾರಿಕೆಯಲ್ಲಿ ಹತಾಶೆ ಅಥವಾ ನಿರಾಶೆ ಉಂಟಾದಾಗಲೆಲ್ಲ, ನೀವು ಯಾಕೆ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೀರಿ ಎಂದು ಮೊದಲು ಯೋಚಿಸಿ ಎಂದು ಅವರು ಹೇಳುತ್ತಾರೆ. ತಾನು ಕೂಡ ನಿರಾಶೆಗೊಂಡಾಗ, ಇದೇ ರೀತಿಯಲ್ಲಿ ಪ್ರೇರೇಪಿಸುತ್ತಿದ್ದೆ. ಕುಟುಂಬ ಮತ್ತು ಸ್ನೇಹಿತರು ಹುರಿದುಂಬಿಸಿದರು. ತಂದೆ ಭಾರತೀಯ ಅರಣ್ಯ ಸೇವೆಯಲ್ಲಿದ್ದರು, ಆದ್ದರಿಂದ ಅವರು ಬಾಲ್ಯದಿಂದಲೂ ಅಂತಹ ವಾತಾವರಣವಿತ್ತು. ಅಲ್ಲದೇ ನಾಗರಿಕ ಸೇವೆಯ ಮೂಲಕ, ಒಳ್ಳೆಯ ಕೆಲಸಗಳನ್ನು ಮಾಡಲು ಅವಕಾಶ ಸಿಗುತ್ತದೆ ಎಂದು ಅವರಿಗೆ ತಿಳಿದಿತ್ತು. ಹೆಮ್ಮೆಯ ಭಾವನೆ ಇರುತ್ತದೆ. ಹೀಗೆ ದಿವ್ಯಾಂಶು ತನ್ನ ಕುಟುಂಬದಿಂದ ಬೆಂಬಲದೊಂದಿಗೆ ಮುಂದುವರೆದರು.

1 ಹಾಗೂ 2ನೇ ಬಾರಿ ವಿಫಲ, ಮರಳಿ ಪ್ರಯತ್ನಿಸಿದ ವರುಣಾ UPSC ಟಾಪರ್ ಆಗಿದ್ದು ಹೀಗೆ!

ನೀವು ಪರೀಕ್ಷೆಗೆ ಏಕೆ ತಯಾರಿ ಮಾಡುತ್ತಿದ್ದೀರಿ ಎಂದು ನಿರ್ಧರಿಸಿ

ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೀರಿ ಎಂದು ಅರ್ಥ ಮಾಡಿಕೊಳ್ಳಿ, ನಿರ್ಧರಿಸಿ ಎಂದು ದಿವ್ಯಾಂಶು ಹೇಳಿದ್ದಾರೆ. ಪ್ರತಿದಿನ ಗಮನಹರಿಸಿ ಓದಿ. UPSC ಯ ಪಠ್ಯಕ್ರಮದ ಪ್ರಕಾರ ಅಧ್ಯಯನ ಮಾಡಿ. ನೀವು ಹತಾಶರಾಗಿರುವಾಗ, ನೀವು ಯಾಕೆ ಈ ಕ್ಷೇತ್ರಕ್ಕೆ ಬಂದಿರೆಂದಸು ನೆನಪಿಸಿಕೊಳ್ಳಿ. ಬರೆಯುವುದನ್ನು ಅಭ್ಯಾಸ ಮಾಡಿ. ನಿಮ್ಮನ್ನು ವಿಚಲಿತಗೊಳಿಸುವ ವಿಷಯಗಳನ್ನು ನಿರ್ಲಕ್ಷಿಸಿ. ದಿನಕ್ಕೆ ಎಂಟು ಗಂಟೆಗಳ ಕಾಲ ಗಮನಕೊಟ್ಟು ಅಧ್ಯಯನ ಮಾಡಿ.

UPSC ಟಾಪರ್‌ ಆಗಿ 'ನಿನ್ನಿಂದಾಗಲ್ಲ' ಎಂದವರ ಬಾಯಿ ಮುಚ್ಚಿಸಿದ ಭಾನು ಪ್ರತಾಪ್!

ತಂದೆಗೆ ಮನ್ನಣೆ ನೀಡಿ

ಯಶಸ್ಸಿನ ಶ್ರೇಯವನ್ನು ತನ್ನ ತಂದೆಗೆ ನೀಡುತ್ತಾ, ದಿವ್ಯಾಂಶು ಪುಸ್ತಕಗಳು ಬಹಳಷ್ಟು ಕಲಿಸುತ್ತವೆ ಎಂದು ಹೇಳಿದ್ದಾರೆ. ಶಿಕ್ಷಕರ ಕೊಡುಗೆಯೂ ಬಹಳ ಮಹತ್ವದ್ದು. ಸಂದರ್ಶನದ ದಿನದಂದು ಸ್ವಲ್ಪ ಆತಂಕವಾಗಿದೆ, ಆದರೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ಕೊಂಚ ಸಮಾಧಾನವಾಯ್ತು ಎಂದಿದ್ದಾರೆ.

Follow Us:
Download App:
  • android
  • ios