Asianet Suvarna News Asianet Suvarna News

Southern Railway Recruitment 2022: ವಿವಿಧ 21 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ದಕ್ಷಿಣ ರೈಲ್ವೆ

ದಕ್ಷಿಣ ರೈಲ್ವೆಯು ಖಾಲಿ ಇರುವ ವಿವಿಧ ಹುದ್ದೆಗಳಿಗೆ ಕ್ರೀಡಾ ಕೋಟಾದ ಮೇಲೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜನವರಿ 2, 2023ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

Southern Railway Recruitment 2022 notification for various 21 post gow
Author
First Published Dec 8, 2022, 3:58 PM IST

ಬೆಂಗಳೂರು (ಡಿ.8): ದಕ್ಷಿಣ ರೈಲ್ವೆಯು ಖಾಲಿ ಇರುವ ವಿವಿಧ ಹುದ್ದೆಗಳಿಗೆ ಕ್ರೀಡಾ ಕೋಟಾದ ಮೇಲೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಕ್ಷಿಣ ರೈಲ್ವೆಯ ಅಧಿಕೃತ ಸೈಟ್, iroams.com ನಲ್ಲಿ RRC ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 2, 2023 ರವರೆಗೆ  ಕಾಲಾವಕಾಶವಿದೆ. ಈ ನೇಮಕಾತಿ ಅಭಿಯಾನವು ಸಂಸ್ಥೆಯಲ್ಲಿ 21 ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳಿಗಾಗಿ ಮುಂದೆ ಓದಿ.

ಶೈಕ್ಷಣಿಕ ವಿದ್ಯಾಭ್ಯಾಸ: ದಕ್ಷಿಣ ರೈಲ್ವೆಯು ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. ಅದರಂತೆ 12 ನೇ ತರಗತಿ ಮತ್ತು ಪದವಿ ಪಾಸಾಗಿರಬೇಕು.

ವಯೋಮಿತಿ: ದಕ್ಷಿಣ ರೈಲ್ವೆಯು ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯ ವಯೋಮಿತಿಯು 18 ರಿಂದ 25 ವರ್ಷಗಳ ಒಳಗೆ ಇರಬೇಕು.

ಅರ್ಜಿ ಶುಲ್ಕ: ಅರ್ಜಿ ಸಲ್ಲಿಸಲು ಇಚ್ಚಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ  500 ರೂ,  ಮತ್ತು ಎಸ್‌ಸಿ/ಎಸ್‌ಟಿ/ಮಹಿಳೆಯರು/ ಮಾಜಿ ಸೈನಿಕರು/ವಿಕಲಚೇತನರು/ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ  250ರೂ.  ಆನ್‌ಲೈನ್ ಶುಲ್ಕ ಪಾವತಿಯನ್ನು ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮಾಡಬಹುದು.

BEL Recruitment 2022: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ

ವೇತನ ವಿವರ: ದಕ್ಷಿಣ ರೈಲ್ವೆಯು ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 19900  ರೂ ನಿಂದ 29200 ರೂ ವರೆಗೆ ವೇತನ ದೊರೆಯಲಿದೆ. 

ಕೆಲಸ ಕೊಡದೆ ಬೀದಿಯಲ್ಲಿಟ್ಟ ಸರ್ಕಾರ, ದಯಾಮರಣಕ್ಕೆ ಅನುಮತಿ ಕೊಡಿ ಅಂತ 500ಕ್ಕೂ ಹೆಚ್ಚು ಅಭ್ಯರ್ಥಿಗಳ ಮನವಿ!

30 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ
ಬೆಳಗಾವಿ: ಸಾರ್ವಜನಿಕ ಹಾಗೂ ರೈತರ ಅನುಕೂಲಕ್ಕಾಗಿ ಇಲ್ಲಿನ ರೈಲ್ವೆ ನಿಲ್ದಾಣದ ಹತ್ತಿರ .30 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡುವುದಾಗಿ ರಾಜ್ಯಸಭಾ ಸದಸ್ಯ ಹಾಗೂ ನೈರುತ್ಯ ಸಲಹಾ ಸಮಿತಿ ಈರಣ್ಣ ಕಡಾಡಿ ಹೇಳಿದರು. ಅವರು ಸೋಮವಾರ ರೈಲ್ವೆ ಅಧಿಕಾರಿಗಳೊಂದಿಗೆ ಘಟಪ್ರಭಾ ರೈಲ್ವೆ ನಿಲ್ದಾಣದ ಹತ್ತಿರ ಮೇಲ್ಸೇತುವೆ ನಿರ್ಮಾಣದ ಸ್ಥಳ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಾರ್ಚ್- ಏಪ್ರಿಲ್‌ನಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಅದರಿಂದ ಮಲ್ಲಾಪೂರ ಪಿಜಿ ಭಾಗದ ಸಾರ್ವಜನಿಕರಿಗೆ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ತುಂಬಾ ಅನುಕೂಲವಾಗುತ್ತದೆ. 

ಅಲ್ಲದೇ ಇಲ್ಲಿನ ನಿಲ್ದಾಣದ ಹತ್ತಿರ ಅಂಡರ್‌ ಬ್ರಿಡ್ಜ್‌ ಮಾಡಿಸಲು ಸಾರ್ವಜನಿಕರು ಕೇಳಿದ್ದು ಅದರ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಇಲ್ಲಿನ ಬಸವನಗರ ಹತ್ತಿರ ರೈಲ್ವೆ ಡಬ್ಬಲ್‌ ಟ್ರ್ಯಾಕ್‌ ಆದ ನಂತರ ಸಾರ್ವಜನಿಕರಿಗೆ ನಡೆದಾಡಲು ತೊಂದರೆಯಾಗಿರುವ ಕಾರಣ ಅದನ್ನು ಸಹ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಪಾಶ್ಚಾಪೂರ, ಪರಕನಟ್ಟಿ, ಕೊಣ್ಣೂರು ರೈಲ್ವೆ ನಿಲ್ದಾಣದ ಹತ್ತಿರ ಅಂಡರ್‌ ಬ್ರಿಡ್ಜ್‌ನಲ್ಲಿ ನೀರು ನಿಲ್ಲುತ್ತಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಸರಿಪಡಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಅಂಗವಿಕಲ ಅಭಿವೃದ್ಧಿ ನಿಗಮದ ಅಧ್ಯಕ್ಷಾಗಿರುವ ಮಾರುತಿ ಅಷ್ಟಗಿ, ನೈರುತ್ಯ ರೈಲ್ವೆ ಮುಖ್ಯ ಎಂಜಿನಿಯರ್‌ ಪ್ರೇಮ ನಾರಾಯಣ, ಸಹಾಯಕ ಎಂಜಿನಿಯರ್‌ ಸೋಮನಾಥ ಶಿಂಧೆ, ನಂದಕುಮಾರ, ಮುಖಂಡರಾದ ರಾಮಣ್ಣ ಹುಕ್ಕೇರಿ, ಪರಶುರಾಮ ಕಲಕುಟಗಿ, ಕಾಶಪ್ಪ ರಾಜನ್ನವರ, ಪರಪ್ಪ ಗಿರೆನ್ನವರ, ಅಶೋಕ ನಾಯಿಕ, ಮಲ್ಲಪ್ಪ ಹುಕ್ಕೇರಿ, ಮಾರುತಿ ವನಜಾರಿ ಹಾಗೂ ರೈಲ್ವೆ ಸಿಬ್ಬಂದಿ ಇದ್ದರು.

Follow Us:
Download App:
  • android
  • ios