BEL Recruitment 2022: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ
ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 34 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದೆ.
ಬೆಂಗಳೂರು (ಡಿ.6): ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಟ್ರೈನಿ/ಪ್ರಾಜೆಕ್ಟ್ ಇಂಜಿನಿಯರ್ ಸೇರಿ ಒಟ್ಟು 34 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, BEL ಉದ್ಯೋಗಗಳನ್ನು ಹುಡುಕುತ್ತಿರುವ ಅರ್ಜಿದಾರರು ಅಧಿಕೃತ ವೆಬ್‌ತಾಣ www.bel-india.in ಗೆ ಭೆಟಿ ನೀಡಿ ವಿವರಗಳನ್ನು ಪರಿಶೀಲಿಸಬಹುದು. ಅಭ್ಯರ್ಥಿಗಳು BEL ನೇಮಕಾತಿಗೆ ಅರ್ಜಿ ಸಲ್ಲಿಸುವ ಮೊದಲು ಅವರು ಅರ್ಹರಾಗಿರುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದೆ.
ಒಟ್ಟು 34 ಹುದ್ದೆಗಳ ಮಾಹಿತಿ ಇಂತಿದೆ:
ಟ್ರೈನಿ ಇಂಜಿನಿಯರ್ : 15 ಹುದ್ದೆಗಳು
ಪ್ರಾಜೆಕ್ಟ್ ಇಂಜಿನಿಯರ್ : 19 ಹುದ್ದೆಗಳು
ಶೈಕ್ಷಣಿಕ ವಿದ್ಯಾಭ್ಯಾಸ: ಬಿಇಎಲ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಸಂಬಂಧಿತ ವಿಭಾಗದಲ್ಲಿ ಎಂಜಿನಿಯರಿಂಗ್. B.E/ B.Tech/ B.Sc ಮಾಡಿರಬೇಕು.
ವಯೋಮಿತಿ: ಬಿಇಎಲ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತರು ಹುದ್ದೆಗೆ ಅನುಸಾರವಾಗಿ ವಯೋಮಿತಿ ಹೊಂದಿರಬೇಕು.
ಟ್ರೈನಿ ಇಂಜಿನಿಯರ್: ಗರಿಷ್ಟ 28 ವರ್ಷ
ಪ್ರಾಜೆಕ್ಟ್ ಇಂಜಿನಿಯರ್ : ಗರಿಷ್ಟ 32 ವರ್ಷ
ಆಯ್ಕೆ ಪ್ರಕ್ರಿಯೆ: ಬಿಇಎಲ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ ವಿವರ: ಬಿಇಎಲ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ವೇತನ ದೊರೆಯಲಿದೆ.
ತರಬೇತಿ ಇಂಜಿನಿಯರ್ : 30,000 ರೂ. ನಿಂದ ರೂ.40,000 ರೂವರೆಗೆ ವೇತನ ಸಿಗಲಿದೆ.
ಪ್ರಾಜೆಕ್ಟ್ ಇಂಜಿನಿಯರ್: 40,000 ರೂ. ನಿಂದ ರೂ. 55,000 ರೂವರೆಗೆ ವೇತನ ಸಿಗಲಿದೆ.
ಬೀದರ್ ನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಅಗ್ನಿಪಥ ರ್‍ಯಾಲಿ, ಆಕಾಂಕ್ಷಿಗಳ ನೋಂದಣಿ ದಾಖಲೆ
ಅರ್ಜಿ ಶುಲ್ಕ: ಬಿಇಎಲ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ಅರ್ಜಿ ಶುಲ್ಕ ಪಾವತಿಸಬೇಕು. ಆಫ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.
ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ : ಸಾಮಾನ್ಯ , EWS, ಮತ್ತು OBC ಅಭ್ಯರ್ಥಿಗಳು: ರೂ.472 ಅರ್ಜಿ ಶುಲ್ಕ ಪಾವತಿಸಬೇಕು.
ಟ್ರೈನಿ ಇಂಜಿನಿಯರ್ ಹುದ್ದೆಗೆ ಸಾಮಾನ್ಯ, EWS, ಮತ್ತು OBC ಅಭ್ಯರ್ಥಿಗಳು: ರೂ.177/ ಅರ್ಜಿ ಶುಲ್ಕ ಪಾವತಿಸಬೇಕು.
CBI RECRUITMENT 2022: ಕೇಂದ್ರೀಯ ತನಿಖಾ ದಳದಲ್ಲಿ ಖಾಲಿ ಇರುವ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸಬೇಕಾದ ವಿಳಾಸ:
The Manager (HR&A),
Bharat Electronics Limited
Kotdwara, Pauri Garwhal
Uttarakhand – 246149.
ಮ್ಯಾನೇಜರ್ (HR&A),
ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್
ಕೋಟ್ದ್ವಾರ, ಪೌರಿ ಗರ್ವಾಲ್
ಉತ್ತರಾಖಂಡ – 246149.