ಕೆಲಸ ಕೊಡದೆ ಬೀದಿಯಲ್ಲಿಟ್ಟ ಸರ್ಕಾರ, ದಯಾಮರಣಕ್ಕೆ ಅನುಮತಿ ಕೊಡಿ ಅಂತ 500ಕ್ಕೂ ಹೆಚ್ಚು ಅಭ್ಯರ್ಥಿಗಳ ಮನವಿ!
2018ರ ಆಗಸ್ಟ್ 19ರಂದು ಕೆಪಿಎಸ್‌ಸಿ 1520 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿ ನಡೆಸಿದ್ದ ಪರೀಕ್ಷೆಯಲ್ಲಿ 900 ಜನರು ಮಾತ್ರ ಉತ್ತೀರ್ಣರಾಗಿದ್ರು. ಈಗ ಉತ್ತೀರ್ಣರಾದ ಅಭ್ಯರ್ಥಿಗಳ ಪೈಕಿ ಕೆಲಸಕ್ಕೆ ಹಾಜರಾಗುವಂತೆ ಕೇವಲ 400 ಜನರಿಗೆ ಮಾತ್ರ 2022ರ ಆಗಸ್ಟ್‌ನಲ್ಲಿ ಆದೇಶ ಪತ್ರ ನೀಡಲಾಗಿದೆ. ಉಳಿದ 500ಕ್ಕೂ ಹೆಚ್ಚು ಉತ್ತೀರ್ಣರಾದ ಅಭ್ಯರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಹೀಗಾಗಿ ದಯಾಮರಣ ನೀಡಿ ಅಂತ ಅಭ್ಯರ್ಥಿಗಳು ಗೋಗರೆಯುತ್ತಿದ್ದಾರೆ.
ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಡಿ.6): ಇವರೆಲ್ಲರೂ ಒಂದಲ್ಲ ಒಂದು ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೋರು. ಸರಿಯಾಗಿ ತಿಂಗಳಿಗೊಮ್ಮೆ ಬರ್ತಿದ್ದ ಸಂಬಳದಿಂದ ಹಾಗೂ ಹೀಗೂ ಜೀವನ ನಡೆಸುತ್ತಾ ಖುಷಿಯಾಗಿದ್ರು. ಕೊನೆಗೂ ಸರ್ಕಾರಿ ಕೆಲಸ ಸಿಗ್ತಪ್ಪಾ, ಇನ್ಮುಂದೆಯಾದ್ರೂ ಜೀವನಕ್ಕೊಂದು ಭದ್ರತೆ ಆಯ್ತು ಅಂತ ನಿಟ್ಟಿಸಿರು ಬಿಟ್ಟಿದ್ರು. ಆದ್ರೆ ಆ ಖುಷಿ ತುಂಬಾ ದಿನ ಉಳಿಯಲಿಲ್ಲ. ಉಸಿರೇ ಕಳೆದುಕೊಳ್ಳೋವಂತ ಸಂದಿಗ್ಧ ಪರಿಸ್ಥಿತಿಯನ್ನು ಸರ್ಕಾರ ಇವರಿಗೆ ತಂದಿಟ್ಟಿದೆ. 2018ರ ಆಗಸ್ಟ್ 19ರಂದು ಕೆಪಿಎಸ್‌ಸಿ ನೇರ ನೇಮಕಾತಿ ವಿಚಾರವಾಗಿ ಅಧಿಸೂಚನೆಯನ್ನು ಹೊರಡಿಸಿತ್ತು. ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ಸಂಬಂಧಿಸಿದ ಅಧಿಸೂಚನೆ 23 ಮಾದರಿಯ 1520 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿ ನಡೆಸಿದ್ದ ಪರೀಕ್ಷೆಯಲ್ಲಿ ಸುಮಾರು 50 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ರು. ಆದ್ರೆ ಅವರ ಪೈಕಿ ಸುಮಾರು 900 ಜನರು ಮಾತ್ರ ಉತ್ತೀರ್ಣರಾಗಿದ್ರು. ಈಗ ಉತ್ತೀರ್ಣರಾದ ಅಭ್ಯರ್ಥಿಗಳ ಪೈಕಿ ಕೆಲಸಕ್ಕೆ ಹಾಜರಾಗುವಂತೆ ಕೇವಲ 400 ಜನರಿಗೆ ಮಾತ್ರ 2022ರ ಆಗಸ್ಟ್‌ನಲ್ಲಿ ಆದೇಶ ಪತ್ರ ನೀಡಲಾಗಿದೆ. ಉಳಿದ 500ಕ್ಕೂ ಹೆಚ್ಚು ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇಂದಿಗೂ ಆದೇಶ ಪತ್ರ ನೀಡಿಲ್ಲ. ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆ ಅಂತಾರೆ ನೊಂದ ಅಭ್ಯರ್ಥಿಗಳು. ಆದೇಶ ಪತ್ರವನ್ನು ನೀಡಲು ಸಾಧ್ಯವಿಲ್ಲ ಅಂದ್ರೆ ದಯಾಮರಣಕ್ಕೆ ಅನಮತಿಯಾದ್ರೂ ನೀಡಿ ಅಂತ ಅಭ್ಯರ್ಥಿಗಳು ಗೋಗರೆಯುತ್ತಿದ್ದಾರೆ.
CBI Recruitment 2022: ಕೇಂದ್ರೀಯ ತನಿಖಾ ದಳದಲ್ಲಿ ಖಾಲಿ ಇರುವ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
ಆದೇಶ ಪತ್ರ ಪಡೆದವರೂ ಸೇಫ್ ಅಲ್ಲ ಅಂತಾರೆ ಆಯುಕ್ತರು!
ಇನ್ನು, ಕೆಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾದೋರು ಒಂದಿಷ್ಟು ದಾಖಲೆಗಳನ್ನು ನೀಡಬೇಕಿತ್ತು. ಅವುಗಳನ್ನು ಪರಿಶೀಲಿಸಿ ಒಪ್ಪಿಗೆಯಾದುದನ್ನು ಮಾತ್ರ ಕೌಶಲ್ಯಾಭಿವೃದ್ಧಿ ಇಲಾಖೆಗೆ ಕಳಿಸಿಕೊಡಲಾಗಿತ್ತು. ಆ ದಾಖಲೆಗಳ ಪೈಕಿ ಸಣ್ಣ ಪ್ರಮಾಣದ ಗೋಲ್‌ಮಾಲ್ ಕಂಡು ಬಂದಿದ್ರಿಂದ ಕೆಲ ಅರ್ಜಿಗಳನ್ನು ಇಲಾಖೆ ತಿರಿಸ್ಕರಿಸಿತ್ತು. ಈ ಮಧ್ಯೆ ಪರೀಕ್ಷೆಯಲ್ಲಿ ಫೇಲ್ ಆದವರು ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ರು. ಕೆಪಿಎಸ್‌ಸಿ, ಕೌಶಲ್ಯಾಭಿವೃದ್ಧಿ ಇಲಾಖೆ ಹಾಗು ಪಾಸ್ ಆದ ಕೆಲವರನ್ನು ಕೇಸ್‌ನಲ್ಲಿ ಪಾರ್ಟಿಯನ್ನಾಗಿ ಮಾಡಿದ್ರು. ಈಗ ಕೇಸ್‌ನಲ್ಲಿ ಪಾರ್ಟಿಯಾಗಿರೋ ಕೆಲವರಿಗೆ ಉದ್ಯೋಗಕ್ಕೆ ಆದೇಶ ಪತ್ರ ನೀಡಲಾಗಿದ್ರೆ, ಬಹುತೇಕರಿಗೆ ಇನ್ನೂ ನೀಡಲಾಗಿಲ್ಲ. ಇದರಿಂದಾಗಿ ನಮಗೆ ಇಲಾಖೆ ದ್ರೋಹ ಮಾಡ್ತಿದೆ ಅನ್ನೋ ಅಭ್ಯರ್ಥಿಗಳ ಮಾತಿಗೆ ಆಯುಕ್ತರು ಈಗ ನೇಮಕಾತಿ ಪತ್ರ ಪಡೆದುಕೊಂಡವರು ಹೊರಗಡೆ ಬರುವ ಸಾಧ್ಯತೆ ಇದೆ ಅಂತ ಆಯುಕ್ತರಾದ ಕೆ.ಜ್ಯೋತಿ ಹೇಳಿದ್ದಾರೆ.
BEL RECRUITMENT 2022: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ
ಆಲ್ಲದೆ 900 ಅಭ್ಯರ್ಥಿಗಳ ಪೈಕಿ ಆದೇಶ ಪತ್ರ ನೀಡಿರೋದು ಕೇವಲ 400 ಜನರಿಗೆ. ಇಷ್ಟರಲ್ಲೇ ಹತ್ತು ಹಲವಾರು ಕೇಸ್‌ಗಳು ಕೋರ್ಟ್‌ನಲ್ಲಿ ನಡೆಯುತ್ತಿದೆ. ಹೀಗಿರೋವಾಗ ಉಳಿದಿರೋರಿಗೆ ಪತ್ರ ನೀಡೋದು ಬೇಡ ಅಂತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್ ಇಲಾಖೆಗೆ ತಿಳಿಸಿದ್ದರು. 4 ವರ್ಷಗಳೇ ಕಾದಿರೋ ಅಭ್ಯರ್ಥಿಗಳು ಒಂದೆರಡು ತಿಂಗಳು ಕಾಯಲಿ. ಎಲ್ಲವೂ ಕಾನೂನಾನ್ಮಕವಾಗಿ ಆಗಲಿ ಅನ್ನೋದಷ್ಟೇ ನಮ್ಮ ಆಶಯ ಅಂತಾರೆ. ಮತ್ತೊಂದೆಡೆ, ಸರ್ಕಾರಿ ಕೆಲಸ ಸಿಕ್ತು ಅಂತ ಇರೋ ಕೆಲಸವನ್ನೂ ಬಿಟ್ಟು ಈಗ ಬೀದಿಗೆ ಬಂದಂತಾಗಿರೋ ನಮ್ಮ ಕಷ್ಟವನ್ನು ಯಾರಿಗೆ ಹೇಳೋದು ಅಂತ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.