10ನೇ ತರಗತಿ ಪಾಸ್ ಆದವರಿಗೆ ಉದ್ಯೋಗ, ಪರೀಕ್ಷೆಯಿಲ್ಲದೆ ಅಭ್ಯರ್ಥಿ ನೇಮಕ ಮಾಡ್ತಿದೆ ರೈಲ್ವೆ ಇಲಾಖೆ

ಸರ್ಕಾರಿ ಉದ್ಯೋಗದ ಕನಸು ಕಾಣ್ತಿರುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿಯೊಂದಿದೆ. ರೈಲ್ವೆ ಇಲಾಖೆ ಅಭ್ಯರ್ಥಿಗಳ ನೇಮಕಕ್ಕೆ ಮುಂದಾಗಿದೆ. ನಿಮಗೂ ಈ ಎಲ್ಲ ಅರ್ಹತೆ ಇದ್ರೆ ಈಗ್ಲೇ ಅರ್ಜಿ ಭರ್ತಿ ಮಾಡಿ. 
 

railway vacancy 2024 opportunity to join railway without exam roo

ಭಾರತೀಯ ರೈಲ್ವೆ ಇಲಾಖೆ (Indian Railway Department )ಯಲ್ಲಿ ಕೆಲಸ ಮಾಡಲು ಆಸಕ್ತರಿರುವ ಯುವಕರಿಗೆ ಖುಷಿ ಸುದ್ದಿಯೊಂದಿದೆ. ನಿಮಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಮಾಡುವ ಬಂಪರ್ ಅವಕಾಶ ಸಿಗ್ತಿದೆ. ಆಗ್ನೇಯ ರೈಲ್ವೆ (South Eastern Railway) ಅಪ್ರೆಂಟಿಸ್ ಹುದ್ದೆ (Apprentice Post)ಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಭರ್ತಿ ಮಾಡಬಹುದು. ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ವೃತ್ತಿಜೀವನವನ್ನು ಪ್ರಾರಂಭಿಸಲು ಉತ್ತಮ ಸ್ಥಳ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ. 

ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ : ಆಗ್ನೇಯ ರೈಲ್ವೆ ಅಪ್ರೆಂಟಿಸ್ ನೇಮಕಾತಿ 2024 ಅಭಿಯಾನದ ಅಡಿಯಲ್ಲಿ, 1785 ಹುದ್ದೆಗಳಿಗೆ ಅಭ್ಯರ್ಥಿಗಳ ಭರ್ತಿ ಮಾಡ್ತಿದೆ. ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ನಿನ್ನೆ ಅಂದರೆ ನವೆಂಬರ್ 28, 2024 ರಂದು ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 27, 2024ರ ಸಂಜೆ 5 ಗಂಟೆಯವರೆಗೆ ಅವಕಾಶವಿದೆ. 

ದೋಸೆ ಮಾರಾಟಗಾರನ ತಿಂಗಳ ಗಳಿಕೆ 6 ಲಕ್ಷ! ತೆರಿಗೆ ವಿಚಾರದಲ್ಲಿ ನಡೆಯುತ್ತಿದೆ ಚರ್ಚೆ

ಅಭ್ಯರ್ಥಿಗಳ ವಿದ್ಯಾರ್ಹತೆ : ಹೆಚ್ಚುವರಿ ವಿಷಯಗಳನ್ನು ಹೊರತುಪಡಿಸಿ ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ಅದಕ್ಕೆ ಸಮನಾದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಉತ್ತೀರ್ಣರಾಗಿರಬೇಕು. ಅಪ್ರೆಂಟಿಸ್‌ಶಿಪ್ ಮಾಡಬೇಕಾದ ಕ್ಷೇತ್ರದಲ್ಲಿ NCVT/SCVT ನೀಡುವ ಐಟಿಐ (ITI) ಪರೀಕ್ಷೆ ಪಾಸಾಗಿರುವ ಪ್ರಮಾಣಪತ್ರವನ್ನು ಹೊಂದಿರಬೇಕು.

ವಯಸ್ಸಿನ ಮಿತಿ : ರೈಲ್ವೇ ಅಪ್ರೆಂಟಿಸ್‌ನ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 15 ವರ್ಷಗಳು ಮತ್ತು ಗರಿಷ್ಠ ವಯಸ್ಸು 24 ವರ್ಷಗಳು. ಅಭ್ಯರ್ಥಿಗಳ ವಯಸ್ಸನ್ನು ಜನವರಿ 1, 2024 ರ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಕಾಯ್ದಿರಿಸಿದ ವರ್ಗಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲ. ನೇರವಾಗಿ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸಿದ ಮೆರಿಟ್ ಮೂಲಕ ರೈಲ್ವೆ ಅಪ್ರೆಂಟಿಸ್‌ಗೆ ಆಯ್ಕೆ ಮಾಡಲಾಗುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಡಾಕ್ಯುಮೆಂಟ್ ಪರಿಶೀಲನೆಗಾಗಿ ಕರೆಯಲಾಗುವುದು.

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳ ಅರ್ಜಿ ಶುಲ್ಕ 100 ರೂಪಾಯಿ. SC, ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ಅಥವಾ ಇ-ವ್ಯಾಲೆಟ್ ಬಳಸಿ ಪಾವತಿ ಮಾಡಬಹುದು. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ, ಅಭ್ಯರ್ಥಿಗಳು ಸೌತ್ ಈಸ್ಟ್ ರೈಲ್ವೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ವೆಬ್ ಸೈಟ್ : ಆಸಕ್ತ ಅಭ್ಯರ್ಥಿಗಳು rrcser.co.in  ಮತ್ತು iroams.com ಗೆ ಭೇಟಿ ನೀಡಿ ಅಲ್ಲಿ ಅರ್ಜಿ ಸಲ್ಲಿಸಬೇಕು. ಮೊದಲು ಈ ವೆಬ್ಸೈಟ್ ಗೆ ಲಾಗಿನ್ ಆಗಿ, ಅಪ್ರೆಂಟಿಸ್ ಹುದ್ದೆಯ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕೇಳುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ, ನಂತ್ರ ಆನ್ಲೈನ್ ಮೂಲಕವೇ ಹಣ ಪಾವತಿ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಏನೋ ಮಂತ್ರ ಹೇಳ್ಕೊಂಡು ಐಪಿಎಲ್ ಬಿಡ್ ಮಾಡಿದ ಮುಂಬೈ ಇಂಡಿಯನ್ಸ್ ಓನರ್ ನೀತಾ

ಅಪ್ರೆಂಟಿಸ್ ಎಂದರೇನು? : ಸರಳ ಭಾಷೆಯಲ್ಲಿ ಹೇಳುವುದಾದರೆ ಅಪ್ರೆಂಟಿಸ್‌ಶಿಪ್ ಕೆಲಸವಲ್ಲ. ರೈಲ್ವೆ ಇಲಾಖೆ ನಿಮಗೆ ಇಲ್ಲಿ ಕೆಲಸ ನೀಡುವುದಿಲ್ಲ. ಬದಲಾಗಿ ತರಬೇತಿಯನ್ನು ನೀಡುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿವೆ ರೈಲ್ವೆ ಇಲಾಖೆ ಕೈಗಾರಿಕಾ ಕೆಲಸಕ್ಕಾಗಿ ತರಬೇತಿ ನೀಡುತ್ತದೆ. ರೈಲ್ವೇ ಮಾತ್ರವಲ್ಲ ಅನೇಕ ಕಂಪನಿಗಳು ಅಪ್ರೆಂಟಿಸ್‌ಶಿಪ್‌ ಗೆ ಅಭ್ಯರ್ಥಿಗಳ ನೇಮಕ ಮಾಡಿಕೊಳ್ಳುತ್ತದೆ. ಇಲ್ಲಿ ಅಭ್ಯರ್ಥಿಗಳಿಗೆ ಅವರ ವಿದ್ಯಾರ್ಹತೆಗೆ ತಕ್ಕಂತೆ ಸ್ಟೈಫಂಡ್ ನೀಡಲಾಗುವುದು. 

Latest Videos
Follow Us:
Download App:
  • android
  • ios