ದೋಸೆ ಮಾರಾಟಗಾರನ ತಿಂಗಳ ಗಳಿಕೆ 6 ಲಕ್ಷ! ತೆರಿಗೆ ವಿಚಾರದಲ್ಲಿ ನಡೆಯುತ್ತಿದೆ ಚರ್ಚೆ

ತಳ್ಳು ಗಾಡಿಯಲ್ಲಿ ಆಹಾರ ಮಾರಾಟ ಮಾಡುವವರ ಗಳಿಕೆ ಎಷ್ಟಿರಬಹುದು? ತಿಂಗಳಿಗೆ 50 ಸಾವಿರ ದಾಟೋದು ಅನುಮಾನ ಅಂತ ನಾವಂದುಕೊಂಡಿದ್ದೇವೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಬೆರಗಾಗಿಸುವ ಸಂಗತಿ ವೈರಲ್ ಆಗಿದೆ.
 

person making dosa earning 6 lakh per month roo

ಮಾಸ್ಟರ್ ಡಿಗ್ರಿ (Master degree) ಮಾಡಿ ಉತ್ತಮ ಜಾಬ್ ನಲ್ಲಿದ್ದ ಜನರು ಕೆಲಸ ತೊರೆದು ಆಹಾರಕ್ಕೆ ಸಂಬಂಧಿಸಿದ ವ್ಯಾಪಾರ (business) ಶುರು ಮಾಡ್ತಿದ್ದಾರೆ.  ಟೀವಾಲಾ, ಪಾನಿಪುರಿ ಹುಡುಗಿ ಹೀಗೆ ನಾನಾ ಹೆಸರುಗಳಿಂದ ಅವರು ಪ್ರಸಿದ್ಧಿ ಪಡೆದಿದ್ದಾರೆ. ತಳ್ಳುವ ಗಾಡಿಯಲ್ಲಿ, ದುಬಾರಿ ಬೆಲೆಯ ಕಾರಿನಲ್ಲಿ ತಮ್ಮ ಆಹಾರ ಮಾರಾಟ ಮಾಡಿ, ಜನರು ಹಣ ಸಂಪಾದನೆ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾ (Social Media)ದಲ್ಲಿ ಈಗ ಒಂದು ಪೋಸ್ಟ್ ಅಚ್ಚರಿ ಹುಟ್ಟಿಸಿದೆ. ನವೀನ್ ಕೊಪ್ಪರಂ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಮನೆ ಪಕ್ಕದಲ್ಲಿ ತಳ್ಳುವ ಗಾಡಿಯಲ್ಲಿ ದೋಸೆ ಮಾರಾಟ ಮಾಡುವ ವ್ಯಕ್ತಿ ದಿನಕ್ಕೆ ಎಷ್ಟು ಹಣ ಸಂಪಾದನೆ ಮಾಡ್ತಾರೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. ಈ ಪೋಸ್ಟ್ ಈಗ ವ್ಯಾಪಾರಿಗಳು ಮತ್ತು ಕಾರ್ಪೋರೇಟ್ ಉದ್ಯೋಗಿ (Corporate Employee)ಗಳ ಗಳಿಕೆ ಮತ್ತು ತೆರಿಗೆ ಸಹಿತ, ತೆರಿಗೆ ರಹಿತ ಗಳಿಕೆಯ ಚರ್ಚೆಗೆ ಕಾರಣವಾಗಿದೆ. 

ಪೋಸ್ಟ್ನಲ್ಲಿ ಏನಿದೆ? : ನವೀನ್, ತಮ್ಮ ಮನೆ ಬಳಿ ಇರುವ ದೋಸೆ ಮಾರಾಟಗಾರರು ಪ್ರತಿದಿನ 20,000 ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಅಂದರೆ ಪ್ರತಿ ತಿಂಗಳು 6 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರೆ. ಎಲ್ಲಾ ಖರ್ಚುಗಳನ್ನು ತೆಗೆದುಹಾಕಿದ್ರೂ, ಮಾರಾಟಗಾರ ತಿಂಗಳಿಗೆ 3 ರಿಂದ 3.5 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರೆ ಎಂದು ನವೀನ್ ಬರೆದಿದ್ದಾರೆ. ಅಷ್ಟೇ ಅಲ್ಲ, ಆದಾಯ ತೆರಿಗೆಯಾಗಿ ಅವರು ಒಂದು ರೂಪಾಯಿ ಕೂಡ ಪಾವತಿಸುವುದಿಲ್ಲ. ಆದರೆ ತಿಂಗಳಿಗೆ 60 ಸಾವಿರ ಗಳಿಸುವ ಉದ್ಯೋಗಿ ತನ್ನ ಗಳಿಕೆಯ ಶೇಕಡಾ 10ರಷ್ಟನ್ನು ತೆರಿಗೆಯಾಗಿ ಪಾವತಿಸುತ್ತಾನೆ ಎಂದು ಬರೆದಿದ್ದಾರೆ.

ಏನೋ ಮಂತ್ರ ಹೇಳ್ಕೊಂಡು ಐಪಿಎಲ್ ಬಿಡ್ ಮಾಡಿದ ಮುಂಬೈ ಇಂಡಿಯನ್ಸ್ ಓನರ್ ನೀತಾ ಅಂಬಾನಿ!

ಈ ಪೋಸ್ಟ್ ಭಾರತದಲ್ಲಿ ತೆರಿಗೆ ಮತ್ತು ಆದಾಯ ವ್ಯತ್ಯಾಸದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.  ಈ ಪೋಸ್ಟ್    ಸಂಬಳದ ಉದ್ಯೋಗಿಗಳು ಮತ್ತು ವ್ಯಾಪಾರ ಮಾಲೀಕರ ಅನುಕೂಲಗಳು ಮತ್ತು ಅನಾನುಕೂಲಗಳ ವಾದ ವಿವಾದಕ್ಕೆ ವೇದಿಕೆಯಾಗಿದೆ. ಅನೇಕರು ನವೀನ್ ಲೆಕ್ಕಾಚಾರವನ್ನು ಪ್ರಶ್ನಿಸಿದ್ದಾರೆ. ದಿನಕ್ಕೆ ಇಷ್ಟೊಂದು ಗಳಿಕೆ ಸಾಧ್ಯವಿಲ್ಲ ಎಂದಿದ್ದಾರೆ. ಮತ್ತೆ ಕೆಲವರು, ವ್ಯಾಪಾರಿ ಪರ ಮಾತನಾಡಿದ್ದಾರೆ. ವ್ಯಾಪಾರಿಗಳು ಕಾರ್ಪೊರೇಟ್ ವಿಮೆಯನ್ನು ಪಡೆಯುವುದಿಲ್ಲ, ಕಾರು,ಮನೆ, ಬೈಕಿನ ಸಾಲ ಸಿಗುವುದು ಅವರಿಗೆ ಸುಲಭವಲ್ಲ. ಪಿಎಫ್ ಸೌಲಭ್ಯ ಇರುವುದಿಲ್ಲ. ಖಚಿತವಾದ ಆದಾಯವಿಲ್ಲ. ಅವರು ಬಹುಶಃ 60 ಸಾವಿರ ಗಳಿಸುವ ಸಾಫ್ಟ್‌ವೇರ್ ಇಂಜಿನಿಯರ್‌ನ ಆದಾಯ ತೆರಿಗೆಗಿಂತ ಹೆಚ್ಚಿನ ಜಿಎಸ್‌ಟಿಯನ್ನು ಪಾವತಿಸುತ್ತಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಸ್ಥಳೀಯ ಅಧಿಕಾರಿಗಳು, ರಾಜಕಾರಣಿಗಳಿಗೆ ಅವರು ಹಣ ನೀಡಬೇಕಾಗುತ್ತದೆ. ಅವರ ಕೆಲಸದಲ್ಲಿ ಭದ್ರತೆಯಿಲ್ಲದ ಕಾರಣ ಅವರು ತೆರಿಗೆಯಿಂದ ಹೊರಗಿದ್ದಾರೆಂದು ಮತ್ತೊಂದಿಷ್ಟು ಮಂದಿ ಕಮೆಂಟ್ ಮಾಡಿದ್ದಾರೆ.  

ಭಾರತೀಯನ ಗಳಿಕೆ ಕೇಳಿದ್ರೆ ತಲೆ ಸುತ್ತುತ್ತೆ! ಲಂಡನ್ ನಲ್ಲೂ ಸಿಗುತ್ತಾ ಇಷ್ಟೊಂದು ಸಂಬಳ?

ಮೊದಲು ಇದಕ್ಕೆ ಸರಿಯಾದ ಸಾಕ್ಷ್ಯವಿರಲಿಲ್ಲ. ಆದರೆ ಯುಪಿಐ ಪ್ರಾರಂಭವಾದಾಗಿನಿಂದ ಸರ್ಕಾರಕ್ಕೆ ಸೂಕ್ತ ಮಾಹಿತಿ ತಲುಪುತ್ತದೆ. ಬೀದಿ ವ್ಯಾಪಾರಿಗಳನ್ನು ಆದಾಯ ತೆರಿಗೆ ನೆಟ್‌ವರ್ಕ್ ಅಡಿಯಲ್ಲಿ ತರುವುದು ಈಗ ಸುಲಭ. ಆದಾಗ್ಯೂ ಸರ್ಕಾರವು ಎಂದಿಗೂ ಇದನ್ನು ಜಾರಿಗೆ ತರುವುದಿಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಅಪಾಯಕಾರಿ ಕೆಲಸವನ್ನು ಮಾಡುವ ಬೀದಿ ವ್ಯಾಪಾರಿಗಳು, ಬಂದ ಹಣದಲ್ಲಿ ಕುಟುಂಬದ ನಿರ್ವಹಣೆಗೆ ಮಾಡಬೇಕಾಗುತ್ತದೆ. ಕಾರ್ಪೋರೇಟ್ ಉದ್ಯೋಗಿಗಳಂತೆ ಅವರಿಗೆ ರಜೆ ಸೌಲಭ್ಯವಿಲ್ಲ. ಪ್ರತಿ ದಿನ, ಹಗಲು – ರಾತ್ರಿಯೆನ್ನದೆ ಕೆಲಸ ಮಾಡಿದಲ್ಲಿ ಮಾತ್ರ ಸಂಪಾದನೆ ಸಾಧ್ಯ. ಐಟಿ ಬಿಟಿ ಉದ್ಯೋಗಿಗಳಂತೆ ಅವರು ಎಸಿ ರೂಮಿನಲ್ಲಿ ಕುಳಿತು ಕೆಲಸ ಮಾಡುವುದಿಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. 

Latest Videos
Follow Us:
Download App:
  • android
  • ios