NLC Recruitment 2022: ನೇವೇಲಿ ಲಿಗ್ನೈಟ್ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ನೇವೇಲಿ ಲಿಗ್ನೈಟ್ ಕಾರ್ಪೊರೇಷನ್ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ 2022 ಅಧಿಸೂಚನೆಯನ್ನು ಹೊರಡಿಸಿದೆ.  ಆಸಕ್ತ ಅಭ್ಯರ್ಥಿಗಳು 30 ಡಿಸೆಂಬರ್ 2022 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

NLC Recruitment 2022 notification for group c post gow

ನವದೆಹಲಿ (ಡಿ.4): ನೇವೇಲಿ ಲಿಗ್ನೈಟ್ ಕಾರ್ಪೊರೇಷನ್ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ 2022 ಅಧಿಸೂಚನೆಯನ್ನು ಹೊರಡಿಸಿದೆ.  ಜೂನಿಯರ್ ಓವರ್‌ಮ್ಯಾನ್ (ಟ್ರೇನಿ), ಜೂನಿಯರ್ ಸರ್ವೇಯರ್ (ಟ್ರೇನಿ), ಸಿರ್ದಾರ್ (ಆಯ್ಕೆ ಗ್ರೇಡ್-I) ಸೇರಿ ಒಟ್ಟು  213 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು 30 ಡಿಸೆಂಬರ್ 2022 ರೊಳಗೆ ಅಧಿಕೃತ ವೆಬ್‌ಸೈಟ್ NLC ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ https://www.nlcindia.in/new_website/index.htm ಗೆ ಭೇಟಿ ನೀಡಲು ಕೋರಲಾಗಿದೆ. 

ಒಟ್ಟು 213 ಹುದ್ದೆಗಳ ಮಾಹಿತಿ ಇಂತಿದೆ
ಜೂನಿಯರ್ ಓವರ್‌ಮ್ಯಾನ್ (ಟ್ರೇನಿ): 51 ಹುದ್ದೆಗಳು
ಜೂನಿಯರ್ ಸರ್ವೇಯರ್ (ಟ್ರೇನಿ): 15  ಹುದ್ದೆಗಳು
ಸಿರ್ದಾರ್ (ಆಯ್ಕೆ ಗ್ರೇಡ್ 1): 147 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ: ನೇವೇಲಿ ಲಿಗ್ನೈಟ್ ಕಾರ್ಪೊರೇಷನ್ ಖಾಲಿ ಇರುವ ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮತ್ತು ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. 

ಜೂನಿಯರ್ ಓವರ್‌ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೈನಿಂಗ್ ಅಥವಾ ಮೈನಿಂಗ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಅಥವಾ ಕೇಂದ್ರ ಸರ್ಕಾರದಿಂದ ಅನುಮೋದಿಸಲಾದ ಇತರ ಸಮಾನ ಅರ್ಹತೆ ಮತ್ತು ಕಲ್ಲಿದ್ದಲು ಗಣಿ ನಿಯಂತ್ರಣ 2017 ರ ಅಡಿಯಲ್ಲಿ DGMS ನಿಂದ ಮಾನ್ಯವಾದ ಓವರ್‌ಮ್ಯಾನ್‌ನ ಅರ್ಹತೆಯ ಪ್ರಮಾಣಪತ್ರ ಅಥವಾ ಕಲ್ಲಿದ್ದಲು ಗಣಿಗಳ ನಿಯಂತ್ರಣ 2017 ರ ಪ್ರಕಾರ ಓವರ್‌ಮ್ಯಾನ್ ಆಗಿ ಕೆಲಸ ಮಾಡಲು ಅರ್ಹತೆ ಹೊಂದಿರುವ ಗಣಿಗಾರಿಕೆಯಲ್ಲಿ ಯಾವುದೇ ಪ್ರಮಾಣಪತ್ರ ಮತ್ತು ಮಾನ್ಯ ಪ್ರಥಮ ಚಿಕಿತ್ಸಾ ಪ್ರಮಾಣಪತ್ರ ಪಡೆದಿರಬೇಕು.

ಜೂನಿಯರ್ ಸರ್ವೇಯರ್ ಹುದ್ದೆಗೆ ಗಣಿಗಾರಿಕೆಯಲ್ಲಿ ಡಿಪ್ಲೊಮಾ (ಅಥವಾ) ಮೈನಿಂಗ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (ಅಥವಾ) ಗಣಿ ಸಮೀಕ್ಷೆಯಲ್ಲಿ ಡಿಪ್ಲೊಮಾ (ಅಥವಾ) ಡಿಪ್ಲೊಮಾ ಅಥವಾ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ (ಅಥವಾ) ಸಮೀಕ್ಷೆಯಲ್ಲಿ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ (ಎನ್‌ಟಿಸಿ) ಮತ್ತು CMR 2017 ರ ಪ್ರಕಾರ ಸರ್ವೇಯರ್‌ನ ಸಾಮರ್ಥ್ಯದ ಪ್ರಮಾಣಪತ್ರ ಪಡೆದಿರಬೇಕು.

ಸಿರ್ದಾರ್ ಹುದ್ದೆಗೆ  ಮೈನಿಂಗ್ ಇಂಜಿನಿಯರಿಂಗ್ ಹೊರತುಪಡಿಸಿ ಯಾವುದೇ ವಿಷಯದಲ್ಲಿ ಡಿಪ್ಲೊಮಾ ಅಥವಾ ಪದವಿ ಮತ್ತು DGMS ನೀಡಿದ ಗಣಿಗಾರಿಕೆ ಸಿರ್ದಾರ್ ಸಾಮರ್ಥ್ಯದ ಪ್ರಮಾಣಪತ್ರ ಮತ್ತು ಮಾನ್ಯ ಪ್ರಥಮ ಚಿಕಿತ್ಸಾ ಪ್ರಮಾಣಪತ್ರ.
(ಅಥವಾ) DGMS ನೀಡಿದ ಓವರ್‌ಮ್ಯಾನ್ ಸಾಮರ್ಥ್ಯದ ಪ್ರಮಾಣಪತ್ರದೊಂದಿಗೆ ಗಣಿಗಾರಿಕೆಯಲ್ಲಿ ಡಿಪ್ಲೊಮಾ ಮತ್ತು ಮಾನ್ಯ ಪ್ರಥಮ ಚಿಕಿತ್ಸಾ ಪ್ರಮಾಣಪತ್ರ ಹೊಂದಿರಬೇಕು.

ವಯೋಮಿತಿ: ನೇವೇಲಿ ಲಿಗ್ನೈಟ್ ಕಾರ್ಪೊರೇಷನ್ ಖಾಲಿ ಇರುವ ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ವರ್ಗಾನುಸಾರ ವಯೋಮಿತಿ ಹೊಂದಿರಬೇಕು.
UR/ EWS: 30 ವರ್ಷ
ಒಬಿಸಿ: 33 ವರ್ಷ
ಎಸ್‌ಸಿ: 35 ವರ್ಷ
ಎಸ್‌ಟಿ: 35 ವರ್ಷ

Placement Drive: ಐಐಟಿ ಪದವೀಧರರಿಗೆ 4 ಕೋಟಿ ವೇತನ ಆಫರ್‌..!

ವೇತನ ವಿವರ: ನೇವೇಲಿ ಲಿಗ್ನೈಟ್ ಕಾರ್ಪೊರೇಷನ್ ಖಾಲಿ ಇರುವ ಹುದ್ದೆಗಳಿಗೆ  ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ವೇತನ ದೊರೆಯಲಿದೆ. 
ಜೂನಿಯರ್ ಓವರ್‌ಮ್ಯಾನ್ (ಟ್ರೇನಿ) ಮಾಸಿಕ 31,000 ರಿಂದ 1,00,000 ರೂ
ಜೂನಿಯರ್ ಸರ್ವೇಯರ್ (ಟ್ರೇನಿ) ಮಾಸಿಕ  31,000  ರಿಂದ 1,00,000 ರೂ
ಸಿರ್ದಾರ್ (ಆಯ್ಕೆ ಗ್ರೇಡ್-I) ಮಾಸಿಕ 26,000 ರಿಂದ 1,10,000  ರೂ

ಆಯ್ಕೆ ಪ್ರಕ್ರಿಯೆ: ನೇವೇಲಿ ಲಿಗ್ನೈಟ್ ಕಾರ್ಪೊರೇಷನ್ ಖಾಲಿ ಇರುವ ಹುದ್ದೆಗಳಿಗೆ  ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

OYO LAYS OFF:  600 ಉದ್ಯೋಗಿಗಳನ್ನು ಕಂಪೆನಿಯಿಂದ ವಜಾಗೊಳಿಸಿದ ಓಯೋ

ಅರ್ಜಿ ಶುಲ್ಕ: ಸಿರ್ದಾರ್ ಹುದ್ದೆಗೆ   ಅರ್ಜಿ ಸಲ್ಲಿಸುವ  SC/ST/PwBD  ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 236 ರೂ ಅರ್ಜಿ ಶುಲ್ಕ ಪಾವತಿಸಬೇಕು. ಮಿಕ್ಕುಳಿದ ವರ್ಗದವರು 486 ಅರ್ಜಿ ಶುಲ್ಕ ಸಲ್ಲಿಸಬೇಕು.

ಜೂನಿಯರ್ ಓವರ್‌ಮ್ಯಾನ್ ಮತ್ತು ಸರ್ವೆಯರ್  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ SC/ST/PwBD ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 295 ಅರ್ಜಿ ಶುಲ್ಕ ಪಾವತಿಸಬೇಕು. ಮಿಕ್ಕುಳಿದ ಅಭ್ಯರ್ಥಿಗಳು 595 ರೂ ಅರ್ಜಿ ಶುಲ್ಕ ಪಾವತಿಸಬೇಕು.

Latest Videos
Follow Us:
Download App:
  • android
  • ios