Asianet Suvarna News Asianet Suvarna News

Placement Drive: ಐಐಟಿ ಪದವೀಧರರಿಗೆ 4 ಕೋಟಿ ವೇತನ ಆಫರ್‌..!

ಐಐಟಿಗಳ ಪದವೀಧರರಿಗೆ 4 ಕೋಟಿ ವೇತನ ಆಫರ್‌ ನೀಡಲಾಗಿದೆ. ಇನ್ನು, 30 ಮಂದಿಗೆ ವಾರ್ಷಿಕ 1 ಕೋಟಿ ರೂ. ವೇತನ ನೀಡಲಾಗಿದ್ದು, ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ಎಂಎನ್‌ಸಿಗಳು ಉದ್ಯೋಗಿಗಳ ಬೇಟೆ ನಡೆಸುತ್ತಿವೆ ಎಂದು ತಿಳಿದುಬಂದಿದೆ. 

iit students bag rs 4 crore salary in ongoing placement drives at delhi bombay and kanpur campuses ash
Author
First Published Dec 3, 2022, 8:13 AM IST

ನವದೆಹಲಿ: ಜಾಗತಿಕ ಆರ್ಥಿಕ ಹಿಂಜರಿತದ (Economic Recession) ಭೀತಿ, ಉದ್ಯೋಗ ಕಡಿತಗಳ (Employment Lay -off) ನಡುವೆಯೂ ಭಾರತದ ಪ್ರತಿಷ್ಠಿತ ಇಂಡಿಯನ್‌ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ (Indian Institute of Technology) (ಐಐಟಿ) (IIT) ಸಂಸ್ಥೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಬಾರಿಯೂ ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ (Campus Selection) ಭಾರಿ ವೇತನದ ಆಫರ್‌ ಬಂದಿದೆ. ಶುಕ್ರವಾರದಿಂದ ವಿವಿಧ ಐಐಟಿ ಕ್ಯಾಂಪಸ್‌ಗಳಲ್ಲಿ ಕ್ಯಾಂಪಸ್‌ ಸೆಲೆಕ್ಷನ್‌ ಆಯೋಜನೆಗೊಂಡಿದ್ದು ಮೊದಲ ದಿನವೇ ಐಐಟಿ ಕಾನ್ಪುರ, ದೆಹಲಿ, ಬಾಂಬೆ, ರೂರ್ಕಿ, ಮದ್ರಾಸ್‌ ಮೊದಲಾದ ಐಐಟಿಯ ವಿದ್ಯಾರ್ಥಿಗಳಿಗೆ ಹಲವು ಭಾರತೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ವಾರ್ಷಿಕ 4 ಕೋಟಿ ರೂ.ವರೆಗಿನ ವೇತನ ಆಫರ್‌ ನೀಡಿವೆ. ಈ ಮೂಲಕ ಪ್ರತಿಭಾವಂತರನ್ನು ಸೆಳೆಯುವ ಯತ್ನ ಮಾಡಿವೆ. ಇದು, ಇದುವರೆಗೂ ಭಾರತೀಯ ಐಐಟಿ ವಿದ್ಯಾರ್ಥಿಗಳಿಗೆ ನೀಡಲಾದ ಅತಿ ಹೆಚ್ಚಿನ ವೇತನ ಆಫರ್‌ ಆಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಥವಾ ಐಐಟಿ ವಿದ್ಯಾರ್ಥಿಗಳು ಅತ್ಯಧಿಕ ವೇತನದೊಂದಿಗೆ ಮೈಲಿಗಲ್ಲನ್ನು ಮುಟ್ಟಿದ್ದಾರೆ. ಐಐಟಿ ದೆಹಲಿ, ಐಐಟಿ ಬಾಂಬೆ ಮತ್ತು ಐಐಟಿ ಕಾನ್ಪುರ ಸೇರಿದಂತೆ ವಿವಿಧ ಐಐಟಿಯ ಮೂವರು ವಿದ್ಯಾರ್ಥಿಗಳಿಗೆ ಈ ಆಫರ್‌ ಸಿಕ್ಕಿದೆ. ಅಂದರೆ, ಐಐಟಿ ಕಾನ್ಪುರ, ದೆಹಲಿ ಹಾಗೂ ಬಾಂಬೆಯ ತಲಾ ಒಬ್ಬ ವಿದ್ಯಾರ್ಥಿಗೆ ಅಮೆರಿಕದ ಜೇನ್‌ಸ್ಟ್ರೀಟ್‌ ಕಂಪನಿ 4 ಕೋಟಿ ರೂ. ವೇತನದ ಪ್ರೀ - ಪ್ಲೇಸ್‌ಮೆಂಟ್ ಆಫರ್‌ಗಳನ್ನು ನೀಡಿದೆ.  

ಇದನ್ನು ಓದಿ: Placement Drive: 75 ಲಕ್ಷ ಸಂಬಳದ ಕೆಲಸ ಗಿಟ್ಟಿಸಿಕೊಂಡ IIM Ahmedabad ವಿದ್ಯಾರ್ಥಿ

ಇದಲ್ಲದೆ ಈ ಬಾರಿ 30 ವಿದ್ಯಾರ್ಥಿಗಳು ವರ್ಷಕ್ಕೆ 1 ಕೋಟಿ ರೂ. ಗೂ ಹೆಚ್ಚು ವೇತನದ ಆಫರ್‌ ಪಡೆದುಕೊಂಡಿದ್ದಾರೆ. ಐಐಟಿ ಮದ್ರಾಸ್‌ನ ಸುಮಾರು 25 ವಿದ್ಯಾರ್ಥಿಗಳು ಹಾಗೂ ಐಐಟಿ ಗುವಾಹಟಿಯ 5 ವಿದ್ಯಾರ್ಥಿಗಳು 1 ಕೋಟಿ ರೂ. ಆಫರ್‌ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಇತ್ತೀಚಿಗೆ, IIT ಮದ್ರಾಸ್‌ನಲ್ಲೂ ದಾಖಲೆಯ ಹೆಚ್ಚಳ, ಅಂದರೆ ಸುಮಾರು 333 ವಿದ್ಯಾರ್ಥಿಗಳಿಗೆ ಉದ್ಯೋಗಗಳಿಗೆ ಹಾಜರಾಗುವ ಆಫರ್‌ಗಳನ್ನು ನೀಡಲಾಗಿದೆ. ಕ್ವಾಲ್ಕಾಮ್ (Qualcomm), ಮೈಕ್ರೋಸಾಫ್ಟ್ (Microsoft), ಹನಿವೆಲ್‌ (Honeywell), ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್ಸ್ (Texas Instruments) ಮತ್ತು ಗೋಲ್ಡ್‌ಮನ್ ಸ್ಯಾಚ್ಸ್ (Goldman Sachs) ನಂತಹ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಉದ್ಯೋಗಗಳನ್ನು ನೀಡಿದೆ. ಮತ್ತು ಈ ಸಂಸ್ಥೆಗಳಲ್ಲಿ, Qualcomm ಮತ್ತು Honeywell 19 ಪ್ರೀ-ಪ್ಲೇಸ್‌ಮೆಂಟ್ ಆಫರ್‌ಗಳನ್ನು ನೀಡಿದ್ದರೆ, ಮೈಕ್ರೋಸಾಫ್ಟ್ 17, ಗೋಲ್ಡ್‌ಮನ್ ಸ್ಯಾಚ್ಸ್ 15, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ 14 ಮತ್ತು ಒರಾಕಲ್ 13 ಆಫರ್‌ಗಳನ್ನು ನೀಡಿದೆ ಎಂದು  ಪತ್ರಿಕಾ ಪ್ರಕಟಣೆ ಮಾಹಿತಿ ನೀಡಿದೆ. 2021-22 ರಲ್ಲಿ ಸುಮಾರು 231 ಪ್ರೀ - ಪ್ಲೇಸ್‌ಮೆಂಟ್ ಆಫರ್‌ಗಳನ್ನು ನೀಡಲಾಗಿತ್ತು. ಈ ಬಾರಿ ಐಐಟಿ ಮದ್ರಾಸ್‌ನಲ್ಲಿ ಅದಕ್ಕಿಂತ ಹೆಚ್ಚು ಜನರಿಗೆ ಉದ್ಯೋಗದ ಆಫರ್‌ ನೀಡಲಾಗಿದೆ. 

ಇದನ್ನೂ ಓದಿ: ಫೇಸ್ ಬುಕ್ ನಲ್ಲಿ ಕೆಲಸ ಮಾಡಲು ಗೂಗಲ್, ಅಮೇಜಾನ್ ಆಫರ್ಸ್ ಬಿಟ್ಟ ಯುವಕ, 1 ಕೋಟಿ ವೇತನ

ಇನ್ನು,  ಐಐಟಿ ಮದ್ರಾಸ್‌ನ ಹೊರತಾಗಿ, ಐಐಟಿ ರೂರ್ಕಿಯು ಅಂತಾರಾಷ್ಟ್ರೀಯ ಪೊಸಿಷನ್‌ಗಳಿಗೆ ರೂ. 1.6 ಕೋಟಿ ಮತ್ತು ದೇಶೀಯ ಮಟ್ಟದ ಹುದ್ದೆಗೆ ರೂ. 1.3 ಕೋಟಿ ಆಫರ್ ಮಾಡಿದೆ ಮತ್ತು ಒಟ್ಟು 6 ವಿದ್ಯಾರ್ಥಿಗಳನ್ನು ಗುರುವಾರ, ಡಿಸೆಂಬರ್ 1, 2022 ರಂದು ಪ್ಲೇಸ್‌ಮೆಂಟ್‌ ನೀಡಲಾಗಿದೆ. ಅಂತಾರಾಷ್ಟ್ರೀಯ ಪೊಸಿಷನ್‌ಗಳಿಗೆ ಕೆನಡಾಕ್ಕೆ ಸ್ಕ್ವೇರ್‌ಪಾಯಿಂಟ್ ಕ್ಯಾಪಿಟಲ್(Squarepoint Capital), ಜಪಾನ್‌ಗೆ ರಾಕುಟೆನ್ (Rakuten) ಮತ್ತು ನೈಜೀರಿಯಾದ ಟೋಲಾರಾಮ್ ಗ್ರೂಪ್‌ನಂತಹ (Tolaram Group) ಕೆಲವು ಕಂಪನಿಗಳು ಈ ವರ್ಷ ಐಐಟಿಯಲ್ಲಿ ಅಂತರರಾಷ್ಟ್ರೀಯ ಪಾತ್ರವನ್ನು ನೀಡುವ ನಿರೀಕ್ಷೆಯಿದೆ ಎಂದೂ ವರದಿಗಳು ಹೇಳಿವೆ. IIT ಗಳು 2023 ರ ವರ್ಷಕ್ಕೆ ಪ್ರೀ - ಪ್ಲೇಸ್‌ಮೆಂಟ್‌ ಆಫರ್‌ಗಳನ್ನು ನಡೆಸುತ್ತಿದ್ದು, ಕೆಲವು ಸಂಸ್ಥೆಗಳು ಪ್ಲೇಸ್‌ಮೆಂಟ್‌ ನಡೆಸಿದ್ದರೆ ಇನ್ನು, ಕೆಲವು ಸಂಸ್ಥೆಗಳು ಪ್ರಕ್ರಿಯೆಯಲ್ಲಿವೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: ಪ್ರಯಾಗ್‌ರಾಜ್‌ನ ಟ್ರಿಪಲ್‌ ಐಟಿಯ ಐದು ವಿದ್ಯಾರ್ಥಿಗಳಿಗೆ ಅಮೆಜಾನ್‌, ಗೂಗಲ್‌ನಲ್ಲಿ ಕೋಟಿಗೂ ಹೆಚ್ಚು ಪ್ಯಾಕೇಜ್

Follow Us:
Download App:
  • android
  • ios