ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಹೆಚ್ಎಐ)ಯು ಖಾಲಿ ಇರುವ 60 ಡೆಪ್ಯೂಟಿ ಮ್ಯಾನೇಜರ್ ತಾಂತ್ರಿಕ(ಉಪವ್ಯವಸ್ಥಾಪಕರ-ತಾಂತ್ರಿಕ) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು. ಆನ್‌ಲೈನ್‌ ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನ.

ಬೆಂಗಳೂರು (ಫೆ.7): ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಹೆಚ್ಎಐ)ಯು ಖಾಲಿ ಇರುವ ೬೦ ಡೆಪ್ಯೂಟಿ ಮ್ಯಾನೇಜರ್ ತಾಂತ್ರಿಕ (ಉಪವ್ಯವಸ್ಥಾಪಕರ - ತಾಂತ್ರಿಕ) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ nhai.gov.in ನಲ್ಲಿ ಅರ್ಜಿ ಸಲ್ಲಿಸಬಹುದು.

ಬೆಂಗಳೂರು ಬಂದು ಪಿಜಿ ಸೇರಿಕೊಳ್ಳುವ ಹೆಣ್ಣು ಮಕ್ಕಳೇ ಹುಷಾರ್‌, ಅವ್ಯವಸ್ಥೆ ಪ್ರಶ್ನಿಸಿದ್ರೆ ಗೂಂಡಾಗಿರಿ!

ಹುದ್ದೆಯ ವಿವರ

ಡೆಪ್ಯೂಟಿ ಮ್ಯಾನೇಜರ್ (ತಾಂತ್ರಿಕ) - 60 ಹುದ್ದೆಗಳು

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 15, 2024

ಗರಿಷ್ಠ ವಯಸ್ಸಿನ ಮಿತಿ : 30 ವರ್ಷ ಮೀರಬಾರದು

ಅರ್ಜಿ ಶುಲ್ಕ: ಇರುವುದಿಲ್ಲ

ಶೈಕ್ಷಣಿಕ ವಿದ್ಯಾರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಿವಿಲ್‌ ಇಂಜಿನಿಯರಿಂಗ್‌ ಪದವಿಯನ್ನು ಪಡೆದಿರಬೇಕು.

ವೇತನ ಶ್ರೇಣಿ: ರು.15,600-39,100+ ಗ್ರೇಡ್‌ ಪೇ ರು. 5400 (ಮಾಸಿಕ)

ತಂದೂರಿ ರೊಟ್ಟಿ ಮಾಡುತ್ತಿದ್ದವ ಮಧ್ಯರಾತ್ರಿ ಮಸಣ ಸೇರಿದ, ನಾಲ್ಕು ದಿನ 4 ಕೊಲೆಗೆ ಬಿಚ್ಚಿಬಿದ್ದ ಧಾರವಾಡ

ಆಯ್ಕೆ ಪ್ರಕ್ರಿಯೆ: ಯುಪಿಎಸ್ಸಿಯು ಈ ಮೇಲ್ಕಂಡ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಯನ್ನು ನಡೆಸಿ ಅದರ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಸೇವಾಬಾಂಡ್ ವಿವರ

ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಭಾರತೀಯ ರಾಷ್ಟ್ರೀಯ ಪ್ರಾಧಿಕಾರದ ಹುದ್ದೆಗೆ ಸೇರುವ ಸಮಯದಲ್ಲಿ ಕನಿಷ್ಠ ೩ವರ್ಷ ಅವಧಿಗೆ ರು. ೫.೦೦ ಲಕ್ಷಗಳ ಸೇವಾ ಬಾಂಡ್ ನೀಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ವೀಕ್ಷಿಸಬಹುದು.