Asianet Suvarna News Asianet Suvarna News

ಬೆಂಗಳೂರು ಬಂದು ಪಿಜಿ ಸೇರಿಕೊಳ್ಳುವ ಹೆಣ್ಣು ಮಕ್ಕಳೇ ಹುಷಾರ್‌, ಅವ್ಯವಸ್ಥೆ ಪ್ರಶ್ನಿಸಿದ್ರೆ ಗೂಂಡಾಗಿರಿ!

ಪಿಜಿ ಸೇರಬೇಕು ಎನ್ನುವ ಹೆಣ್ಣು ಮಕ್ಕಳೇ ಈ ಸ್ಟೋರಿ ಬಗ್ಗೆ ತಪ್ಪದೆ ತಿಳಿದುಕೊಳ್ಳಬೇಕು. ಕಡಿಮೆ ಹಣ ರೂಮ್ ಸಿಗುತ್ತೆ ಅಂತ ಹೋದ್ರೆ ನೀವು ಉತ್ತಮ ಆಹಾರ ಇಲ್ಲದೆ ಕಷ್ಟಪಡಬೇಕಾಗುತ್ತದೆ ಹುಷಾರ್‌. ಡಬಲ್ ಶೇರಿಂಗ್ , 4 ಶೇರಿಂಗ್ , 8 ಶೇರಿಂಗ್ ನಲ್ಲಿ ಹೀಗೆ ಕಡಿಮೆ ಖರ್ಚಿಗೆ ರೂಮ್ ಪಡೆಯುತ್ತಿರಾ? ಹಾದಾದ್ರೆ ನಿಮ್ಮ ಗಮನದಲ್ಲಿರಲಿ.

Residents share harrowing tales of cockroach infestations, owner threats in  Bengaluru PGs gow
Author
First Published Feb 7, 2024, 12:45 PM IST

ಬೆಂಗಳೂರು (ಫೆ.7): ಪಿಜಿ ಸೇರಬೇಕು ಎನ್ನುವ ಹೆಣ್ಣು ಮಕ್ಕಳೇ ಈ ಸ್ಟೋರಿ ಬಗ್ಗೆ ತಪ್ಪದೆ ತಿಳಿದುಕೊಳ್ಳಬೇಕು. ಕಡಿಮೆ ಹಣ ರೂಮ್ ಸಿಗುತ್ತೆ ಅಂತ ಹೋದ್ರೆ ನೀವು ಉತ್ತಮ ಆಹಾರ ಇಲ್ಲದೆ ಕಷ್ಟಪಡಬೇಕಾಗುತ್ತದೆ ಹುಷಾರ್‌. ಡಬಲ್ ಶೇರಿಂಗ್ , 4 ಶೇರಿಂಗ್ , 8 ಶೇರಿಂಗ್ ನಲ್ಲಿ ಹೀಗೆ ಕಡಿಮೆ ಖರ್ಚಿಗೆ ರೂಮ್ ಪಡೆಯುತ್ತಿರಾ? ಹಾದಾದ್ರೆ ನಿಮ್ಮ ಗಮನದಲ್ಲಿರಲಿ. ಸಂಬಂಧಿಸಿದವರು ಗೂಂಡಾಗಿರಿ ಮಾಡುತ್ತಾರೆ. ಪಿಜಿಗೆ ಸೇರಿದ ಬಳಿಕ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ರೆ ಪಿಜಿ ಮಾಲೀಕರು ಬೆದರಿಸುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಕ್ರಿಕೆಟಿಗನ ಜೊತೆ ಪ್ರೀತಿಯಲ್ಲಿದ್ದ ಲತಾ ಮಂಗೇಶ್ಕರ್‌ ಕೊನೆವರೆಗೂ ಮದುವ ...

ಪ್ರಶ್ನೆ ಮಾಡಿದಕ್ಕೆ ಪಿಜಿ ಮಾಲೀಕರು ದೊಣ್ಣೆ ಹಿಡ್ಕೊಂಡು ಗೂಂಡಾಗಳಂತೆ ವರ್ತನೆ ಮಾಡಿರುವ ಬಗ್ಗೆ ವಿಡಿಯೋ ವೈರಲ್‌ ಆಗಿದೆ. ಮಹಾಲಕ್ಷ್ಮೀ ಲೇ ಔಟ್ ನಲ್ಲಿರುವ ಪ್ರೇಮಾ ಅನ್ನೋ ಪಿಜಿಯಲ್ಲಿ ಈ ಘಟನೆ ನಡೆದಿದೆ. ಪ್ರೇಮಾ ಪಿಜಿಯಲ್ಲಿ ಅವ್ಯವಸ್ಥೆಯಿಂದ ಪಿಜಿಗೆ ಬಂದ ಯುವತಿಯರು ಬೇಸತ್ತು ಹೋಗಿದ್ದಾರೆ.

ಊಟದಲ್ಲಿ ಹುಳುಗಳು, ಪಿಜಿಯಲ್ಲಿ ಎಲ್ಲಂದರಲ್ಲಿ ಜಿರಳೆಗಳು ಕಾಣುತ್ತೆ, ಕುಡಿಯಲು ನೀರಿಲ್ಲ ಅಂತ ಆರೋಪ ಮಾಡಿದ್ದು, ಅದಕ್ಕೆ ತಕ್ಕನಂತೆ  ಪಿಜಿ ಯುವತಿಯರು ಅವ್ಯವಸ್ಥೆಯ ವಿಡಿಯೋ ವೈರಲ್ ಮಾಡಿದ್ದಾರೆ.

ಸೌಂದರ್ಯವತಿಯಾಗಿದ್ದ ಶಾರುಖ್ ಖಾನ್‌ ಸಹೋದರಿ ಜೀವನಪೂರ್ತಿ ಹೀಗಿರಲು ಕಾರ ...

 ಮಹಾಲಕ್ಷ್ಮೀ ಲೇ ಔಟ್ ಬೋವಿಪಾಳ್ಯದಲ್ಲಿರೋ ಪ್ರೇಮಾ ಪಿಜಿಯಲ್ಲಿನ ಅವ್ಯವಸ್ಥೆ ನೋಡಿ. ಪಿಜಿಯನ್ನು ನೋಡಿಕೊಳ್ಳುವ ಕಲ್ಪನಾ ಎಂಬ ಆಂಟಿ  ದೊಣ್ಣೆ ಹಿಡಿದು ಬೆದರಿಕೆ ಹಾಕುತ್ತಿದ್ದಾರೆ. ಪಿಜಿಯಲ್ಲಿರೋ ಯುವತಿಯರು ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ. ಈ ಪಿಜಿ  ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಿದೆ.

Follow Us:
Download App:
  • android
  • ios