Asianet Suvarna News Asianet Suvarna News

10 ನೇ ತರಗತಿಯಾದವರಿಗೆ ಸಂತಸದ ಸುದ್ದಿ, ಕೇಂದ್ರ ಗುಪ್ತಚರ ಇಲಾಖೆಯಲ್ಲಿ ನೇಮಕಾತಿ

ಗೃಹ ಸಚಿವಾಲಯದ  ಅಡಿಯಲ್ಲಿ ಬರುವ ಇಂಟೆಲಿಜೆನ್ಸ್ ಬ್ಯೂರೋ  ವಿವಿಧ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅರ್ಜಿ ಸಲ್ಲಿಸಲು ನವೆಂಬರ್ 13 ಕೊನೆಯ ದಿನ‍ವಾಗಿದೆ.

Intelligence Bureau is hiring for over more than six hundred posts gow
Author
First Published Nov 7, 2023, 3:17 PM IST

ಗೃಹ ಸಚಿವಾಲಯದ  ಅಡಿಯಲ್ಲಿ ಬರುವ ಇಂಟೆಲಿಜೆನ್ಸ್ ಬ್ಯೂರೋ (ಕೇಂದ್ರ ಗುಪ್ತಚರ ಇಲಾಖೆ)ವಿವಿಧ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಭದ್ರತಾ ಸಹಾಯಕ , ಮೋಟಾರ್ ಟ್ರಾನ್ಸ್‌ಪೋರ್ಟ್ (SA/MT), ಹಾಗೆಯೇ ಮಲ್ಟಿ-ಟಾಸ್ಕಿಂಗ್ ಸ್ಟಾಫ್/ಜನರಲ್ (MTS/General) ಹುದ್ದೆಗೆ  ಅರ್ಜಿ ಸಲ್ಲಿಸಲು  ನವೆಂಬರ್ 13, 2023.  ಕೊನೆಯ ದಿನವಾಗಿದೆ.

ಈ ನೇಮಕಾತಿ ಡ್ರೈವ್ ಮೂಲಕ, ಇಂಟೆಲಿಜೆನ್ಸ್ ಬ್ಯೂರೋ ಸಂಸ್ಥೆಯಲ್ಲಿ ಒಟ್ಟು 677 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅಭ್ಯರ್ಥಿಗಳು MHA IB SA/MT ಮತ್ತು MTS ನೇಮಕಾತಿ 2023 ಗೆ ಅಧಿಕೃತ ವೆಬ್‌ಸೈಟ್ mha.gov.in ಅಥವಾ www.ncs.gov.in ಮೂಲಕ  ಅರ್ಜಿ ಸಲ್ಲಿಸಬಹುದು.

ಕೆಇಎ ಪರೀಕ್ಷೆ ಬ್ಲೂಟೂತ್ ಅಕ್ರಮ ಪೊಲೀಸರಿಗೆ ಮಹತ್ವದ ಸುಳಿವು, ಯಾರು ಈ ಸರ್ಕಾರ್‌

ಹುದ್ದೆಗಳ ವಿವರ ಇಂತಿದೆ:
ಭದ್ರತಾ ಸಹಾಯಕ ಅಥವಾ ಮೋಟಾರ್ ಸಾರಿಗೆ (SA/MT) ಒಟ್ಟು 362 ಹುದ್ದೆಗಳು
ಮಲ್ಟಿ-ಟಾಸ್ಕಿಂಗ್ ಸ್ಟಾಫ್/ಜನರಲ್ (MTS/ಸಾಮಾನ್ಯ) ಒಟ್ಟು 315  ಹುದ್ದೆಗಳು

ಅರ್ಜಿ ಸಲ್ಲಿಸಬೇಕಾದ ದಾಖಲೆಗಳು

  • ಮೆಟ್ರಿಕ್ಯುಲೇಷನ್ ಅಥವಾ 10 ನೇ ತರಗತಿ ಪಾಸ್  ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ತತ್ಸಮಾನ ವಿದ್ಯಾರ್ಹತೆ ಪಡೆದಿರುವ ದಾಖಲೆ.
  • ಅಭ್ಯರ್ಥಿಯು ಅರ್ಜಿ ಸಲ್ಲಿಸಿದ ರಾಜ್ಯದ ವಾಸಸ್ಥಳ ಪ್ರಮಾಣಪತ್ರವನ್ನು ಹೊಂದಿರುವುದು.
  • ಮೋಟಾರು ಕಾರುಗಳಿಗೆ (LMV) ಮಾನ್ಯವಾದ ಚಾಲನಾ ಪರವಾನಗಿಯನ್ನು ಹೊಂದಿರುವುದು. ( SA/MT)
  • ಮೋಟಾರ್ ಮೆಕ್ಯಾನಿಸಂನ ಜ್ಞಾನ ಇರಬೇಕು (ಸಣ್ಣ ದೋಷಗಳನ್ನು ಸರಿಪಡಿಸುವುದು)
  • ಚಾಲನಾ ಪರವಾನಗಿಯನ್ನು ಪಡೆದ ನಂತರ ಕನಿಷ್ಠ ಒಂದು ವರ್ಷದವರೆಗೆ ಮೋಟಾರು ಕಾರನ್ನು ಚಾಲನೆ ಮಾಡಿದ ಅನುಭವ ಇರಬೇಕು

ಉಡುಪಿ: ಗೃಹಿಣಿ ಯುಪಿಎಸ್‌ಸಿ ತೇರ್ಗಡೆ, ಪುಟ್ಟ ಮಗುವಿನ ತಾಯಿಯ ದೊಡ್ಡ ಸಾಧನೆ..!

ಪರೀಕ್ಷಾ ಶುಲ್ಕ ರೂ 50, ಮತ್ತು ನೇಮಕಾತಿ ಪ್ರಕ್ರಿಯೆ ಶುಲ್ಕಗಳು ರೂ 450. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು (ರುಪೇ/ವೀಸಾ/ಮಾಸ್ಟರ್‌ಕಾರ್ಡ್/ಮ್ಯಾಸ್ಟ್ರೋ), ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಎಸ್‌ಬಿಐ ಇಪೇ ಲೈಟ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿ.

ಇದಲ್ಲದೆ, ಸೆಕ್ಯುರಿಟಿ ಅಸಿಸ್ಟೆಂಟ್ ಅಥವಾ ಮೋಟಾರ್ ಟ್ರಾನ್ಸ್‌ಪೋರ್ಟ್ (SA/MT) ಗೆ  ಅರ್ಜಿ ಸಲ್ಲಿಸುವವರ ವಯಸ್ಸಿನ ಮಿತಿಯು 27 ವರ್ಷಕ್ಕಿಂತ ಕಡಿಮೆ ಇರಬೇಕು ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್/ಜನರಲ್ (MTS/Gen) ಗೆ ಇದು 18 ರಿಂದ 25 ವರ್ಷಗಳು.

Follow Us:
Download App:
  • android
  • ios