ಭಾರತೀಯ ಕೋಸ್ಟ್ ಗಾರ್ಡ್  ನೇಮಕಾತಿ ಅಧಿಸೂಚನೆ ಯಾಂತ್ರಿಕ, ನಾವಿಕ ಸೇರಿ 322 ಹುದ್ದೆಗಳ ಭರ್ತಿಗೆ ಮುಂದಾದ ICG ಜನವರಿ 4ರಿಂದ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು(ಡಿ.17): ಭಾರತೀಯ ಕರಾವಳಿ ಭದ್ರತಾಪಡೆ (Indian Coast Guard - ICG) ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಭಾರತೀಯ ಕರಾವಳಿ ಭದ್ರತಾಪಡೆಯಲ್ಲಿ ಒಟ್ಟು 322 ಹುದ್ದೆಗಳು ಖಾಲಿ ಇದ್ದು, ತ್ವರಿತವಾಗಿ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆ ಆರಂಭಿಸೋದಾಗಿ ಅಧಿಸೂಚನೆ ಹೊರಡಿಸಿದೆ. ಯಾಂತ್ರಿಕ, ನಾವಿಕ ಹುದ್ದೆಗಳು ಸೇರಿ ಒಟ್ಟು 322 ಹುದ್ದೆಗಳು ಖಾಲಿ ಇದ್ದು 10ನೇ ತರಗತಿ, 12ನೇ ತರಗತಿ ಮತ್ತು ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಬಹುದು. ಜನವರಿ 4ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 14 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ joinindiancoastguard.gov.in ಗೆ ಭೇಟಿ ನೀಡಲು ಕೋರಲಾಗಿದೆ.

ಭಾರತೀಯ ಕೋಸ್ಟ್​​ ಗಾರ್ಡ್​​ನಲ್ಲಿ ಖಾಲಿ ಇರುವ ಯಾಂತ್ರಿಕ, ನಾವಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 250 ರೂ. ಅರ್ಜಿ ಶುಲ್ಕ ನಿಗದಿಯಾಗಿದೆ. ಎಸ್​ಟಿ/ಎಸ್​ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆನ್​ಲೈನ್​ ಮೋಡ್​​ನಲ್ಲಿ ಶುಲ್ಕ ಪಾವತಿಸಲು ಅಧಿಸೂಚನೆಯಲ್ಲಿ ಹೇಳಲಾಗಿದೆ.

ನಾವಿಕ(ಜನರಲ್ ಡ್ಯೂಟಿ/ಡೊಮೆಸ್ಟಿಕ್ ಬ್ರಾಂಚ್)- 295, ಯಾಂತ್ರಿಕ(ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್​)- 27 ಹೀಗೆ ಒಟ್ಟು 322 ಹುದ್ದೆಗಳು ಖಾಲಿ ಇದೆ. ಯಾಂತ್ರಿಕ, ನಾವಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್​/ಶಿಕ್ಷಣ ಸಂಸ್ಥೆಯಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ ಮತ್ತು ಡಿಪ್ಲೋಮಾ ಪಾಸಾಗಿರಬೇಕು.

East Coast Railway Recruitment 2022: ನರ್ಸಿಂಗ್​ ಸೂಪರಿಂಟೆಂಡೆಂಟ್​ ಸೇರಿ 14 ಹುದ್ದೆಗಳಿಗೆ ಪೂರ್ವ

ಭಾರತೀಯ ಕೋಸ್ಟ್​​ ಗಾರ್ಡ್​​ನಲ್ಲಿ ಖಾಲಿ ಇರುವ ಯಾಂತ್ರಿಕ, ನಾವಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-22 ವರ್ಷದೊಳಗಿರಬೇಕು.ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಮಿಳುನಾಡಿನ ಚೆನ್ನೈನಲ್ಲಿ ಉದ್ಯೋಗ ನೀಡಲಾಗುತ್ತದೆ. ಮಾತ್ರವಲ್ಲ ಹುದ್ದೆಯ ನಿಯಮಕ್ಕೆ ಅನುಸಾರವಾಗಿ ವೇತನ ಸಿಗಲಿದೆ. ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ICAR Recruitment 2022: ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಹಾಯಕ, ಕೌಶಲ್ಯಯುಕ್ತ ಸಿಬ್ಬಂದಿ ಹುದ್ದೆ

ಕ್ರೀಡಾ ಕೋಟದ ಮೇಲೆ ನೌಕಾಸೇನೆಯ ನಾವಿಕ ಹುದ್ದೆಗೆ ಅರ್ಜಿ ಸಲ್ಲಿಸಿ: ಭಾರತೀಯ ನೌಕಾಸೇನೆಯಲ್ಲಿ (Indian Navy) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪಿಯುಸಿ (PUC)ಪಾಸಾಗಿರುವವರು ಕ್ರೀಡಾ ಕೋಟದ ಮೇಲೆ ನಾವಿಕ ಹುದ್ದೆಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಡಿಸೆಂಬರ್ 11ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್ (Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

RDPR Karnataka Recruitment 2022: ಸಾಮಾಜಿಕ ಪರಿಶೋಧನಾ ಸಂಪನ್ಮೂಲ ವ್ಯಕ್ತಿ ಹುದ್ದೆ

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾದಳದ ಅಧಿಕೃತ ವೆಬ್​ಸೈಟ್ www.indiannavy.nic.in ಗೆ ಭೇಟಿ ನೀಡಲು ಕೋರಲಾಗಿದೆ. ನಾವಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 21,700-43,100ರೂ ವೇತನ ನೀಡಲಾಗುತ್ತದೆ. 

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪಿಯುಸಿ ಪಾಸಾಗಿರಬೇಕು. ಜೊತೆಗೆ ರಾಷ್ಟ್ರೀಯ/ ರಾಜ್ಯ/ ಅಖಿಲ ಭಾರತ ವಿಶ್ವವಿದ್ಯಾಲಯದ ಹಂತದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಚಾಂಪಿಯನ್​​ಶಿಪ್​ ಮಾಡಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 17 ರಿಂದ 22 ವರ್ಷದೊಳಗಿರಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಕೆಲಸ ನೀಡಲಾಗುತ್ತದೆ. 

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ, 
"ಕಾರ್ಯದರ್ಶಿಗಳು
ಭಾರತೀಯ ನೌಕಾದಳ ಸ್ಪೋರ್ಟ್ಸ್​ ಕಂಟ್ರೋಲ್​ ಬೋರ್ಡ್​
ಇಂಟಿಗ್ರೇಟೆಡ್​ ಹೆಡ್​​ಕ್ವಾರ್ಟರ್ಸ್​​ ಆಫ್​ ಮಿನಿಸ್ಟ್ರಿ ಆಫ್​ ಡಿಫೆನ್ಸ್​
7ನೇ ಮಹಡಿ, ಚಾಣಕ್ಯ ಭವನ
ನವದೆಹಲಿ-110021"
ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.