Asianet Suvarna News Asianet Suvarna News

ICAR Recruitment 2022: ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಹಾಯಕ, ಕೌಶಲ್ಯಯುಕ್ತ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನ

*ICAR KVKಯಲ್ಲಿ ಖಾಲಿ ಇರುವ  ಹುದ್ದೆಗಳಿಗೆ ನೇಮಕಾತಿ 
*ಅರ್ಜಿ ಸಲ್ಲಿಸಲು ಕೊನೆಯ ದಿನ ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 10 ,2022
*ಸಹಾಯಕ ಹುದ್ದೆಗಳಿಗೆ ಆಯ್ಕೆಯಾದವರಿಗೆ 35,000 ರೂ.ವರೆಗೆ ವೇತನ ಸಿಗಲಿದೆ

ICAR KVK is recruiting Assistant and Skilled support Staff apply for jobs gow
Author
Bengaluru, First Published Dec 17, 2021, 5:49 PM IST

ಬೆಂಗಳೂರು(ಡಿ17): ನೀವೇನಾದ್ರೂ SSLC ಪಾಸ್ ಮಾಡಿದ್ದು, ಉದ್ಯೋಗಕ್ಕೆ ಹುಡುಕಾಡುತ್ತಿದ್ದೀರಾ. ಅಂಥವರಿಗಾಗಿ ಇಲ್ಲೊಂದು ಬಂಪರ್ ಅವಕಾಶವಿದೆ. ಅದು ಕೇಂದ್ರ ಸರ್ಕಾರಿ ಸ್ವಾಮ್ಯದ ಇಲಾಖೆಯಲ್ಲಿ ಕೆಲಸವಿದೆ. ಅದು ಕೃಷಿಗೆ ಸಂಬಂಧಿಸಿದ್ದು ಅಂದ್ರೆ ನೀವು ಇನ್ನಷ್ಟು ಖುಷಿಪಡಬಹುದು. ಹೌದು. ಅದ್ಭುತವಾದ ಕೃಷಿ ಉದ್ಯೋಗಾವಕಾಶ ಇದಾಗಿದ್ದು, ಇದರಲ್ಲಿ ಮೆಟ್ರಿಕ್ ಪಾಸ್ (10 ನೇ ತರಗತಿ ಪಾಸ್) ಅಭ್ಯರ್ಥಿಯೂ ಸಹ ಅರ್ಜಿ ಸಲ್ಲಿಸಬಹುದು. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR- Indian Council of Agricultural Research ) ಅಡಿಯಲ್ಲಿ ಬರುವ ಕೃಷಿ ವಿಜ್ಞಾನ ಕೇಂದ್ರವು (Krishi Vignan Kendra-KVK) ಖಾಲಿ ಇರುವ ವಿವಿಧ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.  ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಹಾಯಕ (Assistant)  ಮತ್ತು ನುರಿತ ಬೆಂಬಲ ಸಿಬ್ಬಂದಿ (Skilled support Staff) ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ  ಅರ್ಜಿಗಳನ್ನು ಆಹ್ವಾನಿಸಿದೆ. ನೋಟಿಫಿಕೇಷನ್ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 10 2022.

ಸಹಾಯಕ (Assistant)  ಹುದ್ದೆಯ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 20 ರಿಂದ 39 ವರ್ಷದೊಳಗಿನವರಾಗಿರಬೇಕು. ನುರಿತ ಬೆಂಬಲ ಸಿಬ್ಬಂದಿ (Skilled Support Staff) ಹುದ್ದೆಗೆ ಅಭ್ಯರ್ಥಿಯ ವಯೋಮಿತಿ 18 ರಿಂದ 25 ವರ್ಷದೊಳಗಿರಬೇಕು. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ SC/ST/OBC/PH ಗೆ ವಯಸ್ಸಿನ ಸಡಿಲಿಕೆ ಯನ್ನು ನೀಡಲಾಗುತ್ತದೆ. 

ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಪದವಿ (BA,B.Com, B.SC) ಯನ್ನು ಪೂರ್ಣಗೊಳಿಸಿರಬೇಕು.  ನುರಿತ ಬೆಂಬಲ ಸಿಬ್ಬಂದಿ ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.

TCS BPS Hiring: 2022ರಲ್ಲಿ ಪದವಿ ಪೂರೈಸುವವರನ್ನು ನೇಮಕ ಮಾಡಿಕೊಳ್ಳುತ್ತಿರುವ ಟಿಸಿಎಸ್ 

ಹುದ್ದೆಗಳಿಗೆ ಅನುಗುಣವಾಗಿ ವೇತನ ನಿಗದಿಯಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 18,000 ರಿಂದ 35,400 ರೂ.ವರೆಗೂ ವೇತನ ಸಿಗಲಿದೆ. ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಹುದ್ದೆಗೆ 500 ರೂ. ಮತ್ತು ನುರಿತ ಸಹಾಯಕ ಸಿಬ್ಬಂದಿ ಹುದ್ದೆಗೆ 300 ರೂ.ಗಳ ಅರ್ಜಿ ಶುಲ್ಕವನ್ನು ಸಲ್ಲಿಸಬೇಕು. ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಪರವಾಗಿ  ಡ್ರಾಫ್ಟ್ ರೂಪದಲ್ಲಿ, ಎಸ್‌ಬಿಐ ಶಾಖೆ ಮೈಲಕ ಶುಲ್ಕ ಪಾವತಿಸಬೇಕು. ಅರ್ಜಿ ನಮೂನೆಯೊಂದಿಗೆ ಶುಲ್ಕ‌ಪಾವತಿಯ ರಸೀದಿ ಪ್ರತಿಯನ್ನು ಲಗತ್ತಿಸಬೇಕು. SC/ST/ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

RDPR KARNATAKA RECRUITMENT 2022: ಸಾಮಾಜಿಕ ಪರಿಶೋಧನಾ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಆಹ್ವಾನ

ಕೃಷಿ ವಿಜ್ಞಾನ ಕೇಂದ್ರದ ನೇಮಕಾತಿಗೆ ಮೊದಲು  ಅರ್ಜಿಗಳನ್ನು ಪರಿಶೀಲಿಸಿ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ಹಾಜರಾಗಲು ಅಭ್ಯರ್ಥಿಗಳಿಗೆ ಯಾವುದೇ ಟಿಎ/ಡಿಎ ನೀಡಲಾಗುವುದಿಲ್ಲ. ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಅಭ್ಯರ್ಥಿಗಳು ಸಹಾಯಕ ಹುದ್ದೆಗೆ  500ರೂ. ಮತ್ತು ನುರಿತ ಸಹಾಯಕ ಸಿಬ್ಬಂದಿ ಹುದ್ದೆಗೆ  300ರೂ. ಶುಲ್ಕ ಪಾವತಿಯ ಡಿಮ್ಯಾಂಡ್ ಡ್ರಾಪ್ಟ್  (DD)ಪ್ರತಿ ಹಾಗೂ  ವಯಸ್ಸು, ಜನ್ಮ ದಿನಾಂಕ, ಜಾತಿ ಪ್ರಮಾಣಪತ್ರ, ವಿದ್ಯಾರ್ಹತೆ, ಅನುಭವ ಇತ್ಯಾದಿಗಳ ಪ್ರಮಾಣಪತ್ರಗಳ ಸ್ವಯಂ-ದೃಢೀಕರಿಸಿದ ಪ್ರತಿಗಳನ್ನು ಕಳುಹಿಸಬೇಕು. ವಿಜ್ಞಾನಿ ಮತ್ತು ಮುಖ್ಯಸ್ಥ, ICAR- ಕೃಷಿ ವಿಜ್ಞಾನ ಕೇಂದ್ರ, CARD, ಕೊಳಭಾಗೊಮ್ PO, ತಡಿಯೂರ್, ತಿರುವಲ್ಲಾ- 689545 - ಈ ವಿಳಾಸಕ್ಕೆ ಅಭ್ಯರ್ಥಿಗಳು ಅಂಚೆ ಮೂಲಕ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ https://icar.org.in/ ಗೆ ಭೇಟಿ ನೀಡಿ.

BSNL recruitment 2022: ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

Follow Us:
Download App:
  • android
  • ios