Asianet Suvarna News Asianet Suvarna News

BSNL recruitment 2022: ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

* ಮಹಾರಾಷ್ಟ್ರ ಸರ್ಕಲ್‌ಗೆ ಸಂಬಂಧಿಸಿದಂತೆ ಈ ಅಪ್ರೆಂಟಿಸ್ ನೇಮಕಾತಿ
* ಅಭ್ಯರ್ಥಿಗಳು www.mhrdnats.gov.in ಮೂಲಕ ಅರ್ಜಿ ಸಲ್ಲಿಸಬೇಕು
* ಒಂದು ವರ್ಷದ ಅವಧಿ ಅಪ್ರೆಂಟಿಸ್‌ ನೇಮಕ ನಡೆಯಲಿದೆ, ಸ್ಟೈಫಂಡ್ ಸಿಗಲಿದೆ

BSNL is recruiting apprentice posts for Maharashtra circle gow
Author
Bengaluru, First Published Dec 16, 2021, 4:00 PM IST
  • Facebook
  • Twitter
  • Whatsapp

ಬೆಂಗಳೂರು(ಡಿ.16): ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (Bharath Sanchar Nigam Limited-BSNL), ಅಪ್ರೆಂಟಿಸ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆ ಶುರು ಮಾಡಿದೆ. ಒಂದು ವರ್ಷದ ಅವಧಿಗೆ ಅಪ್ರೆಂಟಿಸ್‌ಶಿಪ್ ತರಬೇತಿಯ ಪೋಸ್ಟ್‌ಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಅಪ್ರೆಂಟಿಸ್ ಹುದ್ದೆಗಳಿಗೆ ಡಿಸೆಂಬರ್ 29ರವರೆಗೂ ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ. ಬಿಎಸ್‌ಎನ್‌ಎಲ್ ಒಟ್ಟು 55 ಅಪ್ರೆಂಟಿಸ್ (Apprentice) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಅರ್ಹರು ಹಾಗೂ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬಿಎಸ್‌ಎನ್‌ಎಲ್, ಮಹಾರಾಷ್ಟ್ರದ ನೇಮಕಾತಿಗೆ ಈ ಬಾರಿ ಅರ್ಜಿಗಳನ್ನು ಆಹ್ವಾನಿಸಿದೆ.  ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಮಹಾರಾಷ್ಟ್ರದ ಅಧಿಕೃತ ಪೋರ್ಟಲ್ www.mhrdnats.gov.in ಮೂಲಕ ಅರ್ಜಿ ಸಲ್ಲಿಸಬೇಕು. 

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL), ಮಹಾರಾಷ್ಟ್ರ (MH) ಟೆಲಿಕಾಂ ಸರ್ಕಲ್, ಇಂಜಿನಿಯರಿಂಗ್/ ಟೆಕ್ನಾಲಜಿ ಕ್ಷೇತ್ರದಲ್ಲಿ (ಎಲೆಕ್ಟ್ರಾನಿಕ್ಸ್/ ಇ& ಟಿಸಿ/ ಕಂಪ್ಯೂಟರ್/ ಐಟಿ) ಡಿಪ್ಲೋಮಾ ಹೊಂದಿರುವವರನ್ನು ಒಂದು ವರ್ಷದ ಅವಧಿಗೆ ಅಪ್ರೆಂಟಿಸ್‌ಶಿಪ್ ತರಬೇತಿಗಾಗಿ ನೇಮಕ ಮಾಡಿಕೊಳ್ಳಲಿದೆ. ಅಪ್ರೆಂಟಿಸ್‌ಶಿಪ್ ತರಬೇತಿಯ ಅವಧಿಯು ಒಂದು ವರ್ಷವಿರುತ್ತದೆ. 

ಈಗಾಗಲೇ ಡಿಸೆಂಬರ್ 14ರಿಂದ ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭಾರತ್ ಸಂಚಾರ್ ನಿಗಮ್ ಎಂಎಚ್ ಸರ್ಕಲ್‌ ನೇಮಕಾತಿಗೆ ಡಿಸೆಂಬರ್ 29 ರೊಳಗೆ ಅರ್ಜಿ ಸಲ್ಲಿಸಬೇಕು.  ಮಹಾರಾಷ್ಟ್ರದ (Maharastra) ಬಿಎಸ್ಎನ್ಎಲ್ ಅಧಿಕೃತ ವೆಬ್‌ಸೈಟ್ mhrdnats.gov.in ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪ್ರಮಾಣಪತ್ರ ಮತ್ತು ದಾಖಲೆ ಪರಿಶೀಲನೆಯು ಜನವರಿ 3, 2022 ರಂದು ನಡೆಯಲಿದೆ. ಆಯ್ಕೆ ಪಟ್ಟಿಯನ್ನು ಜನವರಿ 5, 2022 ರಂದು ಘೋಷಿಸಲಾಗುತ್ತದೆ. 

TCS BPS Hiring: 2022ರಲ್ಲಿ ಪದವಿ ಪೂರೈಸುವವರನ್ನು ನೇಮಕ ಮಾಡಿಕೊಳ್ಳುತ್ತಿರುವ ಟಿಸಿಎಸ್ 

ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು ಡಿಸೆಂಬರ್ 29, 2021 ರಂತೆ 25 ವರ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಆದಾಗ್ಯೂ, ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಬಿಎಸ್‌ಎನ್‌ಎಲ್ ಮಹಾರಾಷ್ಟ್ರ  ಟೆಲಿಕಾಂ ಸರ್ಕಲ್ ನೇಮಕಾತಿಗೆ ಆಯ್ಕೆಯಾದ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫಂಡ್ ಕೂಡ ಸಿಗಲಿದೆ. ಅಭ್ಯರ್ಥಿಗಳಿಗೆ ಮಾಸಿಕ ರೂ 8,000 ಸ್ಟೈಫಂಡ್ ನೀಡಲಾಗುವುದು. ಒಂದು ವರ್ಷದವರೆಗೂ ಅವರಿಗೆ ಸ್ಟೈಫಂಡ್ ದೊರೆಯಲಿದೆ. 

HAL Recruitment 2021: ಹೆಚ್‌ಎಎಲ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಡಿ.18 ಕೊನೆ ದಿನ

ಅಭ್ಯರ್ಥಿಗಳು ಮೊದಲು ತಮ್ಮನ್ನು ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ (Ministry of Human Resource Development) ಪೋರ್ಟಲ್ mhrdnats.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು. ಅಭ್ಯರ್ಥಿಯು ಏಪ್ರಿಲ್ 1, 2020 ರಂದು ಅಥವಾ ನಂತರ AICTE ಅಥವಾ GOI ನಿಂದ ಗುರುತಿಸಲ್ಪಟ್ಟ ಎಂಜಿನಿಯರಿಂಗ್ / ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ಡಿಪ್ಲೊಮಾ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯು ಸಂಬಂಧಿತ SSA/ಜಿಲ್ಲೆಗಳಲ್ಲಿ ವಾಸಿಸುವ ಅಭ್ಯರ್ಥಿಗೆ ಆಯ್ಕೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆಯ್ಕೆಯ ಮಾನದಂಡವು ಅಂತಿಮ ಶೇಕಡಾವಾರು ಅಥವಾ ಅಭ್ಯರ್ಥಿಯು ತಮ್ಮ ಡಿಪ್ಲೊಮಾ ಮತ್ತು ವೈಯಕ್ತಿಕ ಸಂದರ್ಶನದಲ್ಲಿ ಪಡೆದ ಅಂಕಗಳ ಅರ್ಹತೆಯನ್ನು ಆಧರಿಸಿರುತ್ತದೆ. 

ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಡಾಕ್ಯುಮೆಂಟ್ ಪರಿಶೀಲನೆಗಾಗಿ ಇಮೇಲ್ ಮೂಲಕ ತಿಳಿಸಲಾಗುತ್ತದೆ. ಅಭ್ಯರ್ಥಿಯು ಅರ್ಜಿ ಸಲ್ಲಿಸಿದ BSNL Business Area ಆಯ್ಕೆ ಮಾಡಿದರೆ ಸೇರಿಕೊಳ್ಳಬಹುದು.  ಆಯ್ಕೆಯಾದ ಅಪ್ರೆಂಟಿಸ್‌ಗಳು BSNL ಆಡಳಿತದ ಅಗತ್ಯತೆಗಳ ಪ್ರಕಾರ ಸಂಬಂಧಪಟ್ಟ ವ್ಯಾಪಾರ ಪ್ರದೇಶದಲ್ಲಿ ಎಲ್ಲಿಯಾದರೂ ಸೇವೆ ಸಲ್ಲಿಸಬಹುದು ಅನ್ನೋದು ಗಮನಾರ್ಹ.

SBI CBO Recruitment 2022: SBI ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ 

Follow Us:
Download App:
  • android
  • ios