HALನಲ್ಲಿ ಉದ್ಯೋಗ ಅವಕಾಶ; ತಿಂಗಳ ವೇತನ 23,000 ರೂ, ಅರ್ಜಿ ಸಲ್ಲಿಕೆಗೆ ಅ.5 ಕೊನೆಯ ದಿನ!
ಪ್ರತಿಷ್ಠಿತ ಸಂಸ್ಥೆ ಹೆಚ್ಎಎಲ್‌ನಲ್ಲಿ ನೇಮಕಾತಿ ಆರಂಭಗೊಂಡಿದೆ. ಅರ್ಜಿ ಸಲ್ಲಿಕಿಗೆ ಅಕ್ಟೋಬರ್ 5 ಕೊನೆಯ ದಿನವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 23,000 ರೂಪಾಯಿ ವೇತನ ಸಿಗಲಿದೆ.
ಬೆಂಗಳೂರು(ಸೆ.27) ಭಾರತದ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಗಳಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ಒಂದು. ಖಾಲಿ ಇರುವ 81 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 23,000 ರೂಪಾಯಿ ವೇತನ ಸಿಗಲಿದೆ. ಅಕ್ಟೋಬರ್ 5 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್ ಅಧಿಕೃತ ವೆಬ್‌ಸೈಟ್ ಮೂಲಕ ಖಾಲಿ ಇರುವ ಉದ್ಯೋಗ ಅವಕಾಶಕ್ಕೆ ಅರ್ಜಿ ಸಲ್ಲಿಕೆಗೆ ಕೋರಲಾಗಿದೆ. ಸಾಮಾನ್ಯ ಕೆಟಗರಿಯಲ್ಲಿ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು 200 ರೂಪಾಯಿ ಮೊತ್ತವನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು. ಎಸ್‌ಸಿ, ಎಸ್‌ಟಿ, PwBD ಸೇರಿದಂತೆ ಕೆಲ ಕೆಟಗರಿಯಲ್ಲಿ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಏಕಾಏಕಿ ಕೆಲಸ ಕಳೆದುಕೊಂಡರೆ ನಿಭಾಯಿಸುವುದು ಹೇಗೆ? ಇಲ್ಲಿದೆ ಹಣಕಾಸು ಸಲಹೆ!
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿ ಅರ್ಹರನ್ನು ಶಾರ್ಟ್ ಲಿಸ್ಟ್ ಮಾಡಲಿದ್ದಾರೆ. ಬಳಿಕ ಈ ಅಭ್ಯರ್ಥಿಗಳಿಗೆ ಪರೀಕ್ಷೆ ದಿನಾಂಕ ನೀಡಲಾಗುತ್ತದೆ. ಪರೀಕ್ಷಾ ದಿನಾಂಕ, ಸ್ಥಳವನ್ನು ಸೂಕ್ತ ಸಮಯದಲ್ಲಿ ಹೆಚ್ಎಎಲ್ ಪ್ರಕಟಿಸಲಿದೆ. ಪರೀಕ್ಷೆಯಲ್ಲಿ ಪಾಸ್ ಆಗುವ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಅಂತಿಮ ಆಯ್ಕೆಗೊಳಿಸಲಾಗುತ್ತದೆ. ಈ ಕುರಿತು ಹೆಚ್ಎಎಲ್ ಅಧಿಸೂಚನೆ ಹೊರಡಿಸಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಪೋಸ್ಟಿಂಗ್ ಸ್ಥಳ ಉತ್ತರ ಪ್ರದೇಶದ ಅಮೇಥಿ. ಕೊರ್ವಾದಲ್ಲಿರುವ ಏವಿಯೋನಿಕ್ಸ್ ಘಟಕದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಪ್ರೊಬೇಶನರಿ ಅವಧಿ ಬಳಿಕ ಅಭ್ಯರ್ಥಿಗಳನ್ನು ಬೇರೆ ಹೆಚ್ಎಲ್ ಘಟಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 4 ವರ್ಷದ ಕಾಲಾವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಬಳಿ ಕಾಲಾನಸಾರ ಮುಂದುವರಿಸಲಾಗುತ್ತದೆ.
ಅಧಿಕೃತ ವೆಬ್‌ಸೈಟ್ HAL ಮೂಲಕ ಅರ್ಜಿ ಸಲ್ಲಿಕೆಗೆ ಕೋರಲಾಗಿದೆ. ಅಪ್ಲಿಕೇಶನ್ ರಿಜಿಸ್ಟ್ರೇಶನ್ ಪಕ್ರಿಯೆ ಪೂರ್ಣಗೊಳಿಸಬೇಕು. ಅರ್ಜಿ ಸಲ್ಲಿಸುವಾಗ ಕೆಲ ಅಗತ್ಯ ಪ್ರಮಾಣಪತ್ರಗಳನ್ನು ಸಲ್ಲಿಕೆ ಮಾಡಬೇಕು. ವಿದ್ಯಾರ್ಹತೆ, ಜನನ ಪ್ರಮಾಣಪತ್ರ ಸೇರಿದಂತೆ ದಾಖಲೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಕೆ ಮಾಡಬೇಕು. ಅಗತ್ಯ ವಿವರಗಳನ್ನು ನಮೂದಿಸಿ ಅಪ್ಲಿಕೇಶನ್ ಸಬ್‌ಮಿಟ್ ಮಾಡಬೇಕು. ಸಲ್ಲಿಕೆ ಬಳಿಕ ಹಾರ್ಡ್ ಕಾಪಿಯನ್ನು ಮುಂದಿನ ವಿವರಕ್ಕಾಗಿ ಇಟ್ಟುಕೊಳ್ಳಬೇಕು. ಈಗಾಗಲೇ ಹಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಹರು ಹಾಗೂ ಆಸಕ್ತರು ಶೀಘ್ರದಲ್ಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಕೃಷಿ ಇಲಾಖೆಯಲ್ಲಿ ಭರ್ಜರಿ ನೇಮಕಾತಿ: 945 ಹುದ್ದೆಗಳಿಗೆ ಅರ್ಜಿ ಆಹ್ವಾನ