Asianet Suvarna News Asianet Suvarna News

FCI Recruitment 2022: ಆಹಾರ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ

ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ  ವಿವಿಧ ಮ್ಯಾನೆಜೇರಿಯಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮಾರ್ಚ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Food Corporation of India recruitment 2022 notification for various managerial posts gow
Author
Bengaluru, First Published Mar 7, 2022, 9:22 PM IST

ಬೆಂಗಳೂರು(ಮಾ.7): ಸರ್ಕಾರಿ ಸ್ವಾಮ್ಯದ ಭಾರತೀಯ ಆಹಾರ ನಿಗಮ-ಎಫ್‌ಸಿಐ (Food Corporation of India - FCI) ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಆರಂಭಿಸಿದೆ. ವಿವಿಧ ಮ್ಯಾನೆಜೇರಿಯಲ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಮಾರ್ಚ್ 31ಕ್ಕೂ ಮೊದಲೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ಇಲಾಖೆಯ ಅಧಿಕೃತ್ ವೆಬ್‌ ತಾಣ https://fci.gov.in/ ಗೆ ಭೇಟಿ ನೀಡಬಹುದು.

ಸಹಾಯಕ ಜನರಲ್ ಮ್ಯಾನೇಜರ್ (Assistant General Manager-Administration), ಸಹಾಯಕ ಜನರಲ್ ಮ್ಯಾನೇಜರ್ (Technical), ಸಹಾಯಕ ಜನರಲ್ ಮ್ಯಾನೇಜರ್ (Accounts), ಸಹಾಯಕ ಜನರಲ್ ಮ್ಯಾನೇಜರ್ (Law) ಮತ್ತು ಮೆಡಿಕಲ್ ಆಫಿಸರ್ (Medical Officer) ಹುದ್ದೆಗಳು ಖಾಲಿ ಇದೆ.

DELHI UNIVERSITY KHALSA COLLEGE RECRUITMENT 2022: ಬೋಧಕರ ಹುದ್ದೆಗೆ ದೆಹಲಿ ವಿವಿ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ ವಿವಿಧ ಮ್ಯಾನೆಜೇರಿಯಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರ ವಿದ್ಯಾಬ್ಯಾಸ ಪಡೆದಿರಬೇಕು.

ಜನರಲ್ ಅಡ್ಮಿನಿಸ್ಟ್ರೇಷನ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಅಥವಾ ACA /
AICWA/ ACS ಅಥವಾ ಕಾನೂನಿನಲ್ಲಿ 55% ಅಂಕಗಳೊಂದಿಗೆ  ಸ್ನಾತಕೋತ್ತರ ಪದವಿ ಮಾಡಿರಬೇಕು.

ಟೆಕ್ನಿಕಲ್ ಜನರಲ್ ಅಡ್ಮಿನಿಸ್ಟ್ರೇಷನ್ ಮ್ಯಾನೇಜರ್ ಹುದ್ದೆಗೆ ಕೃಷಿಯಲ್ಲಿ 55% ಅಂಕಗಳೊಂದಿಗೆ ಬಿ.ಎಸ್ಸಿ ಅಥವಾ ಆಹಾರ ವಿಜ್ಞಾನ / ಆಹಾರ ತಂತ್ರಜ್ಞಾನ / ಆಹಾರ ಸಂಸ್ಕರಣೆಯಲ್ಲಿ 55% ಅಂಕಗಳೊಂದಿಗೆ BE / B.Tech ಅಥವಾ ಕೃಷಿ ಎಂಜಿನಿಯರಿಂಗ್‌ನಲ್ಲಿ  55% ಅಂಕಗಳೊಂದಿಗೆ  B.Tech/ BE ಅಥವಾ
ಬಯೋ-ಟೆಕ್ನಾಲಜಿ / ಬಯೋ-ಕೆಮಿಕಲ್ / ಅಗ್ರಿಕಲ್ಚರಲ್ ಬಯೋ-ಟೆಕ್ನಾಲಜಿಯಲ್ಲಿ 55% ಅಂಕಗಳೊಂದಿಗೆ ಬಿಇ / ಬಿ.ಟೆಕ್.

ಅಕೌಂಟ್ಸ್ ಜನರಲ್ ಅಡ್ಮಿನಿಸ್ಟ್ರೇಷನ್ ಮ್ಯಾನೇಜರ್ ಹುದ್ದೆಗೆ ಚಾರ್ಟರ್ಡ್ ಅಕೌಂಟೆಂಟ್ / ಕಾಸ್ಟ್ ಅಕೌಂಟೆಂಟ್ಸ್ / ಕಂಪನಿ ಸೆಕ್ರೆಟರಿ ಸದಸ್ಯತ್ವ ಪಡೆದಿರಬೇಕು.

ಕಾನೂನು ಜನರಲ್ ಅಡ್ಮಿನಿಸ್ಟ್ರೇಷನ್ ಮ್ಯಾನೇಜರ್ ಹುದ್ದೆಗೆ 5 ವರ್ಷಗಳ ಅನುಭವದೊಂದಿಗೆ ಕಾನೂನಿನಲ್ಲಿ ಪೂರ್ಣ ಸಮಯದ ಪದವಿ ಪಡೆದಿರಬೇಕು.

ಮೆಡಿಕಲ್ ಆಫಿಸರ್ ಹುದ್ದೆಗೆ 3 ವರ್ಷಗಳ ಅನುಭವದೊಂದಿಗೆ ಎಂಬಿಬಿಎಸ್ ಮಾಡಿರಬೇಕು. 

Delhi University SS College Recruitment 2022: ದೆಹಲಿ ವಿವಿಯ SS ಕಾಲೇಜಿನ ಬೋಧಕೇತರ ಹುದ್ದೆ

ವಯೋಮಿತಿ: ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ ವಿವಿಧ ಮ್ಯಾನೆಜೇರಿಯಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ  ಹುದ್ದೆಗೆ ಅನುಸಾರ ವಯೋಮಿತಿ ನಿಗದಿಯಾಗಿದೆ.  

ಸಹಾಯಕ ಜನರಲ್ ಮ್ಯಾನೇಜರ್ (ಜನರಲ್ ಅಡ್ಮಿನಿಸ್ಟ್ರೇಷನ್) ಹುದ್ದೆಗೆ 30 ವರ್ಷ 
ಮಿಕ್ಕ ಸಹಾಯಕ ಜನರಲ್ ಮ್ಯಾನೇಜರ್  ಹುದ್ದೆಗೆ 28 ವರ್ಷ 
ಸಹಾಯಕ ಜನರಲ್ ಮ್ಯಾನೇಜರ್ (ಕಾನೂನು) ಹುದ್ದೆಗೆ  33 ವರ್ಷ 
ವೈದ್ಯಕೀಯ ಅಧಿಕಾರಿ - 35 ವರ್ಷ 

ಅರ್ಜಿ ಶುಲ್ಕ: ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ ವಿವಿಧ ಮ್ಯಾನೆಜೇರಿಯಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ UR, OBC, EWS ವರ್ಗದ ಅಭ್ಯರ್ಥಿಗಳು  1000 ರೂ ಅರ್ಜಿ ಶುಲ್ಕ ಪಾವತಿಸಬೇಕು. SC, ST, PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ ವಿವಿಧ ಮ್ಯಾನೆಜೇರಿಯಲ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳು 50% ರಷ್ಟು ಅಂಕ ಪಡೆದಿರಬೇಕು. ವರ್ಗಾನುಸಾರ ಅಂಕದಲ್ಲಿ ಸಡಿಲಿಕೆ ಇದೆ.

Follow Us:
Download App:
  • android
  • ios