Asianet Suvarna News Asianet Suvarna News

Delhi University SS College Recruitment 2022: ದೆಹಲಿ ವಿವಿಯ SS ಕಾಲೇಜಿನ ಬೋಧಕೇತರ ಹುದ್ದೆಗೆ ನೇಮಕಾತಿ

ದೆಹಲಿ ವಿಶ್ವವಿದ್ಯಾನಿಲಯದ ಸ್ವಾಮಿ ಶ್ರದ್ಧಾನಂದ ಕಾಲೇಜಿನಲ್ಲಿ ಖಾಲಿ ಇರುವ ಬೋಧಕೇತರ ಸಿಬ್ಬಂದಿಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು,  ಮಾರ್ಚ್ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Delhi University Swami Shraddhanand College recruitment notification for non teaching staff gow
Author
Bengaluru, First Published Mar 7, 2022, 4:16 PM IST

ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ (Delhi University) ಸ್ವಾಮಿ ಶ್ರದ್ಧಾನಂದ ಕಾಲೇಜಿನಲ್ಲಿ (Swami Shraddhanand College) ಖಾಲಿ ಇರುವ ಬೋಧಕೇತರ ಸಿಬ್ಬಂದಿಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಈಗಾಗಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮಾರ್ಚ್ 20 ರ ಸಂಜೆ 5 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸ್ವಾಮಿ ಶ್ರದ್ಧಾನಂದ ಕಾಲೇಜಿನ ಅಧಿಕೃತ ವೆಬ್‌ಸೈಟ್ recssc.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ಸೈಟ್ https://ss.du.ac.in/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. 

ಒಟ್ಟು 30 ಹುದ್ದೆಗಳು ಖಾಲಿ ಇದ್ದು ತಲಾ 1 ಹುದ್ದೆಯಂತೆ ಆಡಳಿತಾತ್ಮಕ , ಸೀನಿಯರ್ .ಪಿ.ಎ ಯಿಂದ ಹಿಡಿದು ಪ್ರಧಾನ ಅಧಿಕಾರಿ (Principal Officer), ಹಿರಿಯ ಸಹಾಯಕ (Senior Assistant), ವೃತ್ತಿಪರ ಸಹಾಯಕ (Professional Assistant), ಸೀನಿಯರ್ ಟೆಕ್ ಅಸಿಸ್ಟೆಂಟ್ (ಕಂಪ್ಯೂಟರ್) ಹಾಗು   ಸೆಮಿ ಪ್ರೊಫೆಷನಲ್ ಅಸಿಸ್ಟೆಂಟ್  ವಿಭಾಗದಲ್ಲಿ 2 ಹುದ್ದೆಗಳು ಜೂನಿಯರ್ ಅಸಿಸ್ಟೆಂಟ್, ಲ್ಯಾಬೋರೇಟರಿ ಅಸಿಸ್ಟೆಂಟ್, ಲೈಬ್ರರಿ ಅಟೆಂಡೆಂಟ್ ಹುದ್ದೆಗೆ ತಲಾ 3 ಹಾಗೂ ಲ್ಯಾಬೋರೇಟರಿ ಅಟೆಂಡೆಂಟ್ 14 ಹುದ್ದೆಗಳು ಖಾಲಿ ಇವೆ.

ಶೈಕ್ಷಣಿಕ ವಿದ್ಯಾರ್ಹತೆ: ದೆಹಲಿ ವಿಶ್ವವಿದ್ಯಾನಿಲಯದ   ಸ್ವಾಮಿ ಶ್ರದ್ಧಾನಂದ ಕಾಲೇಜಿನಲ್ಲಿ   ಖಾಲಿ ಇರುವ ಬೋಧಕೇತರ ಸಿಬ್ಬಂದಿಯ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗನುಸಾರವಾಗಿ 10ನೇ ತರಗತಿ, 12ನೇ ತರಗತಿ, ಪದವಿ , ಬಿಇ, ಬಿಟೆಕ್ ಮಾಡಿರಬೇಕು.

UAS Dharwad Recruitment 2022: ತಾಂತ್ರಿಕ ಅಧಿಕಾರಿ ಹುದ್ದೆಗೆ ನೇಮಕಾತಿ ಅಧಿಸೂಚನೆ, ಮಾರ್ಚ್ 9ಕ್ಕೆ ನೇರ ಸಂದರ್ಶನ 

ವಯೋಮಿತಿ: ದೆಹಲಿ ವಿಶ್ವವಿದ್ಯಾನಿಲಯದ   ಸ್ವಾಮಿ ಶ್ರದ್ಧಾನಂದ ಕಾಲೇಜಿನಲ್ಲಿ   ಖಾಲಿ ಇರುವ ಬೋಧಕೇತರ ಸಿಬ್ಬಂದಿಯ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ 35 ವರ್ಷದ ಒಳಗಿನವರಾಗಿರಬೇಕು. SC,ST,OBC,PWD ಮತ್ತು PH ಅಭ್ಯರ್ಥಿಗಳೀಗೆ ಸರಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ: ದೆಹಲಿ ವಿಶ್ವವಿದ್ಯಾನಿಲಯದ   ಸ್ವಾಮಿ ಶ್ರದ್ಧಾನಂದ ಕಾಲೇಜಿನಲ್ಲಿ   ಖಾಲಿ ಇರುವ ಬೋಧಕೇತರ ಸಿಬ್ಬಂದಿಯ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 500 ರೂ ಮತ್ತು ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು 250 ರೂ ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ದೆಹಲಿ ವಿಶ್ವವಿದ್ಯಾನಿಲಯದ   ಸ್ವಾಮಿ ಶ್ರದ್ಧಾನಂದ ಕಾಲೇಜಿನಲ್ಲಿ   ಖಾಲಿ ಇರುವ ಬೋಧಕೇತರ ಸಿಬ್ಬಂದಿಯ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ವಾಣಿಜ್ಯ ಪರೀಕ್ಷೆ , ಸಂದರ್ಶನ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.

Kendriya Vidyalaya Recruitment 2022: ಬೆಂಗಳೂರಿನಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗೆ ಮಾ.7 ಮತ್ತು 8ಕ್ಕೆ ನೇರ ಸಂದರ್ಶನ

ಬೆಂಗಳೂರಿನಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗೆ ಮಾ.7 ಮತ್ತು 8ಕ್ಕೆ ನೇರ ಸಂದರ್ಶನ: ಬೆಂಗಳೂರು ಕೇಂದ್ರೀಯ ವಿದ್ಯಾಲಯ (kendriya vidyalaya bangalore) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. 2022-23ನೇ ಸಾಲಿನ ಒಪ್ಪಂದದ ಆಧಾರದ ಮೇಲೆ ಬೋಧಕ ಮತ್ತು ಬೋಧಕೇತರ ಶಿಕ್ಷಕರ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದ್ದು, ಮಾರ್ಚ್ 7 ಮತ್ತು 8 ರಂದು  ವಿದ್ಯಾಲಯದ ಆವರಣದಲ್ಲಿ ನೇರ ಸಂದರ್ಶನ ನಡೆಯಲಿದೆ.  ಹೆಚ್ಚಿನ ಮಾಹಿತಿ ಆಸಕ್ತರು ಅಧಿಕೃತ ವೆಬ್‌ಸೈಟ್ https://megcentre.kvs.ac.in/ ಗೆ ಭೇಟಿ ನೀಡಬಹುದು. 

ಭೋದಕ ಹುದ್ದೆಯಲ್ಲಿ PRT, TGT, PGT,ಯೋಗ ಶಿಕ್ಷಕ, ಕ್ರೀಡಾ ಶಿಕ್ಷಕ, ನೃತ್ಯ/ಸಂಗೀತ ಶಿಕ್ಷಕ, ವಿಶೇಷ ಶಿಕ್ಷಕ ಮತ್ತು ಬೋಧಕೇತರ ವಿಭಾಗದಲ್ಲಿ ಕಂಪ್ಯೂಟರ್ ಬೋಧಕ, ಸಲಹೆಗಾರರು, ನರ್ಸ್, ವೈದ್ಯರು, DEO,ಕ್ಲರ್ಕ್ ಹುದ್ದೆಗಳು ಖಾಲಿ ಇದೆ.

Follow Us:
Download App:
  • android
  • ios