Asianet Suvarna News Asianet Suvarna News

Delhi University Khalsa College Recruitment 2022: ಬೋಧಕರ ಹುದ್ದೆಗೆ ದೆಹಲಿ ವಿವಿ ನೇಮಕಾತಿ

ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜು   ಒಟ್ಟು 66 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಮಾರ್ಚ್ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. 

Delhi University Sri Guru Tegh Bahadur Khalsa College recruitment notification for various Assistant Professor gow
Author
Bengaluru, First Published Mar 7, 2022, 5:12 PM IST

ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ (Delhi University) ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜು  (Sri Guru Tegh Bahadur Khalsa College - SGTBKC) ಖಾಲಿ ಇರುವ ಬೋಧಕರ ಹುದ್ದೆಗಳನ್ನು ಭರ್ತಿ ಮಾಡಲು  ಅಧಿಸೂಚನೆ ಹೊರಡಿಸಿದೆ. ಒಟ್ಟು 66 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು,   ಮಾರ್ಚ್ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜಿನ ಅಧಿಕೃತ ವೆಬ್‌ಸೈಟ್ https://sgtbkhalsadu.ac.in/ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.  

ಒಟ್ಟು 66 ಬೋಧಕ ಹುದ್ದೆಗಳ ಮಾಹಿತಿ ಇಂತಿದೆ
ಇಂಗ್ಲೀಷ್ (English): 7 ಹುದ್ದೆಗಳು
ಪಂಜಾಬಿ (Punjabi) : 5 ಹುದ್ದೆಗಳು
ಹಿಂದಿ (Hindi) : 3 ಹುದ್ದೆಗಳು
ಅರ್ಥಶಾಸ್ತ್ರ (Economics) : 4 ಹುದ್ದೆಗಳು
ಇತಿಹಾಸ (History) : 4 ಹುದ್ದೆಗಳು
ರಾಜ್ಯಶಾಸ್ತ್ರ (Political Science) : 3 ಹುದ್ದೆಗಳು
ವಾಣಿಜ್ಯ (Commerce): 11 ಹುದ್ದೆಗಳು
ಗಣಿತ (Mathematics): 3 ಹುದ್ದೆಗಳು
ಸಸ್ಯಶಾಸ್ತ್ರ (Botany): 6 ಹುದ್ದೆಗಳು
ರಸಾಯನಶಾಸ್ತ್ರ (Chemistry): 2 ಹುದ್ದೆಗಳು
ಎಲೆಕ್ಟ್ರಾನಿಕ್ಸ್ (Electronics): 2 ಹುದ್ದೆಗಳು
ಕಂಪ್ಯೂಟರ್ ಸೈನ್ಸ್ (Computer Science): 5 ಹುದ್ದೆಗಳು
ಭೌತಶಾಸ್ತ್ರ (Physics): 3 ಹುದ್ದೆಗಳು
ಪ್ರಾಣಿಶಾಸ್ತ್ರ (Zoology): 6 ಹುದ್ದೆಗಳು
ಪರಿಸರ ವಿಜ್ಞಾನ (Environmental Science): 2 ಹುದ್ದೆಗಳು 

DELHI UNIVERSITY SS COLLEGE RECRUITMENT 2022: ದೆಹಲಿ ವಿವಿಯ SS ಕಾಲೇಜಿನ ಬೋಧಕೇತರ ಹುದ್ದೆಗೆ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಅರ್ಹತೆಗಳು: ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜಿನಲ್ಲಿ ಖಾಲಿ ಇರುವ ಬೋಧಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಭಾರತದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮಾಡಿರಬೇಕು ಅಥವಾ  ಮಾನ್ಯತೆ ಪಡೆದ ವಿದೇಶಿ ವಿಶ್ವವಿದ್ಯಾಲಯದಿಂದ ಸಮಾನ ಪದವಿ ಮಾಡಿರಬೇಕು.

ವಿದ್ಯಾರ್ಹತೆ ಜೊತೆಗೆ ಅಭ್ಯರ್ಥಿಯು UGC ಅಥವಾ CSIR ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಯಲ್ಲಿ ಪಾಸಾಗಿರಬೇಕು.

ವಯೋಮಿತಿ: ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜಿನಲ್ಲಿ ಖಾಲಿ ಇರುವ ಬೋಧಕ  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ 35 ವರ್ಷದ ಒಳಗಿನವರಾಗಿರಬೇಕು. SC,ST,OBC,PWD ಮತ್ತು PH ಅಭ್ಯರ್ಥಿಗಳೀಗೆ ಸರಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.

Oil India recruitment 2022: ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ

ಅರ್ಜಿ ಶುಲ್ಕ: ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜಿನಲ್ಲಿ ಖಾಲಿ ಇರುವ ಬೋಧಕ  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ UR/OBC/EWS ಅಭ್ಯರ್ಥಿಗಳು 500 ರೂ ಮತ್ತು SC, ST, PwBD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಪಾವತಿ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ: ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜಿನಲ್ಲಿ ಖಾಲಿ ಇರುವ ಬೋಧಕ  ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ,  ಸಂದರ್ಶನ, ದಾಖಲಾತಿ ಪರಿಶೀಲನೆ   ಮೂಲಕ ಆಯ್ಕೆ ಮಾಡಲಾಗುವುದು.

ವೇತನ ವಿವರ: ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ಗುರು ತೇಜ್ ಬಹದ್ದೂರ್ ಖಾಲ್ಸಾ ಕಾಲೇಜಿನಲ್ಲಿ ಖಾಲಿ ಇರುವ ಬೋಧಕ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಯುಜಿಸಿ ಅನುಸಾರ ವೇತನ ದೊರೆಯಲಿದೆ. 

Follow Us:
Download App:
  • android
  • ios