Asianet Suvarna News Asianet Suvarna News

FACT Recruitment 2022: ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ, 1ಲಕ್ಷ ರೂ ವೇತನ

ರಸಗೊಬ್ಬರ ಮತ್ತು  ರಾಸಾಯನಿಕ ಟ್ರಾವಂಕೂರ್ ಲಿಮಿಟೆಡ್  ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮಾರ್ಚ್‌ 17 ಕೊನೆಯ ದಿನವಾಗಿದೆ. 

FACT Recruitment 2022 notification for director posts gow
Author
Bengaluru, First Published Jan 17, 2022, 5:51 PM IST

ಬೆಂಗಳೂರು(ಜ.17): ರಸಗೊಬ್ಬರ ಮತ್ತು  ರಾಸಾಯನಿಕ ಟ್ರಾವಂಕೂರ್ ಲಿಮಿಟೆಡ್ (Fertilizers and Chemicals Travancore Limited) ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಡೈರೆಕ್ಟರ್ (Director) ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್​/ ಆಫ್‌ಲೈನ್ ಎರಡು ಪ್ರಕಾರದ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್‌ 17 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿ ಪಡೆಯಲು ಆಸಕ್ತರು ಇಲಾಖೆಯ ಅಧಿಕೃತ ವೆಬ್‌ತಾಣ fact.co.in ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ:  ರಸಗೊಬ್ಬರ ಮತ್ತು ರಾಸಾಯನಿಕ ಟ್ರಾವಂಕೂರ್ (Travancore) ಲಿಮಿಟೆಡ್ ನಲ್ಲಿರುವ ಡೈರೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​​ನಿಂದ ಕಡ್ಡಾಯವಾಗಿ ಎಂಜಿನಿಯರಿಂಗ್ (Engineering ), ಎಂಬಿಎ (MBA), ಸ್ನಾತಕೋತ್ತರ ಪದವಿ (Post Graduate) ಪೂರ್ಣಗೊಳಿಸಿರಬೇಕು.

ಅನುಭವ: ರಸಗೊಬ್ಬರ ಮತ್ತು ರಾಸಾಯನಿಕ ಟ್ರಾವಂಕೂರ್ ಲಿಮಿಟೆಡ್ ನಲ್ಲಿರುವ ಡೈರೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ದೊಡ್ಡ ಸಂಸ್ಥೆಯಲ್ಲಿ ನಿರ್ವಹಣೆಯ ಕಾರ್ಯ,  ಹಿರಿಯ ಮಟ್ಟದಲ್ಲಿ ತಾಂತ್ರಿಕ/ಕಾರ್ಯಾಚರಣೆಯ ಅನುಭವವನ್ನು ಹೊಂದಿರಬೇಕು. ಅದರಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕನಿಷ್ಠ ಐದು ವರ್ಷಗಳು ಪ್ರಮುಖ ರಸಗೊಬ್ಬರಗಳು/ರಾಸಾಯನಿಕಗಳು/ಪೆಟ್ರೋಕೆಮಿಕಲ್ಸ್ ವಲಯದಲ್ಲಿ ಕೆಲಸ ಮಾಡಿರಬೇಕು.

RAILTEL CORPORATION OF INDIA RECRUITMENT 2022: 69 ಮ್ಯಾನೇಜರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ ಹುದ್ದೆಗಳು

ವಯೋಮಿತಿ: ರಸಗೊಬ್ಬರ ಮತ್ತು ರಾಸಾಯನಿಕ ಟ್ರಾವಂಕೂರ್ ಲಿಮಿಟೆಡ್ ನಲ್ಲಿರುವ ಡೈರೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಜನವರಿ 18, 2022ಕ್ಕೆ 45 ವರ್ಷ ಮೀರಿರಬಾರದು. ಇದರ ಜೊತೆಗೆ ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:  ರಸಗೊಬ್ಬರ ಮತ್ತು ರಾಸಾಯನಿಕ ಟ್ರಾವಂಕೂರ್ ಲಿಮಿಟೆಡ್ ನಲ್ಲಿರುವ ಡೈರೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ: ರಸಗೊಬ್ಬರ ಮತ್ತು ರಾಸಾಯನಿಕ ಟ್ರಾವಂಕೂರ್ ಲಿಮಿಟೆಡ್ ನಲ್ಲಿರುವ ಡೈರೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹ 75,000-1,00,000 ವೇತನ ದೊರೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳು ನವದೆಹಲಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.

NIT Karnataka Recruitment 2022: ಫೀಲ್ಡ್ ಅಸಿಸ್ಟೆಂಟ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಬೇಕಾಗಿರುವ ವಿಳಾಸ: ರಸಗೊಬ್ಬರ ಮತ್ತು ರಾಸಾಯನಿಕ ಟ್ರಾವಂಕೂರ್ ಲಿಮಿಟೆಡ್ ನಲ್ಲಿರುವ ಡೈರೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  fact.co.in ಗೆ ಭೇಟಿ ನೀಡಿ ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲವಾದರೆ ಆಫ್​ಲೈನ್ (Offline)​ ಮೂಲಕ ಅರ್ಜಿ ಸಲ್ಲಿಸಬಹುದು. ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವಿಳಾಸ 
ಶ್ರೀಮತಿ ಕಿಂಬುವಾಂಗ್ ಕಿಪ್ಜೆನ್ ಕಾರ್ಯದರ್ಶಿ
ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿ
ಸಾರ್ವಜನಿಕ ಉದ್ಯಮಗಳ ಭವನ
ಬ್ಲಾಕ್ ಸಂಖ್ಯೆ 14
CGO ಕಾಂಪ್ಲೆಕ್ಸ್
ಲೋಧಿ ರಸ್ತೆ
ನವದೆಹಲಿ - 110003

Smt Kimbuong Kipgen
Secretary
Public Enterprises Selection Board
Public Enterprises Bhawan
BlockNo. 14
CGO Complex
Lodhi Road
New Delhi-110003.

NVS Recruitment 2022: ಬರೋಬ್ಬರಿ 1925 ಹುದ್ದೆಗಳ ಭರ್ತಿಗೆ ಮುಂದಾದ ನವೋದಯ ವಿದ್ಯಾಲಯ ಸಮಿತಿ

Follow Us:
Download App:
  • android
  • ios