Asianet Suvarna News Asianet Suvarna News

NVS Recruitment 2022: ಬರೋಬ್ಬರಿ 1925 ಹುದ್ದೆಗಳ ಭರ್ತಿಗೆ ಮುಂದಾದ ನವೋದಯ ವಿದ್ಯಾಲಯ ಸಮಿತಿ

ನವೋದಯ ವಿದ್ಯಾಲಯ ಸಮಿತಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಫೆಬ್ರವರಿ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

NVS Recruitment 2022 Notification  Apply Online for Various Non Teaching Vacancies gow
Author
Bengaluru, First Published Jan 15, 2022, 6:01 PM IST

ಬೆಂಗಳೂರು(ಜ.15): ನವೋದಯ ವಿದ್ಯಾಲಯ ಸಮಿತಿ (Navodaya Vidyalaya Samiti) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.   ಸಹಾಯಕ ಕಮಿಷನರ್, ಸಹಾಯಕ ಸೆಕ್ಷನ್ ಆಫೀಸರ್, ಆಡಿಟ್ ಅಸಿಸ್ಟೆಂಟ್, ಜೂನಿಯರ್ ಟ್ರಾನ್ಸ್ಲೇಶನ್ ಆಫೀಸರ್ ಸೇರಿ ಒಟ್ಟು 1925 ಹುದ್ದೆಗಳು ಖಾಲಿ ಇದೆ.  ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಫೆಬ್ರವರಿ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ https://navodaya.gov.in/nvs/en/Home1 ಗೆ ಭೇಟಿ ನೀಡಿ.

ಒಟ್ಟು 1925 ಹುದ್ದೆಗಳ ವಿವರ ಈ ಕೆಳಗಿನಂತಿದೆ.
ಸಹಾಯಕ ಕಮಿಷನರ್-05    
ಸಹಾಯಕ ಕಮಿಷನರ್ (ಅಡ್ಮಿನ್) (ಗ್ರೂಪ್‌ ಎ) -02
ಮಹಿಳಾ ಸ್ಟಾಫ್‌ ನರ್ಸ್‌-82    
ಸಹಾಯಕ ಸೆಕ್ಷನ್ ಆಫೀಸರ್ (ಗ್ರೂಪ್‌ ಸಿ)-10
ಆಡಿಟ್ ಅಸಿಸ್ಟಂಟ್ (ಗ್ರೂಪ್‌ ಸಿ)-11
ಕಿರಿಯ ಟ್ರಾನ್ಸ್‌ಲೇಷನ್‌ ಆಫೀಸರ್-04    
ಕಿರಿಯ ಇಂಜಿನಿಯರ್ (ಸಿವಿಲ್)-01    
ಸ್ಟೆನೋಗ್ರಾಫರ್ (ಗ್ರೂಪ್‌ ಸಿ)-22
ಕಂಪ್ಯೂಟರ್ ಆಪರೇಟರ್ (ಗ್ರೂಪ್‌ ಸಿ)-04    
ಕ್ಯಾಟರಿಂಗ್ ಅಸಿಸ್ಟಂಟ್ ( ಗ್ರೂಪ್‌ ಸಿ)-87
ಕಿರಿಯ ಸೆಕ್ರೇಟರಿಯಟ್ ಸಹಾಯಕ  (ಗ್ರೂಪ್‌ ಸಿ) -630    
ಇಲೆಕ್ಟ್ರೀಷಿಯನ್ ಕಮ್‌ ಪ್ಲಂಬರ್ (ಗ್ರೂಪ್‌ ಸಿ)-273    
ಲ್ಯಾಬ್ ಅಟೆಂಡಂಟ್ (ಗ್ರೂಪ್‌ ಸಿ)-142
ಮೆಸ್‌ ಹೆಲ್ಪರ್ (ಗ್ರೂಪ್‌ ಸಿ)-629
ಮಲ್ಟಿ ಟಾಸ್ಕಿಂಗ್ ಸ್ಟಾಫ್‌ (ಗ್ರೂಪ್‌ ಸಿ)-23

RRB NTPC RESULT ANNOUNCED: ರೈಲ್ವೆ ನೇಮಕಾತಿಯ ಸಿಬಿಟಿ-1 ಪರೀಕ್ಷೆಯ ಫಲಿತಾಂಶ ಪ್ರಕಟ

ಶೈಕ್ಷಣಿಕ ವಿದ್ಯಾರ್ಹತೆ: ನವೋದಯ ವಿದ್ಯಾಲಯ ಸಮಿತಿಯ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗನುಸಾರ ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು. ವಿವರಗಳು ಈ ಕೆಳಗಿನಂತಿದೆ.

ಸಹಾಯಕ ಕಮಿಷನರ್-  ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹ್ಯುಮ್ಯಾನಿಟೀಸ್ ವಿಷಯದಲ್ಲಿ ಎಂಎ, ವಿಜ್ಞಾನ ಮತ್ತು ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.
ಸಹಾಯಕ ಕಮಿಷನರ್ (ಅಡ್ಮಿನ್) (ಗ್ರೂಪ್‌ ಎ) - ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಪಡೆದಿರಬೇಕು.
ಮಹಿಳಾ ಸ್ಟಾಫ್‌ ನರ್ಸ್‌- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಮತ್ತು ಬಿಎಸ್ಸಿ ನರ್ಸಿಂಗ್.    
ಸಹಾಯಕ ಸೆಕ್ಷನ್ ಆಫೀಸರ್ (ಗ್ರೂಪ್‌ ಸಿ)- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ  ಪದವಿ ಮತ್ತು ಕಂಪ್ಯೂಟರ್ ಜ್ಞಾನ ಇರಬೇಕು.
ಆಡಿಟ್ ಅಸಿಸ್ಟಂಟ್ (ಗ್ರೂಪ್‌ ಸಿ)- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಕಾಂ ಪದವೀದರರಾಗಿರಬೇಕು.
ಕಿರಿಯ ಟ್ರಾನ್ಸ್‌ಲೇಷನ್‌ ಆಫೀಸರ್- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು     ಡಿಪ್ಲೊಮ / ಪಿಜಿ ಮಾಡಿರಬೇಕು.
ಕಿರಿಯ ಇಂಜಿನಿಯರ್ (ಸಿವಿಲ್)- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು    ಬಿಇ ಸಿವಿಲ್ ಮಾಡಿರಬೇಕು.
ಸ್ಟೆನೋಗ್ರಾಫರ್ (ಗ್ರೂಪ್‌ ಸಿ)- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಜತೆಗೆ, ಶೀಘ್ರಲಿಪಿ ಪ್ರಮಾಣ ಪತ್ರ ಪಡೆದಿರಬೇಕು.
ಕಂಪ್ಯೂಟರ್ ಆಪರೇಟರ್ (ಗ್ರೂಪ್‌ ಸಿ)- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಗ್ರಿ, ಒಂದು ವರ್ಷ ಡಿಪ್ಲೊಮ ಮಾಡಿರಬೇಕು.
ಕ್ಯಾಟರಿಂಗ್ ಅಸಿಸ್ಟಂಟ್ ( ಗ್ರೂಪ್‌ ಸಿ)- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ, ಡಿಪ್ಲೊಮ ಮಾಡಿರಬೇಕು.
ಕಿರಿಯ ಸೆಕ್ರೇಟರಿಯಟ್ ಸಹಾಯಕ  (ಗ್ರೂಪ್‌ ಸಿ) - ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೀನಿಯರ್ ಸೆಕೆಂಡರಿ ಟೈಪ್‌ರೈಟಿಂಗ್ ಜ್ಞಾನ ಇರಬೇಕು.
ಇಲೆಕ್ಟ್ರೀಷಿಯನ್ ಕಮ್‌ ಪ್ಲಂಬರ್ (ಗ್ರೂಪ್‌ ಸಿ)- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10th, ITI (ಇಲೆಕ್ಟ್ರೀಷಿಯನ್, ವೈಯರ್‌ಮೆನ್‌, ಪ್ಲಂಬಿಂಗ್ ) ಮಾಡಿರಬೇಕು.
ಲ್ಯಾಬ್ ಅಟೆಂಡಂಟ್ (ಗ್ರೂಪ್‌ ಸಿ)- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10th, 12th ಸೈನ್ಸ್‌, ಡಿಪ್ಲೊಮ ಲ್ಯಾಬ್ ಟೆಕ್ನೀಷಿಯನ್‌ ಮಾಡಿರಬೇಕು.
ಮೆಸ್‌ ಹೆಲ್ಪರ್ (ಗ್ರೂಪ್‌ ಸಿ)- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಮಾಡಿರಬೇಕು.
ಮಲ್ಟಿ ಟಾಸ್ಕಿಂಗ್ ಸ್ಟಾಫ್‌ (ಗ್ರೂಪ್‌ ಸಿ)- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಮಾಡಿರಬೇಕು.

ಪ್ರಮುಖ ದಿನಾಂಕಗಳು: ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 10, 2022.
ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ ದಿನಾಂಕ ಮಾರ್ಚ್ 9 ರಿಂದ ಮಾರ್ಚ್ 11 ರವರೆಗೆ ನಡೆಯುವ ಸಾಧ್ಯತೆ.

ವೇತನ ವಿವರ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 20,000 ದಿಂದ 60,000 ರೂ ವೇತನ ಸಿಗಲಿದೆ.

Prasar Bharati Recruitment 2022: ಮಲ್ಟಿ ಮೀಡಿಯಾ ಜರ್ನಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ ವಿವರ:
ಅಸಿಸ್ಟಂಟ್‌ ಕಮಿಷನರ್ ಮತ್ತು ಅಸಿಸ್ಟಂಟ್ ಕಮಿಷನರ್ (ಅಡ್ಮಿನ್) (ಗ್ರೂಪ್‌ ಎ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 1500 ರೂ.
ಮಹಿಳಾ ಸ್ಟಾಫ್‌ ನರ್ಸ್‌ ಹುದ್ದೆಗೆ  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 1200 ರೂ.
ಲ್ಯಾಬ್ ಅಟೆಂಡಂಟ್ (ಗ್ರೂಪ್‌ ಸಿ), ಮೆಸ್‌ ಹೆಲ್ಪರ್ (ಗ್ರೂಪ್‌ ಸಿ), ಮಲ್ಟಿ ಟಾಸ್ಕಿಂಗ್ ಸ್ಟಾಫ್‌ (ಗ್ರೂಪ್‌ ಸಿ) ಹುದ್ದೆಗೆ  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 750 ರೂ .
ಬಾಕಿ ಉಳಿದಿರುವ ಸಹಾಯಕ ಅಸಿಸ್ಟಂಟ್ ಸೆಕ್ಷನ್ ಆಫೀಸರ್ (ಗ್ರೂಪ್‌ ಸಿ), ಆಡಿಟ್ ಅಸಿಸ್ಟಂಟ್ (ಗ್ರೂಪ್‌ ಸಿ), ಕಿರಿಯ ಟ್ರಾನ್ಸ್‌ಲೇಷನ್‌ ಆಫೀಸರ್, ಕಿರಿಯ ಇಂಜಿನಿಯರ್ (ಸಿವಿಲ್), ಸ್ಟೆನೋಗ್ರಾಫರ್ (ಗ್ರೂಪ್‌ ಸಿ), ಕಂಪ್ಯೂಟರ್ ಆಪರೇಟರ್ (ಗ್ರೂಪ್‌ ಸಿ), ಕ್ಯಾಟರಿಂಗ್ ಅಸಿಸ್ಟಂಟ್ ( ಗ್ರೂಪ್‌ ಸಿ), ಕಿರಿಯ ಸೆಕ್ರೇಟರಿಯಟ್ ಸಹಾಯಕ (ಗ್ರೂಪ್‌ ಸಿ), ಇಲೆಕ್ಟ್ರೀಷಿಯನ್ ಕಮ್‌ ಪ್ಲಂಬರ್ (ಗ್ರೂಪ್‌ ಸಿ) ಹುದ್ದೆಗಳಿಗೆ 1000 ರೂ ಅರ್ಜಿ ಶುಲ್ಕ ಪಾವತಿಸಬೇಕು. ಅಭ್ಯರ್ಥಿಗಳು ಕ್ರೆಡಿಟ್ ಕಾರ್ಡ್‌, ಡೆಬಿಟ್ ಕಾರ್ಡ್‌, ನೆಟ್‌ ಬ್ಯಾಂಕಿಂಗ್‌ ಬಳಸಿ ಅರ್ಜಿ ಶುಲ್ಕ ಪಾವತಿಸಬಹುದು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದ ವೆಬ್‌ಸೈಟ್ ವಿಳಾಸ: https://cdn.digialm.com//EForms/configuredHtml/1258/74494//Instruction.html

Follow Us:
Download App:
  • android
  • ios