CCI Recruitment 2022: ಭಾರತೀಯ ಸ್ಪರ್ಧಾ ಆಯೋಗದಲ್ಲಿ 2 ಲಕ್ಷದವರೆಗೆ ವೇತನದ ಉದ್ಯೋಗ, ಇಂದೇ ಅರ್ಜಿ ಸಲ್ಲಿಸಿ

ಭಾರತೀಯ ಸ್ಪರ್ಧಾ ಆಯೋಗ ಖಾಲಿ ಇರುವ ಜಂಟಿ ನಿರ್ದೇಶಕ ಜನರಲ್ ಮತ್ತು ಉಪ ನಿರ್ದೇಶಕ ಜನರಲ್  ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ. 

Competition Commission of India Recruitment 2022 Apply for Joint Director and Dy. Director General posts gow

ಬೆಂಗಳೂರು(ಜ.6): ಭಾರತೀಯ ಸ್ಪರ್ಧಾ ಆಯೋಗ (Competition Commission of India) ಖಾಲಿ ಇರುವ ಜಂಟಿ ನಿರ್ದೇಶಕ ಜನರಲ್ (Joint Director General) ಮತ್ತು ಉಪ ನಿರ್ದೇಶಕ ಜನರಲ್ (Deputy Director General)ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 12 ಹುದ್ದೆಗಳ ಭರ್ತಿಗೆ ಕರೆ ನೀಡಲಾಗಿದ್ದು, ಆಸಕ್ತರು ಆನ್‌ಲೈನ್ ಮೂಲಕ  ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ಇಲಾಖೆಯ ಅಧಿಕೃತ ವೆಬ್‌ತಾಣ https://www.cci.gov.in/  ಗೆ ಭೇಟಿ ನೀಡಲು ಕೋರಲಾಗಿದೆ.

ಒಟ್ಟು 12 ಹುದ್ದೆಗಳ ವಿವರ ಇಂತಿದೆ.
ಜಂಟಿ ನಿರ್ದೇಶಕ ಜನರಲ್ - 4 ಹುದ್ದೆಗಳು
ಉಪ ನಿರ್ದೇಶಕ ಜನರಲ್ - 8 ಹುದ್ದೆಗಳು

ಮಾನದಂಡಗಳು: ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಕೇಂದ್ರ ಅಥವಾ ರಾಜ್ಯ ಸರ್ಕಾರಗಳು, ಸರ್ಕಾರಿ ಕಂಪನಿಗಳು ಅಥವಾ ಸ್ವಾಯತ್ತ ಸಂಸ್ಥೆಗಳು ಅಥವಾ ನಿಯಂತ್ರಕ ಅಧಿಕಾರಿಗಳು ಅಥವಾ ವಿಶ್ವವಿದ್ಯಾಲಯಗಳು ಅಥವಾ ಕೇಂದ್ರ/ರಾಜ್ಯ ಸರ್ಕಾರಗಳ ಶೈಕ್ಷಣಿಕ ಅಥವಾ ಸಂಶೋಧನೆ ಅಥವಾ ನ್ಯಾಯಾಂಗ ಸಂಸ್ಥೆಗಳ ಉದ್ಯೋಗಿಗಳಾಗಿರಬೇಕು. 

UPSC CAPF 2020 Final Result: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 2020ನೇ ಸಾಲಿನ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ: ಅಭ್ಯರ್ಥಿಗಳು ಕಾನೂನು/ಅರ್ಥಶಾಸ್ತ್ರ/ವಾಣಿಜ್ಯ/ಬಿಸಿನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ  ಹಣಕಾಸು ಮತ್ತು ಖಾತೆ ವಿಚಾರದಲ್ಲಿ ಬ್ಯಾಚುಲರ್ ಪದವಿಯನ್ನು ಪೂರೈಸಿರಬೇಕು ಇಲ್ಲವೇ CA/CS/ವೆಚ್ಚ ಲೆಕ್ಕಪರಿಶೋಧಕ (Cost Accountan) ಅಥವಾ ಆಯ್ಕೆ ಸಮಿತಿಯು ಉಪಯುಕ್ತವೆಂದು ಪರಿಗಣಿಸುವ ಯಾವುದೇ ಸಮಾನ ಪದವಿಯನ್ನು ಹೊಂದಿರಬೇಕು.

ವಯೋಮಿತಿ: ಭಾರತೀಯ ಸ್ಪರ್ಧಾ ಆಯೋಗ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಗರಿಷ್ಠ 56 ವರ್ಷ. SC/ST/OBC/PWD/PH ಅಭ್ಯರ್ಥಿಗಳಿಗೆ  ಸರಕಾರದ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ವೇತನ: ಜಂಟಿ ನಿರ್ದೇಶಕ ಜನರಲ್ ಹುದ್ದೆಗೆ ಮಾಸಿಕ 1,23,100  ರಿಂದ 2,15,900 ರೂ  ಹಾಗೂ  ಉಪ ನಿರ್ದೇಶಕ ಜನರಲ್ ಹುದ್ದೆಗೆ ಮಾಸಿಕ 78,800 ರಿಂದ 2,09,200 ರೂ ವೇತನ ನಿಗದಿಯಾಗಿದೆ.

ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳೀಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಕರ್ತವ್ಯ ನಿರ್ವಹಿಸಬಹುದು. 

ಅಧಿಸೂಚನೆ ಮತ್ತು ಅಪ್ಲಿಕೇಶನ್ ಗೆ ಈ ಲಿಂಕ್ ಕ್ಲಿಕ್ ಮಾಡಿ: https://www.cci.gov.in/sites/default/files/whats_newdocument/deputation.pdf

IIIT Bengaluru Recruitment 2022: ಲ್ಯಾಬ್ ಇನ್‌ ಚಾರ್ಜ್ ಹುದ್ದೆಗೆ ಅರ್ಜಿ ಆಹ್ವಾನ

SSLC ಪಾಸಾದವರನ್ನು ಟೆಕ್ನೀಷಿಯನ್ ಹುದ್ದೆಗಳ ನೇಮಕಾತಿಗೆ ಕರೆದ ಕೃಷಿ ಸಂಶೋಧನಾ ಸಂಸ್ಥೆ: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (Indian Agriculture Research Institute) ಖಾಲಿ ಇರುವ ಟೆಕ್ನೀಷಿಯನ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಒಟ್ಟು 641 ಟೆಕ್ನಿಷಿಯನ್ (Technician) ಹುದ್ದೆಗಳು ಖಾಲಿ ಇದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವಾಗಿದೆ. SSLC ಪಾಸಾದ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್​ಸೈಟ್​ iari.res.in ಗೆ ಭೇಟಿ ನೀಡಲು ಕೋರಲಾಗಿದೆ.

ವಿದ್ಯಾರ್ಹತೆ: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ (IARI) ಕಾಲಿ ಇರುವ ತಂತ್ರಜ್ಞ  ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್​/ ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.

ವಯೋಮಿತಿ: ಕೃಷಿ ಸಂಶೋಧನಾ ಸಂಸ್ಥೆಯ ತಂತ್ರಜ್ಞ  ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-30 ವರ್ಷದೊಳಗಿರಬೇಕು. ಸರ್ಕಾರದ ನಿಯಮಾನುಸಾರ ಎಸ್​ಸಿ, ಎಸ್​ಟಿ, ಒಬಿಸಿ, PWD, PH ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

Latest Videos
Follow Us:
Download App:
  • android
  • ios