Asianet Suvarna News Asianet Suvarna News

UPSC CAPF 2020 Final Result: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 2020ನೇ ಸಾಲಿನ ನೇಮಕಾತಿಯ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟ

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ   2020ನೇ ಸಾಲಿನ ನೇಮಕಾತಿ ಪ್ರಕ್ರಿಯೆಯ ಫಲಿತಾಂಶವನ್ನು UPSC ಬಿಡುಗಡೆ ಮಾಡಿದೆ. ಒಟ್ಟು 187 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
 

UPSC CAPF 2020 Final Result announced 187 candidates selected for posts gow
Author
Bengaluru, First Published Jan 5, 2022, 6:15 PM IST

ಬೆಂಗಳೂರು(ಜ.5): ಕೇಂದ್ರ ಲೋಕಸೇವಾ ಆಯೋಗವು (Union Public Service Commission - UPSC), ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (Central Armed Police Forces -CAPF) 2020ನೇ ಸಾಲಿನ ನೇಮಕಾತಿ ಪ್ರಕ್ರಿಯೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. CAPF ಅಸಿಸ್ಟಂಟ್ ಕಮಾಂಡಂಟ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕಾತಿಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ upsc.gov.in ಗೆ ಭೇಟಿ ನೀಡಿ ಫಲಿತಾಂಶವನ್ನು ವೀಕ್ಷಿಸಬಹುದು.

ಒಟ್ಟು 210 ಸಿಎಪಿಎಫ್‌ (CAPF) ಅಸಿಸ್ಟಂಟ್ ಕಮಾಂಡಂಟ್‌ ಹುದ್ದೆಗಳಿಗೆ ಪ್ರಸ್ತುತ 187 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 59 ಅಭ್ಯರ್ಥಿಗಳು ಸಾಮಾನ್ಯ ಕೆಟಗರಿಯಿಂದ, 20 ಅಭ್ಯರ್ಥಿಗಳು ಆರ್ಥಿಕವಾಗಿ ಹಿಂದುಳಿದ ವರ್ಗದಿಂದ, ಎಸ್‌ಸಿ ಕೆಟಗರಿಯಿಂದ 35 ಮತ್ತು ಎಸ್‌ಟಿ ಕೆಟಗರಿಯಿಂಸ 18 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

UPSCಯ  ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಪರೀಕ್ಷೆಯನ್ನು  ಡಿಸೆಂಬರ್ 20, 2020 ರಂದು ನಡೆಸಲಾಗಿತ್ತು. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಆಯ್ದ  ಅಭ್ಯರ್ಥಿಗಳಿಗೆ ಡಿಸೆಂಬರ್ 2021 ರಲ್ಲಿ ಪರ್ಸನಾಲಿಟಿ ಟೆಸ್ಟ್‌ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಭಾಗವಹಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯ ಗ್ರೂಪ್‌ ಎ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ.

ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ (Border Security Force-BSF), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್‌ (Central Reserve Police Force -CRPF), ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್‌ (Central Industrial Security Force -CISF), ಇಂಡೊ-ಟಿಬೇಟಿಯನ್ ಬಾರ್ಡರ್ ಪೊಲೀಸ್ (Indo-Tibetan Border Police-ITBP) ಮತ್ತು ಸಶಸ್ತ್ರ ಸೀಮಾ ಬಲ (Sashastra Seema Bal -SSB), I ಈ ವಿಭಾಗಗಳಲ್ಲಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳನ್ನು ನಿಯೋಜನೆ ಮಾಡಲಾಗುತ್ತದೆ.

ಯುಪಿಎಸ್‌ಸಿ ಸಿಎಪಿಎಫ್‌ 2020 ಫಲಿತಾಂಶವನ್ನು ಹೀಗೆ ವೀಕ್ಷಿಸಿ:
ಯುಪಿಎಸ್‌ಸಿ ವೆಬ್‌ಸೈಟ್‌  upsc.gov.inಗೆ ಭೇಟಿ ನೀಡಿ. ಫೈನಲ್ ರಿಸಲ್ಟ್ ಎಂಬಲ್ಲಿ ಕ್ಲಿಕ್ ಮಾಡಿ. ನಂತರ ಓಪನ್‌ ಆಗುವ ಪೇಜ್‌ನಲ್ಲಿ ರಿಸಲ್ಟ್‌ನ ಪಿಡಿಎಫ್‌ ಫೈಲ್‌ ಲಭ್ಯವಿರುತ್ತದೆ.  ಓಪನ್‌ ಆಗುವ ರಿಸಲ್ಟ್‌ ಶೀಟ್‌ನಲ್ಲಿ ರಿಜಿಸ್ಟರ್‌ ನಂಬರ್ ಪ್ರಕಾರ ಶಾರ್ಟ್‌ಲಿಸ್ಟ್‌ ಆದ ಅಭ್ಯರ್ಥಿಗಳ ಫಲಿತಾಂಶ ಚೆಕ್‌ ಮಾಡಿಕೊಳ್ಳಬಹುದು. ಪೈನಲ್ ರಿಸಲ್ಟ್ ಪೇಜ್  ನೋಡಲು ಈ ಲಿಂಕ್ ಕ್ಲಿಕ್ ಮಾಡಿ https://www.upsc.gov.in/final-results   ಆಯ್ಕೆ ಪಟ್ಟಿ ನೋಡಲು ಈ ಲಿಂಕ್ ಕ್ಲಿಕ್ ಮಾಡಿ https://www.upsc.gov.in/sites/default/files/FR-CAPF-20-engl-040122.pdf

ಖಾಲಿ ಇರುವ 187 ಹುದ್ದೆಗಳ ನೇಮಕಕ್ಕೆ ಯುಪಿಎಸ್‌ಸಿ ಅರ್ಜಿ ಆಹ್ವಾನ: ಕೇಂದ್ರ ಲೋಕಸೇವಾ ಆಯೋಗ (Union Publice Service Commission- UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 187 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ  13 ಜನವರಿ 2022 ರೊಳಗೆ ಅರ್ಜಿ ಸಲ್ಲಿಸಬೇಕು. ಖಾಲಿ ಇರುವ ಸಹಾಯಕ ಕಮಿಷನರ್ (Asistant Commissioner), ಸಹಾಯಕ ಇಂಜಿನಿಯರ್ (Assistant Engineer), ಜೂನಿಯರ್ ಟೈಮ್ ಸ್ಕೇಲ್ (Junior Time Scale), ಆಡಳಿತಾಧಿಕಾರಿ (Administrative Officer) ಮತ್ತು ಸಹಾಯಕ ಪ್ರಾಧ್ಯಾಪಕ (Assistant Professor) ಹುದ್ದೆಗಳು ಸೇರಿ ಒಟ್ಟು 187 ಹುದ್ದೆಗಳನ್ನು ಈ ನೇಮಕಾತಿ ಡ್ರೈವ್ನಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು, ಅಧಿಕೃತ ವೆಬ್ಸೈಟ್ upsc.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. 

Follow Us:
Download App:
  • android
  • ios