Asianet Suvarna News Asianet Suvarna News

Job Vacancy: BPCL, OILನಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ

ಭಾರತ್ ಪೆಟ್ರೋಲಿಯಂ ಕಾಪೊರೇಷನ್ (BPLC) ಹಾಗೂ ಆಯಿಲ್ ಇಂಡಿಯಾ ಲಿ.(OIL)ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. BPCL ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 11 ಕೊನೆಯ ದಿನವಾದರೆ, OILನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ ಕೊನೆಯ ದಿನವಾಗಿದೆ. OILನಲ್ಲಿ ಒಟ್ಟು 146 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

BPCL and OIL recruit for various posts and check details
Author
Bengaluru, First Published Nov 17, 2021, 2:21 PM IST

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (Bharath Petrolium Corporation Limited- BPCL) ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.  ಆಪರೇಟರ್, ಟೆಕ್ನಿಷಿಯನ್, ಫೋರ್‌ಮ್ಯಾನ್, ಅಕೌಂಟ್ಸ್ ಅಸಿಸ್ಟೆಂಟ್ -ಹೀಗೆ ಖಾಲಿ ಇರುವ ನಾನ್-ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಬಿಪಿಸಿಎಲ್ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ನ ಅಧಿಕೃತ ವೆಬ್‌ಸೈಟ್ bcplonline.co.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 11 ಕೊನೆಯ ದಿನಾಂಕವಾಗಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (Bharath Petrolium Corporation Limited- BPCL) ಏಕ ಹಂತ ಅಥವಾ ಬಹು ಹಂತದ ಆಯ್ಕೆ ಪ್ರಕ್ರಿಯೆ ಮೂಲಕ ಅರ್ಹ ಅಭ್ಯರ್ಇಯನ್ನು ಆಧರಿಸಿದೆ. ಇನ್ನು ಆಕಾಂಕ್ಷಿಗಳ ಅರ್ಜಿ ಸಂಖ್ಯೆ ದೊಡ್ಡದಾಗಿದ್ದರೆ, ಶಾರ್ಟ್‌ಲಿಸ್ಟ್ ಮಾಡುವ ಮೂಲಕ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ರೂ 21,000 ರಿಂದ ರೂ 23,000 ವರೆಗೆ ಸ್ಟೈಫಂಡ್ ಪಡೆಯಲಿದ್ದಾರೆ. 

ಆಯಿಲ್ ಇಂಡಿಯಾದಲ್ಲಿ 146 ಹುದ್ದೆಗೆ ನೇಮಕಾತಿ
ಕೇಂದ್ರ ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ (Oil India Limited) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಒಟ್ಟು 146 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು  ಅರ್ಹ ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಈಗಾಗಲೇ ಅರ್ಜಿ ಪ್ರಕ್ರಿಯೆ ಶುರುವಾಗಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹದು. ಅರ್ಜಿ ನಮೂನೆಗಳನ್ನು ಸಲ್ಲಿಸಲು ಡಿಸೆಂಬರ್ 9 ಕೊನೆಯ ದಿನಾಂಕವಾಗಿದೆ. ಆಯಿಲ್ ಇಂಡಿಯಾ ಲಿಮಿಟೆಡ್ (Oil India Limited)ನ ಅಧಿಕೃತ ವೆಬ್ಸೈಟ್ oil-india.com ನಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

RBI Internship: ಅರ್ಹರಿಂದ ಅರ್ಜಿ ಆಹ್ವಾನ, ಆಯ್ಕೆಯಾದವರಿಗೆ 20 ಸಾವಿರ ರೂ. ಸ್ಟೈಫಂಡ್

ಇನ್ನು ಕಂಪ್ಯೂಟರ್ ಪರೀಕ್ಷೆ ಮೂಲಕ ಆಯ್ಕೆಯಾದ ಅಭ್ಯರ್ಥಿಗಳನ್ನ ಆಯಿಲ್ ಇಂಡಿಯಾ ಲಿಮಿಟೆಡ್‌(Oil India Limited) ಹುದ್ದೆಗಳಿಗೆ ನಿಯೋಜಿಸಲಿದೆ. ಅಭ್ಯರ್ಥಿಗಳಿಗೆ  ಮಾಸಿಕ 37,500 ರೂ.ನಿಂದ ರೂ 1,45,000 ರೂ.ವರೆಗೂ ವೇತನ ಶ್ರೇಣಿ ಇದೆ.

ಆಯಿಲ್ ಇಂಡಿಯಾ ಲಿಮಿಟೆಡ್ (OIL) ಅಸ್ಸಾಂನ ದಿಬ್ರುಗಢ್, ತಿನ್ಸುಕಿಯಾ, ಶಿವಸಾಗರ್ ಮತ್ತು ಚರೈಡಿಯೊ ಜಿಲ್ಲೆಗಳಲ್ಲಿ ಮತ್ತು ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಗಳಲ್ಲಿ ತನ್ನ ಉತ್ಪಾದನೆ ಮತ್ತು ಪರಿಶೋಧನೆ ಪ್ರದೇಶಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಈ ನೇಮಕಾತಿ ಮಾಡಿಕೊಳ್ಳುತ್ತಿದೆ. ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಪರಿಶೀಲಿಸಬಹುದು. ಅರ್ಜಿ ನಮೂನೆಗಳು OIL ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. 

ಆಯಿಲ್ ಇಂಡಿಯಾ ಲಿಮಿಟೆಡ್‌(Oil India Limited) ನಲ್ಲಿ ಸಂಬಂಧಿತ ವಿಭಾಗದಲ್ಲಿ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪಡೆದಿರುವ ಮತ್ತು ಪೂರ್ಣಗೊಳಿಸಿದ ಮತ್ತು ಕೋಲ್ಕತ್ತಾದ ಪೂರ್ವ ವಲಯದ ಪ್ರಾಕ್ಟಿಕಲ್ ಟ್ರೈನಿಂಗ್ (BOPT) ಬೋರ್ಡ್ ನೀಡಿದ ಪ್ರಾವೀಣ್ಯತೆಯ ಪ್ರಮಾಣಪತ್ರವನ್ನು ಹೊಂದಿರುವ ಡಿಪ್ಲೋಮಾ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ. ಈ ಅಧಿಸೂಚನೆಯಲ್ಲಿ ವಿವಿಧ ವರ್ಗಗಳಿಗೆ OIL ನಲ್ಲಿ ಪಡೆದಿರುವ ಅಪ್ರೆಂಟಿಸ್‌ಶಿಪ್ ತರಬೇತಿ ಅವಧಿಯ ಅವಧಿಗೆ ಗರಿಷ್ಠ ವಯಸ್ಸಿನ ಮಿತಿ ನಿಗದಿಪಡಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.  ಆಯಿಲ್ ಇಂಡಿಯಾ ಲಿಮಿಟೆಡ್‌ ಉದ್ಯೋಗಕ್ಕೆ ಅರ್ಹತೆ ಪಡೆಯಲು ಅಭ್ಯರ್ಥಿಯು 18 ಮತ್ತು 30 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯವಾಗುತ್ತದೆ.

UPSC ಪರೀಕ್ಷೆಯನ್ನು ಎಂಜಿನಿಯರ್‌ಗಳೇ ಯಾಕೆ ಹೆಚ್ಚು ಪಾಸು ಮಾಡೋದು?

ಆಯಿಲ್ ಇಂಡಿಯಾ ಲಿಮಿಟೆಡ್‌(Oil India Limited) , ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಆಧಾರದ ಮೇಲೆ 146 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. "ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (CBT) ಒಳಗೊಂಡಿರುತ್ತದೆ, ಇದರಲ್ಲಿ ಅರ್ಹತಾ ಅಂಕಗಳು SC / ST / ಬೆಂಚ್‌ಮಾರ್ಕ್ ವಿಕಲಾಂಗ ವ್ಯಕ್ತಿಗಳಿಗೆ ಕನಿಷ್ಠ 40% ಅಂಕಗಳು ಮತ್ತು ಇತರರಿಗೆ ಕನಿಷ್ಠ 50% ಅಂಕಗಳನ್ನ ನಿಗದಿಪಡಿಸಲಾಗಿರುತ್ತದೆ. ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಭ್ಯರ್ಥಿಯು ಘೋಷಿಸಿರುವ ಅಂಕಗಳ ಆಧಾರದ ಮೇಲೆ ಅವರನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ (CBT) ಕರೆಯಲಾಗುವುದು ಎಂದು ಅಧಿಸೂಚನೆಯು ತಿಳಿಸಿದೆ.

Follow Us:
Download App:
  • android
  • ios