Asianet Suvarna News Asianet Suvarna News

RBI Internship: ಅರ್ಹರಿಂದ ಅರ್ಜಿ ಆಹ್ವಾನ, ಆಯ್ಕೆಯಾದವರಿಗೆ 20 ಸಾವಿರ ರೂ. ಸ್ಟೈಫಂಡ್

ದೇಶದ ಕೇಂದ್ರ ಬ್ಯಾಂಕ್ ರಿಸರ್ವ್ ಬ್ಯಾಂಕ್ ಇಂಡಿಯಾ (RBI)ದಲ್ಲಿ ಇಂಟರ್ನ್‌ಶಿಪ್‌ ಮಾಡುವ ಅವಕಾಶ ಎದುರಾಗಿದೆ. ಈ ಇಂಟರ್ನ್‌ಶಿಪ್‌ಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 20 ಸಾವಿರ ರೂಪಾಯಿ ಸ್ಟೈಫಂಡ್ ಕೂಡ ಸಿಗಲಿದೆ. ಅರ್ಹರು ಕೂಡಲೇ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

RBI Internship: fresher can also apply and check details
Author
Bengaluru, First Published Nov 13, 2021, 4:05 PM IST
  • Facebook
  • Twitter
  • Whatsapp

ಡಿಗ್ರಿ ಮುಗೀತಾ ಬಂತು, ಮುಂದೇನು ಮಾಡಬೇಕೆಂದು ಯೋಚನೆ ಮಾಡುತ್ತಿದ್ದೀರಾ? ಅಥವಾ ಇಂಟರ್ನ್ಶಿಫ್, ಅಪ್ರೆಂಟಿಸ್ ಅಂತ ಪ್ರತಿಷ್ಟಿತ ಸಂಸ್ಥೆಗಳಿಗೆ ಸೇರುವ ಪ್ಲಾನ್ ಇಟ್ಟುಕೊಂಡಿದ್ದೀರಾ? ಅದರಲ್ಲೂ ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದಂತೆ ಇಂಟರ್ಶಿಪ್ ಮಾಡುವ ಯೋಜನೆ ರೂಪಿಸಿದ್ದರೆ, ನಿಮಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಒಂದೊಳ್ಳೆ ಆಫರ್ ಕೊಡ್ತಾ ಇದೆ ನೋಡಿ. ಬ್ಯಾಂಕಿಂಗ್ ವಲಯವನ್ನು ಅಗಾಧವಾಗಿ ಅರಿಯಲು, ಅಲ್ಲಿಯೇ ಉದ್ಯೋಗ ಕಂಡುಕೊಳ್ಳಲು ಬಯಸುವ ಯುವಕರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India- RBI), ಬೇಸಿಗೆ ಇಂಟರ್ನ್ಶಿಪ್ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಉದ್ಯೋಗವನ್ನು ಹುಡುಕುತ್ತಿರುವ ಯುವ ವಿದ್ಯಾರ್ಥಿಗಳು ಹಾಗೂ ಫ್ರೆಶರ್‌ಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)ಗೆ ಅರ್ಜಿ ಸಲ್ಲಿಸಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI), , ವಾರ್ಷಿಕ ಬೇಸಿಗೆ ಇಂಟರ್ನ್ಶಿಪ್ (Internship) ಕಾರ್ಯಕ್ರಮದಡಿ ಒಟ್ಟು 125 ಇಂಟರ್ನಿ (Internee) ಗಳನ್ನು ನೇಮಕ ಮಾಡಿಕೊಳ್ಳಲಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಡಿಸೆಂಬರ್ 31ರೊಳಗೆ ಅರ್ಜಿ ಸಲ್ಲಿಸಬಹುದು.  ಆಯ್ಕೆಯಾದ ಅಭ್ಯರ್ಥಿಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಾಸಿಕ 20,000 ರೂ. ಸ್ಟೈಫಂಡ್ ನೀಡಲಿದೆ. ಆದ್ರೆ ವಿದ್ಯಾರ್ಥಿಗಳ ಪ್ರಯಾಣ ಭತ್ಯೆ ಮತ್ತು ವಸತಿ ವ್ಯವಸ್ಥೆ ಆರ್ಬಿಐ ಯಾವುದೇ ರೀತಿಯಲ್ಲೂ ಜವಾಬ್ದಾರನಾಗಿರುವುದಿಲ್ಲ.

ಹಣಕಾಸು (Finance), ಅರ್ಥಶಾಸ್ತ್ರ (Economics), ಕಾನೂನು (Law), ಬ್ಯಾಂಕಿಂಗ್‌ (Bangking)ನಲ್ಲಿ ಉನ್ನತ ಶಿಕ್ಷಣವನ್ನು ಅಧ್ಯಯನ ಮಾಡಿದ ಅಥವಾ ಮುಂದುವರಿಸಲು ಸಿದ್ಧರಿರುವ ಯಾವುದೇ ವಿದ್ಯಾರ್ಥಿ ಅಥವಾ ಫ್ರೆಶರ್‌ಗಳು ಡಿಸೆಂಬರ್ 31 ರೊಳಗೆ ಅರ್ಜಿ ಸಲ್ಲಿಸಬಹುದು. 

ದೇಶದಲ್ಲಿ 5 ವರ್ಷದ ಇಂಟಿಗ್ರೇಟೆಡ್ ಕೋರ್ಸ್ (Integrated Course)  ಅಥವಾ ಮ್ಯಾನೇಜ್‌ಮೆಂಟ್ (Management), ವಾಣಿಜ್ಯ (Commerce), ಅಂಕಿಅಂಶ, ಕಾನೂನು (Law), ಅರ್ಥಶಾಸ್ತ್ರ (Economics), ಬ್ಯಾಂಕಿಂಗ್ (Banking), ಹಣಕಾಸು (Finance), ಇಕೊನೊಮೆಟ್ರಿಕ್ಸ್‌ನಲ್ಲಿ ಪದವಿ ಪಡೆಯುತ್ತಿರುವ ಯಾವುದೇ ವಿದ್ಯಾರ್ಥಿ, ಆರ್ಬಿಐ ಇಂಟರ್ನ್ಶಿಪ್ (RBI Intenship) ಗೆ ಅರ್ಜಿ ಸಲ್ಲಿಸಬಹುದು. ಇನ್ನು ಪೂರ್ಣ ಮೂರು ವರ್ಷಗಳ ವೃತ್ತಿಪರ ಡಿಗ್ರಿ (Degree) ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಬೇಸಿಗೆ ಇಂಟರ್ನ್‌ಶಿಪ್‌ಗೆ ಅರ್ಜಿ ಹಾಕಬಹುದು.

BSNL Recruitment: ಡಿಪ್ಲೋಮಾ ಪೂರೈಸಿದವರಿಗೆ ಅಪ್ರೆಂಟಿಸ್ ಜಾಬ್

ಇನ್ನು ಹಣಕಾಸು, ಬ್ಯಾಂಕಿಂಗ್, ಅರ್ಥಶಾಸ್ತ್ರ, ನಿರ್ವಹಣೆ, ಕಾನೂನು ಇತ್ಯಾದಿಗಳಲ್ಲಿ ಭವಿಷ್ಯದ ಅಧ್ಯಯನ ಮಾಡುತ್ತಿರುವ ಯಾವುದೇ ವಿದೇಶಿ ವಿದ್ಯಾರ್ಥಿ ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಶಾರ್ಟ್‌ಲಿಸ್ಟ್ ಮಾಡಿದ ವಿದ್ಯಾರ್ಥಿಗಳನ್ನು 2022ರ ಜನವರಿ ಅಥವಾ ಫೆಬ್ರವರಿಯಲ್ಲಿ ಆರ್ಬಿಐ (RBI) ಕಚೇರಿಗಳಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ.  ಅಂತಿಮ ಫಲಿತಾಂಶವನ್ನು ಫೆಬ್ರವರಿ ಅಥವಾ ಮಾರ್ಚ್ ತಿಂಗಳೊಳಗೆ ಪ್ರಕಟಿಸಲಾಗುತ್ತದೆ. ಆನಂತರ 2022ರ ಏಪ್ರಿಲ್ರಿಂದ ಆರ್ಬಿಐ ಇಂಟರ್ನ್ಶಿಪ್ (RBI Internship) ಕಾರ್ಯಕ್ರಮ ಶುರುವಾಗಲಿದೆ. 

ಆಸಕ್ತ ವಿದ್ಯಾರ್ಥಿಗಳು ಬೇಸಿಗೆ ಇಂಟರ್ನ್‌ಶಿಪ್‌ಗೆ ಆರ್ಬಿಐ (RBI)ನ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ವಿದೇಶಿ ವಿದ್ಯಾರ್ಥಿಗಳು, ಮುಖ್ಯ ಜನರಲ್ ಮ್ಯಾನೇಜರ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾನವ ಸಂಪನ್ಮೂಲ ನಿರ್ವಹಣೆ ಇಲಾಖೆ (ತರಬೇತಿ ಮತ್ತು ಅಭಿವೃದ್ಧಿ ವಿಭಾಗ), ಕೇಂದ್ರ ಕಚೇರಿ, 21 ನೇ ಮಹಡಿ, ಕೇಂದ್ರ ಕಚೇರಿ ಕಟ್ಟಡ, ಶಾಹಿದ್ ಭಗತ್ ಸಿಂಗ್ ರಸ್ತೆ, ಮುಂಬೈ - 400 001 ವಿಳಾಸಕ್ಕೆ ಅರ್ಜಿ ನಮೂನೆಯನ್ನು ಕಳುಹಿಸಬಹುದು ಅಥವಾ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.

Sports Quota Recruitment: ಭಾರತೀಯ ಸೇನೆಗೆ ನ.29ರಿಂದ ನೇಮಕಾತಿ rally

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಅನುಭವಕ್ಕಾಗಿ ಆರ್‌ಬಿಐ ಇಂಟರ್ನ್‌ಶಿಪ್ ಪ್ರೋಗ್ರಾಮ್ ಅತ್ಯುಪಯುಕ್ತವಾಗಿದ್ದು, ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಈ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 31ರೊಳಗೆ ಅರ್ಜಿ ಸಲ್ಲಿಸಬಹುದು.

Follow Us:
Download App:
  • android
  • ios