ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನಲ್ಲಿ ಪ್ರಾಜೆಕ್ಟ್ ಇಂಜಿನಿಯರ್ (17 ಹುದ್ದೆಗಳು, ₹84,000-₹88,000 ವೇತನ) ಮತ್ತು ಪ್ರಾಜೆಕ್ಟ್ ಸೂಪರ್‌ವೈಸರ್ (16 ಹುದ್ದೆಗಳು, ₹45,000-₹48,000 ವೇತನ) ಹುದ್ದೆಗಳು ಖಾಲಿ ಇವೆ. ಡಿಪ್ಲೊಮಾ/ಬಿ.ಇ./ಬಿ.ಟೆಕ್ ವಿದ್ಯಾರ್ಹತೆ ಹೊಂದಿರುವ 21-32 ವರ್ಷ ವಯಸ್ಸಿನ ಅಭ್ಯರ್ಥಿಗಳು ಏಪ್ರಿಲ್ 16, 2025 ರೊಳಗೆ www.bhel.com ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ನೋಡಿ.

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಕಂಪನಿಯಲ್ಲಿ ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಸೂಪರ್‌ವೈಸರ್ ಹುದ್ದೆಗಳು ಸೇರಿ ಒಟ್ಟು 33 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 16, 2025ರ ಕೊನೆ ದಿನವಾಗಿದೆ.

ಖಾಲಿ ಇರುವ ಹುದ್ದೆಗಳ ಮಾಹಿತಿ
ಪ್ರಾಜೆಕ್ಟ್ ಇಂಜಿನಿಯರ್:
ಖಾಲಿ ಹುದ್ದೆಗಳು: 17
ವೇತನ: ತಿಂಗಳಿಗೆ ₹84,000 - ₹88,000
ವಿದ್ಯಾರ್ಹತೆ: ಡಿಪ್ಲೊಮಾ, ಬಿ.ಇ/ಬಿ.ಟೆಕ್
ವಯಸ್ಸಿನ ಮಿತಿ: 21 ವರ್ಷದಿಂದ 32 ವರ್ಷದವರೆಗೆ

ಇಸ್ರೋದಲ್ಲಿ VSSC ನೇಮಕಾತಿ 2025: 16 ಹುದ್ದೆಗಳಿಗೆ ಅರ್ಜಿ ಆಹ್ವಾನ, ಭರ್ಜರಿ ವೇತನ!

ಪ್ರಾಜೆಕ್ಟ್ ಸೂಪರ್‌ವೈಸರ್:
ಖಾಲಿ ಹುದ್ದೆಗಳು: 16
ಸಂಬಳ: ತಿಂಗಳಿಗೆ ₹45,000 - ₹48,000
ವಿದ್ಯಾರ್ಹತೆ: ಡಿಪ್ಲೊಮಾ
ವಯಸ್ಸಿನ ಮಿತಿ: 21 ವರ್ಷದಿಂದ 32 ವರ್ಷದವರೆಗೆ

ವಯೋಮಿತಿ ಸಡಿಲಿಕೆ:
SC/ST: 5 ವರ್ಷಗಳು
OBC: 3 ವರ್ಷಗಳು
PwBD (Gen/EWS): 10 ವರ್ಷಗಳು
PwBD (SC/ST): 15 ವರ್ಷಗಳು
PwBD (OBC): 13 ವರ್ಷಗಳು

ಅರ್ಜಿ ಶುಲ್ಕ:
ST/SC/PWD: ಶುಲ್ಕ ಇಲ್ಲ
ಇತರೆ: ₹200

ಆಯ್ಕೆ ಮಾಡುವ ವಿಧಾನ:
ಮೆರಿಟ್ ಲಿಸ್ಟ್
ನೇರ ಸಂದರ್ಶನ

ಪ್ರಮುಖ ದಿನಾಂಕಗಳು:
ಅಪ್ಲೈ ಮಾಡಲು ಕೊನೆಯ ದಿನಾಂಕ: 16.04.2025

ನೇಮಕಾತಿ ಮಾಡಿಕೊಂಡ ಒಂದೇ ವರ್ಷಕ್ಕೆ 600 ಉದ್ಯೋಗಿಗಳು ವಜಾ, ಟಿಶ್ಯೂ ರೀತಿ ಬಳಸಿಕೊಂಡಿತಾ ಝೊಮೆಟೊ!

ಅಪ್ಲೈ ಮಾಡುವ ವಿಧಾನ:
ಅಪ್ಲೈ ಮಾಡೋರು www.bhel.com ಅಂತರ್ಜಾಲದ ಮೂಲಕ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು. ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿದ ನಂತರ, ಅಪ್ಲಿಕೇಶನ್ ಪ್ರಿಂಟ್ ತಗೊಂಡು ಅದರ ಜೊತೆಗೆ ಬೇಕಾದ ಶುಲ್ಕ ರಸೀದಿಯನ್ನು ಸೇರಿಸಿ, 
AGM/HR, Bharat Heavy Electricals Limited, 
Electronics Division,
 P.B No.2606, Mysore Road, 
Bengaluru – 560026 ಈ ವಿಳಾಸಕ್ಕೆ 19.04.2025ರ ಒಳಗಾಗಿ ಕಳಿಸಬೇಕು.

ಸೂಚನೆ: ಅಪ್ಲೈ ಮಾಡೋಕೆ ಮುಂಚೆ ಆಫೀಸಿಯಲ್ ನೋಟಿಫಿಕೇಶನ್‌ನಲ್ಲಿರೋ ಅರ್ಹತೆಗಳನ್ನ ಚೆಕ್ ಮಾಡ್ಕೊಳ್ಳಿ.
ಈ ಕೆಲಸದ ಬಗ್ಗೆ ಇನ್ನಷ್ಟು ಮಾಹಿತಿ ಬೇಕಂದ್ರೆ, BHELನ ಆಫೀಸಿಯಲ್ ವೆಬ್‌ಸೈಟ್‌ಗೆ ಹೋಗಿ ನೋಡಿ.