ಇಸ್ರೋದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು ಸಹಾಯಕ, ಚಾಲಕ, ಅಗ್ನಿಶಾಮಕ ಸಿಬ್ಬಂದಿ, ಮತ್ತು ಅಡುಗೆಯವರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಹತೆ 10ನೇ ತರಗತಿಯಿಂದ ಪದವಿವರೆಗೆ ಇದ್ದು, ವಯೋಮಿತಿ 18-35 ವರ್ಷಗಳು. ಆಯ್ಕೆಯು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ನಡೆಯುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 15, 2025. ಹೆಚ್ಚಿನ ಮಾಹಿತಿಗಾಗಿ www.vssc.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಡಿಯಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC), ಬೇರೆ ಬೇರೆ ಹುದ್ದೆಗಳಿಗೆ ಕೆಲಸಕ್ಕೆ ಜನರನ್ನು ಕರೆಯುತ್ತಿದೆ. ತಿರುವನಂತಪುರದಲ್ಲಿರುವ ಈ ಸೆಂಟ್ರಲ್ ನಲ್ಲಿ ಸರ್ಕಾರಿ ಹುದ್ದೆಗಳಿಗೆ ಅರ್ಹರಾಗಿರುವವರು ಈ ಕೆಲಸಕ್ಕೆ ಅಪ್ಲೈ ಮಾಡಬಹುದು.

ಕೆಲಸದ ಬಗ್ಗೆ ಮಾಹಿತಿ ಮತ್ತು ವೇತನ:
ಅಸಿಸ್ಟೆಂಟ್‌: 2 ಹುದ್ದೆಗಳು, ಸಂಬಳ: ರೂ. 25,500 - 81,100/-
ಲಘು ವಾಹನ ಚಾಲಕ-ಎ: 5 ಹುದ್ದೆಗಳು, ವೇತನ: ರೂ. 19,900 - 63,200/-
ಭಾರಿ ವಾಹನ ಚಾಲಕ-ಎ: 5 ಹುದ್ದೆಗಳು, ವೇತನ: ರೂ. 19,900 - 63,200/-
ಅಗ್ನಿಶಾಮಕ ದಳದ ಸಿಬ್ಬಂದಿ-ಎ: 3 ಹುದ್ದೆಗಳು, ವೇತನ: ರೂ. 19,900 - 63,200/-
ಅಡುಗೆಯವರು: 1 ಹುದ್ದೆ, ವೇತನ: ರೂ. 19,900 - 63,200/-

ನೌಕಾಪಡೆಯಲ್ಲಿ ವೈದ್ಯಕೀಯ ಸಹಾಯಕ ಹುದ್ದೆಗಳಿಗೆ ನೇಮಕಾತಿ! ದ್ವಿತೀಯ ಪಿಯು ಆದವ್ರು ತಕ್ಷಣ ಅರ್ಜಿ ಸಲ್ಲಿಸಿ

ವಿದ್ಯಾರ್ಹತೆ:
ಸಹಾಯಕ (ರಾಜಭಾಷಾ): 60% ಮಾರ್ಕ್ಸ್ ಜೊತೆ ಡಿಗ್ರಿ, ಹಿಂದಿ ಟೈಪಿಂಗ್ (25 ನಿಮಿಷ), ಕಂಪ್ಯೂಟರ್ ಗೊತ್ತಿರಬೇಕು.
ಲಘು/ಭಾರಿ ವಾಹನ ಚಾಲಕ-ಎ: 10ನೇ ತರಗತಿ ಪಾಸ್, ಲೈಸೆನ್ಸ್ ಇರಬೇಕು, ಅನುಭವ ಇರಬೇಕು.
ಅಗ್ನಿಶಾಮಕ ದಳದ ಸಿಬ್ಬಂದಿ-ಎ: 10ನೇ ತರಗತಿ ಪಾಸ್, ಫಿಸಿಕಲ್ ಫಿಟ್ನೆಸ್ ಇರಬೇಕು.
ಅಡುಗೆಯವರು: 10ನೇ ತರಗತಿ ಪಾಸ್, ಹೋಟೆಲ್/ಕ್ಯಾಂಟೀನ್‌ನಲ್ಲಿ 5 ವರ್ಷ ಕೆಲಸ ಮಾಡಿದ ಅನುಭವ ಇರಬೇಕು.

ವಯೋಮಿತಿ:
ಕೆಲಸಕ್ಕೆ ತಕ್ಕಂತೆ ಬದಲಾಗುತ್ತೆ, ಸಾಮಾನ್ಯವಾಗಿ 18-28/35 ವರ್ಷಗಳು. ಜಾತಿ ಆಧಾರದ ಮೇಲೆ ವಯಸ್ಸಿನಲ್ಲಿ ಸಡಿಲಿಕೆ ಇದೆ.

ಅಪ್ಲಿಕೇಶನ್ ಫೀಸ್:
ಇತರರಿಗೆ ರೂ. 500; ಹೆಂಗಸರು/SC/ST/ಮಾಜಿ ಸೈನಿಕರು/PWD ಅಭ್ಯರ್ಥಿಗಳಿಗೆ ಫೀಸ್ ಇಲ್ಲ.

ಸೆಲೆಕ್ಷನ್ ಹೇಗೆ ಮಾಡ್ತಾರೆ:
ಲಿಖಿತ ಪರೀಕ್ಷೆ, ಸ್ಕಿಲ್ ಟೆಸ್ಟ್, ಫಿಸಿಕಲ್ ಟೆಸ್ಟ್ (PET), ಫುಲ್ ಮೆಡಿಕಲ್ ಚೆಕಪ್ (DME).

ನೇಮಕಾತಿ ಮಾಡಿಕೊಂಡ ಒಂದೇ ವರ್ಷಕ್ಕೆ 600 ಉದ್ಯೋಗಿಗಳು ವಜಾ, ಟಿಶ್ಯೂ ರೀತಿ ಬಳಸಿಕೊಂಡಿತಾ ಝೊಮೆಟೊ!

ಪ್ರಮುಖ ದಿನಾಂಕಗಳು:
ಅಪ್ಲಿಕೇಶನ್ ಶುರು ಆಗೋ ದಿನಾಂಕ: ಏಪ್ರಿಲ್ 1, 2025
ಅಪ್ಲಿಕೇಶನ್ ಹಾಕೋಕೆ ಕೊನೆ ದಿನಾಂಕ: ಏಪ್ರಿಲ್ 15, 2025

ಅಪ್ಲೈ ಮಾಡೋದು ಹೇಗೆ:
VSSC ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ: www.vssc.gov.in