Asianet Suvarna News Asianet Suvarna News

ಬೀದರ್ ನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಅಗ್ನಿಪಥ ರ್‍ಯಾಲಿ, ಆಕಾಂಕ್ಷಿಗಳ ನೋಂದಣಿ ದಾಖಲೆ

ಸೇನೆಗೆ ಸೇರ್ಪಡೆ ಸಂಬಂಧ ಈ ವರ್ಷದ ಕೊನೆಯ ಮತ್ತು ದಕ್ಷಿಣ ಭಾರತದ ಅತಿದೊಡ್ಡ ಅಗ್ನಿಪಥ ರ್‍ಯಾಲಿ ಡಿಸೆಂಬರ್‌ 5 ರಿಂದ 22ರವರೆಗೆ ಬೀದರ್‌ನ ನೆಹರು ಮೈದಾನದಲ್ಲಿ ನಡೆಯಲಿದೆ. ಒಟ್ಟು 70,357 ಆಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದು, ಇದು ದಾಖಲೆ ಎನಿಸಿಕೊಂಡಿದೆ. ಮೊದಲ ದಿನ 2,049 ಅಭ್ಯರ್ಥಿಗಳನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ.

South Indias biggest army recruitment rally at bidar Record 70k Register gow
Author
First Published Dec 6, 2022, 3:51 PM IST

ಬೀದರ್ (ಡಿ.6): ಸೇನೆಗೆ ಸೇರ್ಪಡೆ ಸಂಬಂಧ ಈ ವರ್ಷದ ಕೊನೆಯ ಮತ್ತು ದಕ್ಷಿಣ ಭಾರತದ ಅತಿದೊಡ್ಡ ಅಗ್ನಿಪಥ ರ್‍ಯಾಲಿ ಡಿಸೆಂಬರ್‌ 5 ರಿಂದ 22ರವರೆಗೆ ಬೀದರ್‌ನ ನೆಹರು ಮೈದಾನದಲ್ಲಿ ನಡೆಯಲಿದೆ.  ಬೀದರ್‌ನ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಅಗ್ನಿವೀರರಾಗಲು ಮೊದಲ ದಿನ 2,049 ಅಭ್ಯರ್ಥಿಗಳನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಯಿತು.   ರಾಯಚೂರು ಜಿಲ್ಲೆಯ ಐದು ತಾಲೂಕುಗಳ ಆಕಾಂಕ್ಷಿಗಳು ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿ, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಂದ ಒಟ್ಟು 70,357 ಆಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇವರೆಲ್ಲರನ್ನು ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಬಳಿಕ ಸಾಮಾನ್ಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ. 

ಕಾಮನ್ ಕೇಡರ್, ಟೆಕ್ನಿಕಲ್, ಕ್ಲರ್ಕ್, ಹೌಸ್ ಕೀಪರ್, ಕೇಶ ವಿನ್ಯಾಸಕರು, ಅಡುಗೆಯವರು ಮತ್ತು ಸೈನಿಕ ಹುದ್ದೆಗಳನ್ನು ರ್ಯಾಲಿಯಲ್ಲಿ ಭರ್ತಿ ಮಾಡಲಾಗುತ್ತದೆ. ಅಗ್ನಿಪಥ್ ಯೋಜನೆಯಡಿ ನೇಮಕಾತಿಗಾಗಿ ಇದು ಮೊದಲ ರ್ಯಾಲಿಯಾಗಿದೆ. ಸಾಮಾನ್ಯ ಕೇಡರ್ ಹುದ್ದೆಗಳಿಗೆ ಒಟ್ಟು 63,825 ಅಭ್ಯರ್ಥಿಗಳು ಮತ್ತು ಇತರ ಹುದ್ದೆಗಳಿಗೆ 6,550 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಬೆಳಗಿನ ಜಾವ 4 ಗಂಟೆಗೆ ನಡೆದ ರ್ಯಾಲಿಗೆ ಬೀದರ್ ತಹಶೀಲ್ದಾರ್ ಅಣ್ಣಾರಾವ್ ಪೈಟಲ್, ಬುಡಾ ಆಯುಕ್ತ ಅಭಯಕುಮಾರ್ ಅವರು  ಚಾಲನೆ ನೀಡಿದರು. ಜೊತೆಗೆ  ಅಗತ್ಯ ಸೌಲಭ್ಯಗಳನ್ನು ಒದಗಿಸಿದರು. ಡಿಎಸ್ಪಿ ಸತೀಶ್ ನೇತೃತ್ವದಲ್ಲಿ ಕ್ರೀಡಾಂಗಣಕ್ಕೆ ಪೊಲೀಸ್ ಭದ್ರತೆ ನೀಡಲಾಗಿದೆ. ರ್ಯಾಲಿ ಹಿನ್ನೆಲೆಯಲ್ಲಿ ಪೊಲೀಸರು ಕೆಲ ಮಾರ್ಗಗಳಲ್ಲಿ ಸಂಚಾರ ಮಾರ್ಗ ಬದಲಿಸಿದ್ದಾರೆ.

ಆಯ್ಕೆ ಪ್ರಕ್ರಿಯೆ ಮತ್ತು ದಾಖಲೆಗಳು:
ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಬಳಿಕ ಸಾಮಾನ್ಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ. ಅಭ್ಯರ್ಥಿಗಳು ದಾಖಲೆಗಳ ಮೂಲ ಪ್ರತಿಯೊಂದಿಗೆ ಎರಡು ಪ್ರಮಾಣಿಕರಿಸಿದ ಪೋಟೋ ಕಾಪಿಗಳನ್ನು ರ್‍ಯಾಲಿ ನಡೆಯುವಲ್ಲಿಗೆ ತರಬೇಕು. ತಾತ್ಕಾಲಿಕ ಅಂಕಪಟ್ಟಿಯನ್ನು ಸಲ್ಲಿಸುವುದಾದರೆ ಸಂಸ್ಥೆ ಅಥವಾ ಮಂಡಳಿ, ವಿಶ್ವವಿದ್ಯಾಲಯದದ ಮುಖ್ಯಸ್ಥರ ಸಹಿ ಹೊಂದಿರಬೇಕು. ಆಧಾರ್‌ ಕಾರ್ಡ್‌ ತರಬೇಕು ಎಂದು ತಿಳಿಸಲಾಗಿದೆ.

ದಾನಿಗಳ ಸಹಾಯ-ಸಹಕಾರದಿಂದ ಅಗ್ನಿವೀರರ ನೇಮಕಾತಿ Rally ಯಶಸ್ವಿ

ಅಭ್ಯರ್ಥಿಗಳು ಒಂದು ವಿಭಾಗದಲ್ಲಿ ಮಾತ್ರ ಭಾಗವಹಿಸಬಹುದು. ಒಂದು ವೇಳೆ ಒಂದಕ್ಕಿಂತ ಹೆಚ್ಚು ವಿಭಾಗದಲ್ಲಿ ನೋಂದಾಯಿಸಿಕೊಂಡಿದ್ದರೆ ಅವರನ್ನು ಅನರ್ಹಗೊಳಿಸಲಾಗುವುದು. ಅಭ್ಯರ್ಥಿಗಳು ತಮ್ಮ ನಿಗದಿತ ದಿನಾಂಕದಲ್ಲಿ ನಸುಕಿನ 3.30ರೊಳಗೆ ಆಯ್ಕೆ ರ್‍ಯಾಲಿ ನಡೆಯುವ ಸ್ಥಳದಲ್ಲಿ ಹಾಜರಿರಬೇಕು.

Agnipath recruitment rally: ಬೀದರ: ಇಂದಿನಿಂದ ಭಾರತದ ಬೃಹತ್‌ ಅಗ್ನಿಪಥ್‌ ನೇಮಕ Rally

ಹತ್ತನೇ ತರಗತಿಯ ಅಂಕಪಟ್ಟಿಯಲ್ಲಿ ಇರುವಂತೆಯೇ ಅಭ್ಯರ್ಥಿಯ ಹೆಸರು, ಅಭ್ಯರ್ಥಿಯ ತಂದೆ ಮತ್ತು ತಾಯಿಯ ಹೆಸರು, ಹುಟ್ಟಿದ ದಿನಾಂಕ ನಮೂದಿಸಿರಬೇಕು ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.

ಸೇನೆಯ ನಿರ್ದೇಶನದಂತೆ, ಅಭ್ಯರ್ಥಿಗಳು ನೋಟರಿಯಿಂದ ಪ್ರಮಾಣೀಕರಿಸಿದ 10 ರೂಪಾಯಿಗಳ ಅಫಿಡವಿಟ್ ಅನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಮೊದಲ ದಿನ ಅಫಿಡವಿಟ್ ತರದ ಕಾರಣ 128 ಅಭ್ಯರ್ಥಿಗಳನ್ನು ವಾಪಸ್ ಕಳುಹಿಸಲಾಗಿತ್ತು. 

Follow Us:
Download App:
  • android
  • ios