ಭಾರತೀಯ ಸೇನೆಯು ತಾಂತ್ರಿಕ ಪದವೀಧರರಿಗೆ ಲೆಫ್ಟಿನೆಂಟ್ ಹುದ್ದೆಗಳನ್ನು ನೀಡುತ್ತಿದೆ. ತರಬೇತಿಯ ಸಮಯದಲ್ಲಿ ₹56,100 ಸಂಬಳ, ಉಚಿತ ವಸತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಮೇ 29, 2025 ರೊಳಗೆ ಅರ್ಜಿ ಸಲ್ಲಿಸಬೇಕು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಕಾಯುತ್ತಿದ್ದರೆ ನಿಮಗಿದೋ ಉತ್ತಮ ಅವಕಾಶ ಇಲ್ಲಿದೆ. ಲೆಫ್ಟಿನೆಂಟ್ ಹುದ್ದೆಗೆ ಸೇನೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ತರಬೇತಿಯ ಸಮಯದಲ್ಲಿ ತಿಂಗಳಿಗೆ 56,100 ರೂ, ಉಚಿತ ವಸತಿ, ವೈದ್ಯಕೀಯ ವೆಚ್ಚ ಸೇರಿದಂತೆ ಹಲವು ಪ್ರಯೋಜನಗಳನ್ನು ನೀಡಲಾಗುವುದು. ತಾಂತ್ರಿಕ ಪದವೀಧರ ಅಧಿಕಾರಿಯಾಗಿ ಈ ಹುದ್ದೆಗೆ ಆಹ್ವಾನಿಸಲಾಗಿದ್ದು, ತರಬೇತಿಯನ್ನು ಪೂರ್ಣಗೊಳಿಸಿದ ನಂತರ ನಿಮ್ಮನ್ನು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತದೆ. 29 ಮೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತ ಅರ್ಹರು ಕೂಡಲೇ ಅರ್ಜಿ ಸಲ್ಲಿಸಬಹುದು. ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಆರಂಭದಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಲೆಫ್ಟಿನೆಂಟ್ ಆಗಿ ನೇಮಿಸಿಕೊಳ್ಳಲಾಗುತ್ತದೆ. ಇದರ ಜೊತೆಗೆ, ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ ಸೇರುವ ಆಸೆ ಇದ್ದರೆ ಅದರ ಬಗ್ಗೆಯೂ ಇಲ್ಲಿ ಡಿಟೇಲ್ಸ್​ ನೀಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Operation Sindoor: ರಾಣಿ ಲಕ್ಷ್ಮಿ ಬಾಯಿ ಜತೆ ಸೋಫಿಯಾ ಖುರೇಷಿ ಸಂಬಂಧ! ರೋಚಕ ಇತಿಹಾಸ ತೆರೆದಿಟ್ಟ ಕರ್ನಲ್​


ಉದ್ಯೋಗದ ಹೆಸರು: ತಾಂತ್ರಿಕ ಪದವೀಧರ ಅಧಿಕಾರಿ (ಶಾಶ್ವತ ಆಯೋಗ)

ತರಬೇತಿ: ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ತರಬೇತಿಯನ್ನು ಪೂರ್ಣಗೊಳಿಸಿದ ನಂತರ ನಿಮ್ಮನ್ನು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇರಿಸಲಾಗುತ್ತದೆ.

ಶೈಕ್ಷಣಿಕ ಅರ್ಹತೆ: ಬಿ.ಇ. / ಯಾವುದೇ ಅಧಿಸೂಚಿತ ಶಾಖೆಯಲ್ಲಿ ಬಿ.ಟೆಕ್ (ಅಂತಿಮ ವರ್ಷದ ವಿದ್ಯಾರ್ಥಿಗಳು ಸಹ ಅರ್ಹರು). ಅಭ್ಯರ್ಥಿಗಳು ಜನವರಿ 2026 ರಲ್ಲಿ ಕೋರ್ಸ್ ಪ್ರಾರಂಭವಾಗುವ ಮೊದಲು ಪದವಿಯನ್ನು ಪೂರ್ಣಗೊಳಿಸಿರಬೇಕು. 

ಅರ್ಹತೆ: ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ

ವಯಸ್ಸಿನ ಮಿತಿ: ಜನವರಿ 01, 2026 ರಂತೆ 20 ರಿಂದ 27 ವರ್ಷಗಳ ನಡುವೆ (ಅಂದರೆ, 02 ಜನವರಿ 1999 ಮತ್ತು 01 ಜನವರಿ 2006 ರ ನಡುವೆ ಜನಿಸಿದವರು)

ರಾಷ್ಟ್ರೀಯತೆ: ಭಾರತದ ನಾಗರಿಕರಾಗಿರಬೇಕು ಅಥವಾ ಸರ್ಕಾರಿ ನಿಯಮಗಳ ಪ್ರಕಾರ ಇರಬೇಕು

ಅರ್ಜಿ ಸಲ್ಲಿಸುವ ಸಮಯ: ಇದಾಗಲೇ ಅರ್ಜಿ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಮೇ 2025. (ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ).

ಹೆಚ್ಚಿನ ಮಾಹಿತಿಗೆ ಈ ಲಿಂಕ್​ ಕ್ಲಿಕ್​ ಮಾಡಿ: https://www.joinindianarmy.nic.in/Default.aspx?id=5&lg=eng&

ಪಾಕ್​ನಲ್ಲಿ 7 ವರ್ಷ ಮುಸ್ಲಿಮಾಗಿದ್ದು ಕಿವಿಯಿಂದ ಸಿಕ್ಕಿಬಿದ್ದ 'ಆಪರೇಷನ್​ ಸಿಂದೂರ'ದ ಹೀರೋ ಸ್ಟೋರಿ ಇದು!