ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಸೆ.1ರಿಂದ 17ರವರೆಗೆ ಅಗ್ನಿವೀರ ನೇಮಕಾತಿ ರ್‍ಯಾಲಿ ನಡೆಯುವುದರಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆ ಕಲ್ಪಿಸಿದೆ.

 ಹಾವೇರಿ (ಸೆ.1): ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಸೆ.1ರಿಂದ 17ರವರೆಗೆ ಅಗ್ನಿವೀರ ನೇಮಕಾತಿ ರ್‍ಯಾಲಿ ನಡೆಯುವುದರಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ ವಿಭಾಗದಿಂದ ರ್‍ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಹೆಚ್ಚುವರಿ ಸಾರಿಗೆ ಸೌಲಭ್ಯದ ಅವಶ್ಯಕತೆ ಇದ್ದಲ್ಲಿ ಸ್ಥಳೀಯ ಘಟಕ ವ್ಯವಸ್ಥಾಪಕರನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆ ಸಹಾಯವಾಣಿ 7760991867ನ್ನು ಸಂಪರ್ಕಿಸಬಹುದು ಎಂದು ಸಾರಿಗೆ ಸಂಸ್ಥೆ ಪ್ರಕಟಣೆ ತಿಳಿಸಿದೆ. ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಸೇನಾ ನೇಮಕಾತಿ ಅಧಿಕಾರಿಗಳು ಈಗಾಗಲೇ ಆಗಮಿಸಿ ಸಿದ್ಧತೆ ನಡೆಸಿದ್ದಾರೆ. 58 ಸಾವಿರ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಸೇನೆಗೆ ಸೇರುವ ಯುವಕರ ನಿರೀಕ್ಷೆ ಗರಿಗೆದರಿವೆ. ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲು ಭರದ ಸಿದ್ಧತೆ ನಡೆದಿದೆ. ನೇಮಕಾತಿಯ ವಿವಿಧ ಪರೀಕ್ಷೆಗಳನ್ನು ನಡೆಸಲು ಸೇನಾ ಅಧಿಕಾರಿಗಳು 2 ದಿನಗಳ ಹಿಂದೆಯೇ ಆಗಮಿಸಿ ಅಗತ್ಯ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ನೇಮಕಾತಿ ರ್‍ಯಾಲಿ ಸುಗಮವಾಗಿ ನಡೆಯಲು ಜಿಲ್ಲಾಡಳಿತ ಮುತುವರ್ಜಿ ವಹಿಸಿದ್ದು, 14 ಜಿಲ್ಲೆಗಳಿಂದ ಆಗಮಿಸಲಿರುವ ಅಭ್ಯರ್ಥಿಗಳಿಗೆ ವಸತಿ, ಊಟ ಇತ್ಯಾದಿ ವ್ಯವಸ್ಥೆ ಕಲ್ಪಿಸಲು ಶ್ರಮಿಸುತ್ತಿದೆ. ನೇಮಕಾತಿ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಒಟ್ಟು 58,218 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಸಿದ್ಧತೆ: ಅಗ್ನಿಪಥ್‌ ನೇಮಕಾತಿಗೆ ಜಿಲ್ಲಾಡಳಿತವು ಸಕಲ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ್‌ ರೋಷನ್‌ ಅವರೊಂದಿಗೆ ಸೇನಾ ನೇಮಕಾತಿ ನಿರ್ದೇಶಕ ಕರ್ನಲ್‌ ಅನುಜ್‌ ಗುಪ್ತಾ ಅವರು ನೇಮಕಾತಿ ಸಿದ್ಧತೆಗಳ ಕುರಿತು ಚರ್ಚೆ ನಡೆಸಿದ್ದಾರೆ.

ಅಗ್ನಿವೀರರ ನೇಮಕಾತಿ ರ್‍ಯಾಲಿಗೆ ಕ್ರೀಡಾಂಗಣದಲ್ಲಿ ಮಾರ್ಷಲಿಟಿ, ಅಸೆಂಬಲ್‌, ರನ್ನಿಂಗ್‌, ಔಟ್‌ಗೋಯಿಂಗ್‌, ದೈಹಿಕ ಕಾರ್ಯಕ್ಷಮತೆ, ಮೆಡಿಕಲ್‌ ಏರಿಯಾಗಳ ಮಾರ್ಕಿಂಗ್‌ ವ್ಯವಸ್ಥೆ, ಬ್ಯಾರಿಕೇಡ್‌, ಟೆಂಟ್‌, ಪೊಲೀಸ್‌ ಬಂದೋಬಸ್‌್ತ, ಆ್ಯಂಬುಲೆನ್ಸ್‌, ವೈದ್ಯಕೀಯ, ವಿದ್ಯುತ್‌ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. ಮಳೆಗಾಲವಾಗಿದ್ದರಿಂದ ತಗಡಿನ ಹೊದಿಕೆಯ ಟೆಂಟ್‌ಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಹಾಕಲಾಗುತ್ತಿದೆ.

ನೇಮಕಾತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ವಸತಿ ಸೌಕರ್ಯ, ಮಾಹಿತಿ ನೀಡಲು ಹೆಲ್ಪ್‌ಡೆಸ್ಕ್‌ ಹಾಗೂ ಸಾರಿಗೆ ಸೌಕರ್ಯಕ್ಕಾಗಿ ಸಂಪರ್ಕಿಸಲು ಉಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ವಸತಿ ಸೌಕರ್ಯಕ್ಕಾಗಿ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ(9741746273), ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ(9945257844), ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ(9538706363), ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ(9900873399), ಪರಿಶಿಷ್ಟಪಂಗಡಗಳ ಅಭಿವೃದ್ಧಿ ಇಲಾಖೆ ಅಧಿಕಾರಿ(9632465161), ಮಹರ್ಷಿ ವಾಲ್ಮೀಕಿ ಪರಿಶಿಷ್ಟಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು(8867412236), ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು(9902745227), ಡಾ. ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ (9606721298), ನಗರಸಭೆ ಪರಿಸರ ಅಭಿಯಂತರ (9035451219), ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (9535927093), ತಹಸೀಲ್ದಾರ್‌ (9731569555) ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕ (8310616578)ರನ್ನು ನೇಮಿಸಲಾಗಿದೆ.

ಜಾತಿ, ಧರ್ಮದ ಪ್ರಮಾಣಪತ್ರ ಹಿಂದೆಯೂ ಕೇಳಿದ್ದೆವು, ಅಗ್ನಿಪಥ್‌ ಬಗ್ಗೆ ಸೇನೆಯ ಸ್ಪಷ್ಟನೆ!

ಹೆಲ್ಪ್‌ಡೆಸ್ಕ್‌ ಸ್ಥಾಪನೆ: ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಹೆಲ್ಪ್‌ಡೆಸ್ಕ್‌ ಸ್ಥಾಪಿಸಿ ಮೂರು ಪಾಳೆಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಘಟಕದ ಸಹಾಯಕ ನಿರ್ದೇಶಕ ಆರ್‌.ಎಸ್‌. ಮಾಸೂರ (7019790682) ಬೆಳಗ್ಗೆ 6ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ, ಎಂ.ಸಿ. ಸ್ವಾದಿ(9743052044) ಮಧ್ಯಾಹ್ನ 2ಗಂಟೆಯಿಂದ ರಾತ್ರಿ 10ರ ವರೆಗೆ ಹಾಗೂ ಮಹದೇವಪ್ಪ ಚುಳಕಿ(ಮೊ: 6362209657) ರಾತ್ರಿ 10ಗಂಟೆಯಿಂದ ಬೆಳಗ್ಗೆ 6ರ ವರೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್‌. ಜಗದೀಶ ತಿಳಿಸಿದ್ದಾರೆ.

ನೀವು ವೀರ್‌ ಆಗಿರಬಹುದು, ಅಗ್ನಿವೀರ್‌ ಅಲ್ಲ, ವಿಚಾರಣೆ ವೇಳೆ ವಕೀಲರಿಗೆ ಹೇಳಿದ ಸುಪ್ರೀಂ ಕೋರ್ಟ್‌!

ನಿತ್ಯ 2ರಿಂದ 3 ಸಾವಿರ ಅಭ್ಯರ್ಥಿಗಳ ಪರೀಕ್ಷೆ: ಸೆ. 1ರಂದು ದಕ್ಷಿಣಕನ್ನಡ, ಉಡುಪಿ, ಸೆ. 2, 3 ಮತ್ತು 14ರಂದು ಧಾರವಾಡ ಜಿಲ್ಲೆ ಅಭ್ಯರ್ಥಿಗಳಿಗೆ, ಸೆ. 4ಮತ್ತು 15ರಂದು ಹಾವೇರಿ ಜಿಲ್ಲೆ, ಸೆ. 5ಮತ್ತು 15ರಂದು ಗದಗ ಜಿಲ್ಲೆ, ಸೆ. 6ರಂದು ಉತ್ತರಕನ್ನಡ ಜಿಲ್ಲೆ, ಸೆ. 7ರಿಂದ 9ರವರೆಗೆ ವಿಜಯಪುರ ಜಿಲ್ಲೆ, ಸೆ. 10ರಿಂದ 13ರ ವರೆಗೆ ಬಾಗಲಕೋಟ ಜಿಲ್ಲೆ, ಸೆ. 13ರಂದು ಚಿಕ್ಕಮಗಳೂರ ಜಿಲ್ಲೆ, ಸೆ. 15ರಂದು ದಾವಣಗೆರೆ ಜಿಲ್ಲೆ ಹಾಗೂ ಸೆ. 16ರಂದು ಕ್ಲರ್ಕ್ ಕಂ ಟೆಕ್ನಿಕಲ್‌ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಹಾಗೂ ಸೆ. 17ರಂದು ಟ್ರೇಡ್‌ಮನ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ 8ಮತ್ತು 10ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ನೇಮಕಾತಿ ರ್‍ಯಾಲಿಯಲ್ಲಿ ಭಾಗವಹಿಸಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದೆ.