Asianet Suvarna News Asianet Suvarna News

ನೀವು ವೀರ್‌ ಆಗಿರಬಹುದು, ಅಗ್ನಿವೀರ್‌ ಅಲ್ಲ, ವಿಚಾರಣೆ ವೇಳೆ ವಕೀಲರಿಗೆ ಹೇಳಿದ ಸುಪ್ರೀಂ ಕೋರ್ಟ್‌!


'ಅಗ್ನಿಪಥ್' ಯೋಜನೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿದೆ.
 

when the Supreme Court reprimanded the lawyer says You May Be Veer Not Agniveer san
Author
Bengaluru, First Published Jul 19, 2022, 2:12 PM IST

ನವದೆಹಲಿ (ಜುಲೈ 19): ಸಶಸ್ತ್ರ ಪಡೆಗಳ ಕೇಂದ್ರದ ಹೊಸ ನೇಮಕಾತಿ ಯೋಜನೆಯಾದ 'ಅಗ್ನಿಪಥ್' ಕುರಿತು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಲಘುಧಾಟಿಯ ಹೇಳಿಕೆಯುತೀವ್ರ ವಾದಗಳ ನಡುವೆ ಸುಪ್ರೀಂ ಕೋರ್ಟ್‌ನಲ್ಲಿ ನಗು ತಂದಿದೆ. ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿರುವ ವಕೀಲ ಶರ್ಮಾ ಅವರ ವಾದಗಳಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು ಲಘು ಧಾಟಿಯಲ್ಲಿ, "ನೀವು 'ವೀರ್' ಆಗಿರಬಹುದು. ಆದರೆ ನೀವು 'ಅಗ್ನಿವೀರ್' ಅಲ್ಲ. " ಶರ್ಮಾ ಅವರ ರೋಷಾವೇಷದ ವಾದಗಳ ನಂತರ ಮಾತನಾಡಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು ಹಾಸ್ಯದ ಧಾಟಿಯ ಹೇಳಿಕೆಯ ಬಳಿಕ, ಈ ವಿಚಾರದಲ್ಲಿ ವಕೀಲರು ಬಾಧಿತ ಪಕ್ಷವಲ್ಲ, ಅವರು ಸಲ್ಲಿಸಿರುವುದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಾತ್ರ ಎಂದು ಹೇಳಿದರು. ಶರ್ಮಾ ಅವರು ವ್ಯಾಪಕ ಶ್ರೇಣಿಯ ಸಮಸ್ಯೆಗಳ ಮೇಲೆ ಆಗಾಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸುತ್ತಲೇ ಇರುತ್ತಾರೆ. ನಂತರ ಮಾತನಾಡಿದ  ಶರ್ಮಾ, ನ್ಯಾಯಮೂರ್ತಿ ಚಂದ್ರಚೂಡ್ ಅವರು "ನನ್ನ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ ಎಂದು ಹೇಳಿದರು. 'ಅಗ್ನಿಪಥ' ಯೋಜನೆ ವಿರುದ್ಧ ಮೊಟ್ಟಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದು ನಾನೇ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ ಎಂದರು.

ಮೂರು ಪ್ರತ್ಯೇಕ ಅರ್ಜಿಯ ವಿಚಾರಣೆ: ಶರ್ಮಾ, ಹರ್ಷ್ ಅಜಯ್ ಸಿಂಗ್ ಮತ್ತು ರವೀಂದ್ರ ಸಿಂಗ್ ಶೇಖಾವತ್ ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಸರ್ಕಾರದ ‘ಅಗ್ನಿಪಥ’ ಘೋಷಣೆಯ (Agnipath Scheme) ನಂತರ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಯೋಜನೆಯಡಿಯಲ್ಲಿ, 17.5 ಮತ್ತು 21 ವರ್ಷಗಳ ನಡುವಿನ ಯುವ ಸಮೂಹವನ್ನು ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ನೇಮಿಸಿಕೊಳ್ಳಲಾಗುತ್ತದೆ, ನಂತರ ಹೆಚ್ಚಿನವರಿಗೆ ಗ್ರಾಚ್ಯುಟಿ ಮತ್ತು ಪಿಂಚಣಿ ಪ್ರಯೋಜನಗಳಿಲ್ಲದೆ ಕಡ್ಡಾಯ ನಿವೃತ್ತಿ ನೀಡಲಾಗುತ್ತದೆ. ನಾಲ್ಕು ವರ್ಷಗಳ ನಂತರ 75% ಯೋಧರು ನಿವೃತ್ತರಾಗುತ್ತಾರೆ. 25% ಸೈನಿಕರಿಗೆ ಇನ್ನೂ ಹೆಚ್ಚಿನ ಅವಕಾಶ ನೀಡಲಾಗುವುದು. ನಿವೃತ್ತಿಯಾಗುವ ಸೈನಿಕರಿಗೆ ಬೇರೆಡೆ ಕೆಲಸ ಮಾಡಲು ಸರ್ಕಾರ ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದೆ. ಈ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಇದನ್ನೂ ಓದಿ: ಜಾತಿ, ಧರ್ಮದ ಪ್ರಮಾಣಪತ್ರ ಹಿಂದೆಯೂ ಕೇಳಿದ್ದೆವು, ಅಗ್ನಿಪಥ್‌ ಬಗ್ಗೆ ಸೇನೆಯ ಸ್ಪಷ್ಟನೆ!

ದೆಹಲಿ ಹೈ ಕೋರ್ಟ್‌ಗೆ ವರ್ಗಾವಣೆ: ಎರಡು ವರ್ಷಗಳಿಂದ ವಾಯುಪಡೆಯಲ್ಲಿ ನೇಮಕಾತಿಗಾಗಿ ಕಾಯುತ್ತಿರುವ ಜನರು ತಮ್ಮ 20 ವರ್ಷಗಳ ವೃತ್ತಿಜೀವನವನ್ನು ಈಗ ನಾಲ್ಕು ವರ್ಷಕ್ಕೆ ಇಳಿಯುವ ಭಯದಲ್ಲಿದ್ದಾರೆ ಎಂದು ಉನ್ನತ ನ್ಯಾಯಾಲಯದಲ್ಲಿ ಯೋಜನೆಯನ್ನು ವಿರೋಧಿಸುವ ಅರ್ಜಿಗಳು ವಾದಿಸಿವೆ. ಸುಪ್ರೀಂ ಕೋರ್ಟ್ (Supreme Court) ಇಂದು ಬಾಕಿ ಉಳಿದಿರುವ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದೆಹಲಿ ಹೈಕೋರ್ಟ್‌ಗೆ (Delhi High Court) ವರ್ಗಾಯಿಸಿದೆ. ನ್ಯಾಯಮೂರ್ತಿಗಳಾದ ಚಂದ್ರಚೂಡ್ (DY Chandrachud), ಸೂರ್ಯಕಾಂತ್ ಮತ್ತು ಎಎಸ್ ಬೋಪಣ್ಣ ಅವರ ಪೀಠವು ಕೇರಳ, ಪಂಜಾಬ್ ಮತ್ತು ಹರಿಯಾಣ, ಪಾಟ್ನಾ ಮತ್ತು ಉತ್ತರಾಖಂಡದ ಹೈಕೋರ್ಟ್‌ಗಳಿಗೆ ಯೋಜನೆಯ ವಿರುದ್ಧ ಬಾಕಿ ಇರುವ ಪಿಐಎಲ್‌ಗಳನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಲು ಅಥವಾ ಅರ್ಜಿದಾರರು ಬಯಸಿದರೆ ದೆಹಲಿ ಹೈಕೋರ್ಟ್ ಈ ಕುರಿತಾಗಿ ನಿರ್ಧಾರ ಮಾಡುವವರೆಗೆ ಅವುಗಳನ್ನು ಬಾಕಿ ಇರಿಸುವಂತೆ ಕೇಳಿದೆ.  ನಾಲ್ಕು ಹೈಕೋರ್ಟ್‌ಗಳ ಮುಂದೆ ಅರ್ಜಿದಾರರು ದೆಹಲಿ ಹೈಕೋರ್ಟ್‌ನ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ಆಯ್ಕೆ ಮಾಡಬಹುದು ಎಂದು ಪೀಠ ಹೇಳಿದೆ.

ಇದನ್ನೂ ಓದಿ: IAF Recruitment; ಅಗ್ನಿವೀರರಾಗಲು ವಾಯುಪಡೆಗೆ ದಾಖಲೆಯ 7.5 ಲಕ್ಷ ಅರ್ಜಿ

ತುಷಾರ್‌ ಮೆಹ್ತಾ ವಾದ: ದೆಹಲಿ ಹೈಕೋರ್ಟ್‌ನ ಪರಿಗಣಿತ ದೃಷ್ಟಿಕೋನದ ಪ್ರಯೋಜನವನ್ನು ಹೊಂದಿದ್ದಲ್ಲಿ ಅದು ಸೂಕ್ತವಾಗಿರುವುದರಿಂದ ಅರ್ಜಿಗಳನ್ನು ವರ್ಗಾಯಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಅಗ್ನಿಪಥ್ ಯೋಜನೆ ವಿರುದ್ಧ ವಿವಿಧ ಹೈಕೋರ್ಟ್‌ಗಳಲ್ಲಿ 6 ಅರ್ಜಿಗಳನ್ನು ಸಲ್ಲಿಸಲಾಗಿದೆ. ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಒಂದೇ ಸ್ಥಳದಲ್ಲಿ ನಡೆಸುವುದು ಉತ್ತಮ. ಈ ಕುರಿತು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ನೀವು ವರ್ಗಾವಣೆ ಅರ್ಜಿ ಸಲ್ಲಿಸಿ, ನಾವು ಎಲ್ಲಾ ಅರ್ಜಿಗಳನ್ನು ಹೈಕೋರ್ಟ್‌ಗೆ ವಿಚಾರಣೆಗೆ ಕಳುಹಿಸುತ್ತೇವೆ ಎಂದರು.

Follow Us:
Download App:
  • android
  • ios