ಇಸ್ಲಾಂನಲ್ಲಿ ಜನರ ನಗಿಸೋದು ನಿಷೇಧ ಎಂದು ಹಾಸ್ಯನಟನ ಗಂಟಲು ಸೀಳಿದ್ರು
- ಜನರನ್ನು ನಗಿಸಿದ್ದೇ ತಪ್ಪಾಯ್ತು..!
- ಥಳಿಸಿ ಮರಕ್ಕೆ ಕಟ್ಟಿ ಗಂಟಲು ಸೀಳಿದ್ರು
- ವೈರಲ್ ವಿಡಿಯೋದಲ್ಲಿರೋ ಹಾಸ್ಯನಟನ ಕೊಂದ ತಾಲೀಬಾನ್ ಉಗ್ರರು
ದೆಹಲಿ(ಜು.28): ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಆಘಾತಕಾರಿ ವಿಡಿಯೋವೊಂದರಲ್ಲಿ, ಖಶಾ ಜ್ವಾನ್ ಎಂದೇ ಖ್ಯಾತರಾದ ಅಫ್ಘಾನಿಸ್ತಾನದ ಜನಪ್ರಿಯ ಹಾಸ್ಯನಟ ನಜರ್ ಮೊಹಮ್ಮದ್ ಅವರನ್ನು ಅಪರಿಚಿತ ಬಂದೂಕುಧಾರಿಗಳು ಕೊಲ್ಲುವ ಮುನ್ನ ಗನ್ ಪಾಯಿಂಟ್‌ನಲ್ಲಿ ಕಪಾಳಮೋಕ್ಷ ಮತ್ತು ಕಿರುಕುಳ ನೀಡಿದ್ದು ಕಂಡು ಬಂದಿದೆ.
ಜುಲೈ 27 ಇರಾನ್ ಇಂಟರ್‌ನ್ಯಾಷನಲ್‌ನ ಹಿರಿಯ ವರದಿಗಾರ ತಾಜುಡೆನ್ ಸೊರೌಶ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಉಗ್ರನೊಬ್ಬ ಬಂದೂಕು ತೋರಿಸಿ ಖಶಾನ ಕೆನ್ನೆಗೆ ಬಾರಿಸುತ್ತಾನೆ. ಸೋಷಿಯಲ್ ಮೀಡಿಯಾ ಪೋಸ್ಟ್ ಪ್ರಕಾರ, ಕಂದಹರಿ ಹಾಸ್ಯನಟನನ್ನು ಉಗ್ರಗಾಮಿ ಗುಂಪು ಬಂಧಿಸಿ ಕೊನೆಯ ಕ್ಷಣವನ್ನು ವೀಡಿಯೊ ಸೆರೆ ಮಾಡಿದೆ. ಹಾಸ್ಯನಟನನ್ನು ತಾಲಿಬಾನ್ ಕೊಂದಿದ್ದಾರೆ ಎಂದು ಸೊರೊಶ್ ತನ್ನ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಕಂದಹಾರ್ ಪೊಲೀಸ್‌ನಲ್ಲಿ ಕೆಲಸ ಮಾಡಿದ ಜನಪ್ರಿಯ ಹಾಸ್ಯನಟನನ್ನು ಗುರುವಾರ ರಾತ್ರಿ ಬಲವಂತವಾಗಿ ಆತನ ಮನೆಯಿಂದ ಹೊರಗೆ ಕರೆದೊಯ್ಯಲಾಯಿತು. ಅಪರಿಚಿತ ಬಂದೂಕುಧಾರಿಗಳು ಆತನನ್ನು ಕೊಂದಿದ್ದಾರೆ.
ಸತ್ತ ಮೇಲೂ ಸಿದ್ದಿಕಿ ತಲೆ ಮೇಲೆ ವಾಹನ ಹರಿಸಿದ್ದ ತಾಲಿಬಾನಿಗಳು!
ಹಾಸ್ಯನಟನ ಕುಟುಂಬವು ಈ ದಾಳಿಗೆ ತಾಲಿಬಾನ್ ಅನ್ನು ದೂಷಿಸಿದರೆ ಇಸ್ಲಾಮಿಸ್ಟ್ ಗುಂಪು ಇದರಲ್ಲಿ ತಮ್ಮ ಕೈವಾಡವನ್ನು ನಿರಾಕರಿಸಿತು. ಅಮೆರಿಕ ಪಡೆಗಳನ್ನು ಅಫ್ಘಾನಿಸ್ತಾನದಿಂದ ಹಿಂಪಡೆದ ನಂತರ ದೇಶದ ಭದ್ರತಾ ಪರಿಸ್ಥಿತಿ ಹದಗೆಟ್ಟಿದೆ. ಅಫ್ಘಾನ್ ಭದ್ರತಾ ಪಡೆಗಳ ವಿರುದ್ಧ ತಾಲಿಬಾನ್ ದಾಳಿ ತೀವ್ರಗೊಳಿಸಿದೆ.
ಇದು ದೇಶದ ಸುಮಾರು 70 ರಷ್ಟು ಭಾಗವನ್ನು ವಶಪಡಿಸಿಕೊಂಡಿದದು, ಈದ್ ಆಚರಣೆಯ ನಂತರ ಭಯೋತ್ಪಾದಕ ಗುಂಪು ಅಫ್ಘಾನ್ ಮೇಲೆ ಆಕ್ರಮಣವನ್ನು ತೀವ್ರಗೊಳಿಸಿದೆ.