ಸತ್ತ ಮೇಲೂ ಸಿದ್ದಿಕಿ ತಲೆ ಮೇಲೆ ವಾಹನ ಹರಿಸಿದ್ದ ತಾಲಿಬಾನಿಗಳು!
* ಆಫ್ಫನ್‌ನಲ್ಲಿ ಪುಲಿಟ್ಜರ್ ಪುರಸ್ಕೃತನ ಭೀಕರ ಹತ್ಯೆ
* ಸತ್ತ ಮೇಲೂ ಸಿದ್ದಿಕಿ ತಲೆ ಮೇಲೆ ವಾಹನ ಹರಿಸಿದ್ದ ತಾಲಿಬಾನಿಗಳು
* ಭಾರತೀಯ ಎಂದು ಗೊತ್ತಾದ ಬಳಿಕ ಪಾತಕೀ ಕೃತ್ಯ
ನವದೆಹಲಿ(ಜು.22): ಇತ್ತೀಚೆಗೆ ಆಷ್ಘಾನಿಸ್ತಾನದಲ್ಲಿ ಹತರಾದ ಪುಲಿಟ್ಜರ್ ಪುರಸ್ಕೃತ ಭಾರತೀಯ ಫೋಟೋ ಜರ್ನಲಿಸ್ಟ್ ಡ್ಯಾನಿಷ್ ಸಿದ್ದಿಕಿಯನ್ನು ತಾಲಿಬಾನಿ ಉಗ್ರರು ಅತ್ಯಂತ ಭೀಕರವಾಗಿ ಹತ್ಯೆಗೈದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ ಭರತೀಯರ ಕುರಿತ ತಾಲಿಬಾನಿಗಳ ದ್ವೇಷವನ್ನು ಘಟನೆ ಎತ್ತಿ ತೋರಿಸಿದೆ.
ಅಫ್ಘಾನಿಸ್ತಾನ: ರಾಷ್ಟ್ರವೊಂದರ ಅಸ್ಥಿರತೆ, ಇಡೀ ವಿಶ್ವದ ಮೇಲೆ ಪ್ರಭಾವ!
ಸಿದ್ದಿಕಿಯನ್ನು ಹತ್ಯೆ ಮಾಡಿದ ಬಗ್ಗೆ ಆಷ್ಘಾನಿಸ್ತಾನ ಸೇನೆಯ ಕಮಾಂಡರ್ ಒಬ್ಬರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎಂದು ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಸ್ಪಿನ್ ಬೊಲ್ಡಾಕ್ ಪಟ್ಟಣದಲ್ಲಿ ಸೇನೆ ಮತ್ತು ಉಗ್ರರ ನಡುವಿನ ಕಾದಾಟವನ್ನು ಸಿದ್ದಿಕಿ ವರದಿ ಮಾಡುತ್ತಿದ್ದರು. ಈ ವೇಳೆ ತಾಲಿಬಾನಿ ಉಗ್ರರು ಸಿದ್ದಿಕಿ ಮತ್ತು ಆಷ್ಘಾನಿಸ್ತಾನದ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದರು.
ಅಪ್ಘಾನಿಸ್ತಾನದಲ್ಲಿ ತಾಲಿಬಾನಿಯರ ಅಟ್ಟಹಾಸ, ಅಮೆರಿಕದ ಸೇನೆ ಸೋತಿದ್ದೇಕೆ?
ಬಳಿಕ ಸಿದ್ದಿಕಿ ಭಾರತೀಯ ಎಂದು ಆತನ ಬಳಿ ಇದ್ದ ದಾಖಲೆಗಳಿಂದ ಪತ್ತೆಯಾದ ಬಳಿಕ ಆತನ ತಲೆಯ ಮೇಲೆ ವಾಹನವನ್ನು ಹರಿಸಿ ಸಂಭ್ರಮಿಸಿದ್ದರು ಎಂದು ಕಮಾಂಡರ್ ಬಿಲಾಲ್ ಅಹಮದ್ ಆಂಗ್ಲ ಸುದ್ದಿವಾಹಿನಿಗೆ ನೀಡಿದ ಮಾಹಿತಿ ತಿಳಿಸಿದ್ದಾರೆ. ಆದರೆ ಇಷ್ಟೆಲ್ಲಾ ಪಾತಕೀ ಕೃತ್ಯದ ಹೊರತಾಗಿಯೂ ಘಟನೆಯಲ್ಲಿ ತಮ್ಮ ಕೈವಾಡವಿಲ್ಲ ಎಂದು ತಾಲಿಬಾನಿ ವಕ್ತಾರರು ಹೇಳಿಕೊಂಡಿದ್ದಾರೆ.