ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಹಾಗೂ ಎರಡು ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಚಿತ್ರ ಭಾರತಿ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿರುವ ಮಲಯಾಳಂ ಚಿತ್ರ ನಿರ್ದೇಶಕ ಸಜೀನ್‌ ಬಾಬು ಸಂದರ್ಶನ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಹಾಗೂ ಎರಡು ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಚಿತ್ರ ಭಾರತಿ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿರುವ ಮಲಯಾಳಂ ಚಿತ್ರ ನಿರ್ದೇಶಕ ಸಜೀನ್‌ ಬಾಬು ಸಂದರ್ಶನ.

* ಚಿತ್ರೋತ್ಸವದ ಬಗ್ಗೆ ನಿಮ್ಮ ಅನಿಸಿಕೆ ಏನು?
ಇದು ತುಂಬಾ ಪ್ರತಿಷ್ಠೆಯ ಚಿತ್ರೋತ್ಸವ. ಪ್ರತೀ ವರ್ಷ ಸುಂದರವಾಗಿ ಆಯೋಜಿಸುತ್ತಾರೆ. ಹೀಗಾಗಿಯೇ ನಾನು ಪ್ರತೀ ವರ್ಷ ಬರುತ್ತಿದ್ದೇನೆ.

* ಕರ್ನಾಟಕ ಮತ್ತು ಕೇರಳ ಚಿತ್ರರಂಗದ ನಡುವೆ ನೀವು ಗಮನಿಸಿದ ವ್ಯತ್ಯಾಸಗಳೇನು?
ಕೇರಳದಲ್ಲಿ ಸಿನಿಮಾ ಒಂದು ಮೂಮೆಂಟ್‌ ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಆದರೆ, ಕರ್ನಾಟಕದಲ್ಲಿ ನೆಲದ ಸಂಸ್ಕೃತಿಯ ಸಿನಿಮಾಗಳು ಹೆಚ್ಚಾಗಿ ಬಂದಿವೆ. ಇಲ್ಲಿ ಸಿನಿಮಾ ಚ‍ಳವಳಿಯ ರೂಪ ಪಡೆಯಲಿಲ್ಲ. 

ಚಿತ್ರೋತ್ಸವಕ್ಕೆ ಆಹ್ವಾನ ಬಂದಿಲ್ಲ, ನಾನು ಹೋಗುವುದಿಲ್ಲ: ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ

* ಕೇರಳದಲ್ಲಿ ನಡೆಯುವ ಚಿತ್ರೋತ್ಸವಗಳ ಬಗ್ಗೆ ಅಲ್ಲಿನ ಸ್ಟಾರ್‌ ನಟರು ಪಾಲ್ಗೊಳ್ಳುವಿಕೆ, ಅಭಿಪ್ರಾಯಗಳು ಹೇಗಿರುತ್ತವೆ?
ಮಮ್ಮುಟ್ಟಿ, ಮೋಹನ್‌ ಲಾಲ್‌ ರೀತಿಯ ಸ್ಟಾರ್‌ ನಟರು ಚಿತ್ರೋತ್ಸವಗಳಲ್ಲಿ ಭಾಗವಹಿಸುತ್ತಾರೆ. ಮಮ್ಮುಟ್ಟಿ ಅವರು ಪ್ಯಾಲರಲ್‌ ಚಿತ್ರಗಳಲ್ಲಿ ನಟಿಸುತ್ತಾರೆ. ಆ ಚಿತ್ರಗಳಿಗೆ ರೆಗ್ಯೂಲರ್‌ ಸಿನಿಮಾಗಳಿಗಿಂತ ಕಡಿಮೆ ಸಂಭಾವನೆ ತೆಗೆದುಕೊಳ್ಳುತ್ತಾರೆ. ಮಮ್ಮುಟ್ಟಿ ಮಾತ್ರವಲ್ಲ, ಅಲ್ಲಿನ ಸ್ಟಾರ್‌ ಹೀರೋಗಳು ಕತೆ ಇಷ್ಟವಾದರೆ ಪ್ಯಾರಲಲ್‌ ಚಿತ್ರಗಳಲ್ಲಿ ನಟಿಸುತ್ತಾರೆ. ಇಲ್ಲೂ ಸ್ಟಾರ್ ನಟರು ಪ್ಯಾರಲಲ್ ಚಿತ್ರಗಳಲ್ಲಿ ನಟಿಸಬೇಕು ಎಂಬುದು ನನ್ನ ಅನಿಸಿಕೆ.

* ಮಲಯಾಳಂ ಚಿತ್ರಗಳು ಬೆಂಗಳೂರು ಆಧರಿತ ಕತೆಗಳನ್ನು ಹೆಚ್ಚು ಒಳಗೊಳ್ಳುತ್ತಿವೆಯಲ್ಲ?
ಬೆಂಗಳೂರು ಹಲವು ಭಾಷೆ, ಆಚಾರಗಳನ್ನು ಒಳಗೊಂಡ ನಗರ. ಎಜುಕೇಷನ್‌ ಮುಗಿದ ಮೇಲೆ ಎಲ್ಲರೂ ಬೆಂಗಳೂರಿಗೆ ಬರುತ್ತಿದ್ದಾರೆ. ಮಲಯಾಳಂನ ಆವೇಶಂ, ರೋಮಾಂಚನಂನಂತಹ ಚಿತ್ರಗಳು ಬೆಂಗಳೂರಿನಿಂದಲೇ ಹುಟ್ಟಿಕೊಂಡಿದ್ದು.